ರಾಸಲೀಲೆ ಅಶ್ಲೀಲ ವೀಡಿಯೊ ರಷ್ಯಾದಿಂದಲೇ ಅಪ್ಲೋಡ್ ಮಾಡಿದ ಹ್ಯಾಕರ್ ಮನೆ ಮೇಲೆ ದಾಳಿ

Team Newsnap
1 Min Read

ರಮೇಶ್ ಜಾರಕಿಹೊಳಿಯ ಸಿಡಿಯನ್ನು ರಷ್ಯಾದಲ್ಲಿ ಅಪ್ಲೋಡ್ ಮಾಡಿರುವ ಹ್ಯಾಕರ್ ನ ಸಹೋದರ ನಿವಾಸದ ಮೇಲೆ ಎಸ್ ಐಟಿ ಟೀಂ ದಾಳಿ ಮಾಡಿದೆ.

ಬೆಂಗಳೂರಿನ ದೇವನಹಳ್ಳಿಯ ವಿಜಯಪುರದಲ್ಲಿರುವ ಹ್ಯಾಕರ್ ತಮ್ಮನ ಮೇಲೆ ದಾಳಿ ಮಾಡಿರುವ ಎಸ್ಐಟಿ ತಂಡ, ಆತನ ಮನೆಯಲ್ಲಿದ್ದ ಹಾರ್ಡ್ ಡಿಸ್ಕ್, ಕಂಪ್ಯೂಟರ್ ಲ್ಯಾಪ್ ಟಾಪ್, ಪೆನ್ ಡ್ರೈವ್ ಸೇರಿದಂತೆ ಕೆಲವು ತಾಂತ್ರಿಕ ವಸ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ.

ಈ ವ್ಯಕ್ತಿಯೇ ರಮೇಶ್ ಜಾರಕಿಹೊಳಿಯ ಸಿಡಿಯ ರಾಸಲೀಲೆ ದೃಶ್ಯಗಳನ್ನು ಎಪಿ ಅಡ್ರೆಸ್ ಬಳಸಿ ರಷ್ಯಾದ ಮಾಸ್ಕೊದಲ್ಲಿ ಅಪ್ಲೋಡ್ ಮಾಡಿದ್ದಾನೆ ಎಂದು ಆತನ ವಿಚಾರಣೆ ವೇಳೆ ತಿಳಿದು ಬಂದಿದೆ.

ಈತ ಹಾಗೂ ಈತನ ಅಣ್ಣ ಇಬ್ಬರು ಹ್ಯಾಕರ್ ಗಳಾಗಿದ್ದಾರೆ.
ಎಸ್ಐಟಿ ಟೀಂನವರು ನಿನ್ನೆ ಪತ್ರಕರ್ತರು ಸೇರಿದಂತೆ ಸುಮಾರು ಹತ್ತ ಜನರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಇವರಲ್ಲಿ ಸರ್ಕಾರಿ ನೌಕರಿಯಲ್ಲಿರುವ ರಾಮನಗರದ ಯುವತಿ ಸೇರಿದಂತೆ ಐವರನ್ನು ವಶದಲ್ಲಿ ಇಟ್ಟುಕೊಂಡು ವಿಚಾರಣೆ ಮುಂದುವರೆಸಿದ್ದಾರೆ.

ಈ ಐವರ ವಿಚಾರಣೆ ವೇಳೆ ಹೊರ ಬರುವ ಮಾಹಿತಿ ಕಲೆ ಹಾಕಿ ಎಸ್ಐಟಿ ಟೀಂ ಮತ್ತಷ್ಟು ಜನರನ್ನು ಖೆಡ್ಡಾಗಿ ಬೀಳಿಸುವುದಂತೂ ನಿಶ್ಚಿತ.

Share This Article
Leave a comment