ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣ – ಇನ್ನೂ ವೆಂಟಿಲೇಟರ್‌ನಲ್ಲಿ ಶಾರೀಕ್: 8 ಮಂದಿ ತಜ್ಞ ವೈದ್ಯರಿಂದ ನಿಗಾ

Team Newsnap
1 Min Read
Mangaluru cooker blast case - Shareek still on ventilator: Monitored by 8 specialist doctors ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣ - ಇನ್ನೂ ವೆಂಟಿಲೇಟರ್‌ನಲ್ಲಿ ಶಾರೀಕ್: 8 ಮಂದಿ ತಜ್ಞ ವೈದ್ಯರಿಂದ ನಿಗಾ

ಮಂಗಳೂರಿನ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದ ಆರೋಪಿ ಉಗ್ರ ಶಾರೀಕ್ ಗೆ ಅಸ್ಪತ್ರೆಯಲ್ಲಿ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಎಂಟು ಮಂದಿ ತಜ್ಞ ವೈದ್ಯರು ದಿನದ 24 ಗಂಟೆ ನಿಗಾ ವಹಿಸಿದ್ದಾರೆ.

ಶಾರೀಕ್ ಆರೋಗ್ಯ (Shariq Health) ಸ್ಥಿತಿ ಬಿಗಡಾಯಿಸುತ್ತಿದೆ. ಕುಕ್ಕರ್ ಬಾಂಬು ಸ್ಫೋಟದ ( Cooker bomb Blast ) ವೇಳೆ ಭಾರೀ ಪ್ರಮಾಣದ ಹೊಗೆ ಕಂಡುಬಂದಿತ್ತು. ಸ್ಪೋಟದ ಹೊಗೆ ಶಾರೀಕ್ ಶ್ವಾಸಕೋಶದಲ್ಲಿ ತುಂಬಿಕೊಂಡ ಕಾರಣ ವಿಶೇಷ ಚಿಕಿತ್ಸೆ ನೀಡಲಾಗುತ್ತಿದೆ.ಪುಣೆಯಲ್ಲಿ ಪುಂಡಾಟ ಮರೆದ ಮಾರಾಠಿಗರು: KSRTC ಬಸ್‌ಗೆ ಕಪ್ಪು ಮಸಿ ಬಳಿದು

ಸ್ಪೋಟದ ವೇಳೆ ಕುಕ್ಕರ್ ನ ಮುಚ್ಚಳ ಕುತ್ತಿಗೆಗೆ ಬಡಿದು ಗಂಭೀರ ಗಾಯಗಳಾಗಿವೆ. ಹೀಗಾಗಿ ಕುತ್ತಿಗೆಯ ಗಾಯಗಳಿಗೆ ವೈದ್ಯರ ತಂಡ ವಿಶೇಷ ಚಿಕಿತ್ಸೆ ನೀಡುತ್ತಿದೆ. ಇನ್ನು ಮೂರು ವಾರಗಳ ಕಾಲ ಚಿಕಿತ್ಸೆ ಮುಂದುವರಿಯುವ ಸಾಧ್ಯತೆ ಇದೆ.

ಶಾರೀಕ್ ಚಿಕ್ಕ ಪ್ರಾಯವಾಗಿರುವುದರಿಂದ ಚಿಕಿತ್ಸೆಗೆ ಅನುಕೂಲವಾಗುತ್ತಿದೆ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.

Share This Article
Leave a comment