January 28, 2026

Newsnap Kannada

The World at your finger tips!

praveen aloka

ಬಿಜೆಪಿ ನಾಯಕ ಪ್ರವೀಣ್ ಹತ್ಯೆ : ಮಂಗಳೂರು ಪೊಲೀಸರಿಂದ 15 ಶಂಕಿತರು ವಶಕ್ಕೆ

Spread the love

ಮಂಗಳವಾರ ಸಂಜೆ ಬಿಜೆಪಿ ಮುಖಂಡ ಪ್ರವೀಣ್ ಹತ್ಯೆ ಪ್ರಕರಣ ಸಂಬಂಧಿಸಿದಂತೆ ಮಂಗಳೂರು ಪೊಲೀಸರಿಂದ 15 ಶಂಕಿತರು ವಶಕ್ಕೆ ಪಡೆಯಲಾಗಿದೆ.

ಬೆಳ್ಳಾರೆಯಲ್ಲೇ 15 ಮಂದಿ ವಶಕ್ಕೆ ಪಡೆದಿದ್ದಾರೆ. ಹತ್ಯೆಗೆ ಸಂಬಂಧಿಸಿದಂತೆ 15 ಮಂದಿ ತೀವ್ರ ವಿಚಾರಣೆ ನಡೆಸಲಾಗುತ್ತಿದೆ ಎಂದು ಎಡಿಜಿಪಿ ಅಲೋಕ್‌ ಕುಮಾರ್‌ ಮಾಹಿತಿ ನೀಡಿದರು .

ಸುಳ್ಯದಲ್ಲಿ ಬಿಜೆಪಿ ಮುಖಂಡ ಪ್ರವೀಣ್​​ ನೆಟ್ಟಾರು ಬರ್ಬರ ಹತ್ಯೆ : ಉದ್ವಿಗ್ನ ಸ್ಥಿತಿ

ಬರ್ಬರವಾಗಿ ಹತ್ಯೆಗೊಂಡ ಪ್ರವೀಣ್ ಫಾರ್ಥಿವ ಶರೀರವನ್ನು ಪುತ್ತೂರಿನಿಂದ ಬೆಳ್ಳಾರೆ ಪೇಟೆಗೆ ಮೆರವಣೆಗೆ ಮಾಡುವ ಮೂಲಕ ತೆಗೆದುಕೊಂಡು ಹೋಗಲಾಯಿತು.

ಸ್ಥಳೀಯನೊಬ್ಬ ಪ್ರವೀಣ್ ಚಲನವಲನದ ಬಗ್ಗೆ ಮಾಹಿತಿ ನೀಡಿದ್ದಾನೆ. ಸ್ಥಳೀಯರೊಬ್ಬರ ಸಹಾಯದಿಂದಲೇ ಹತ್ಯೆಯಾಗಿದೆ ಎಂಬ ಮಾಹಿತಿ ಲಭಿಸಿದೆ.

ಪೊಲೀಸರು ಪ್ರತ್ಯೇಕವಾಗಿ 8 ಜನರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಶಂಕಿತರ ಮಾಹಿತಿಯ ಬಳಿಕ ಹತ್ಯೆ ಮಾಡಿದವರು ಸ್ಥಳೀಯರು ಎಂದು ತಿಳಿದುಬಂದಿದ್ದು, ಬೇರೆ ರಾಜ್ಯದವರೇ ಎಂಬುದು ತಿಳಿಯಬೇಕಿದೆ. ಒಬ್ಬ ಮಾತ್ರ ಸ್ಥಳೀಯವಾಗಿ ಸಹಾಯ ಮಾಡಿದ್ದು ದೃಢವಾಗಿದೆ.

error: Content is protected !!