ಆನೆ ಕೊಂದ ಆರೋಪಿಗಳಿಗೆ ಪ್ರಜ್ವಲ್​ ರೇವಣ್ಣ ರಕ್ಷಣೆ ಮನೇಕಾ ಗಾಂಧಿ ಗಂಭೀರ ಆರೋಪ- ಸಿಎಂಗೆ ಪತ್ರ

Team Newsnap
2 Min Read
Maneka Gandhi's defense of Prajwal Revanna to the accused of killing an elephant - letter to CM ಆನೆ ಕೊಂದ ಆರೋಪಿಗಳಿಗೆ ಪ್ರಜ್ವಲ್​ ರೇವಣ್ಣ ರಕ್ಷಣೆ ಮನೇಕಾ ಗಾಂಧಿ ಗಂಭೀರ ಆರೋಪ- ಸಿಎಂಗೆ ಪತ್ರ #Thenewsnap #Latestnews #india #smuggling #banglore #Mandya #Mysuru
WhatsApp Image 2022 07 19 at 9.07.42 AM

ಬಿಜೆಪಿ ಸಂಸದೆ ಮನೇಕಾ ಗಾಂಧಿ ಸಿಎಂ ಬೊಮ್ಮಾಯಿಗೆ ಪತ್ರ ಬರೆದು ಹಾಸನದಲ್ಲಿ ಕಳೆದ ಮಾರ್ಚ್ ನಲ್ಲಿ ನಡೆದ ಆನೆಯ ಹತ್ಯೆ ಮತ್ತು ಆನೆ ದಂತ ಪ್ರಕರಣದಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣನವರ ಬೆಂಬಲಿಗರ ಪಾತ್ರ ಇದೆ. ಸಂಸದ ಪ್ರಜ್ವಲ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು.


ಪ್ರಭಾವ ಬೀರಿ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ನಡೆಸಿದ್ದಾರೆ. ಈ ಬಗ್ಗೆ ಕ್ರಮ ಜರುಗಿಸುವಂತೆ ಸಿಎಂ ಬೊಮ್ಮಾಯಿ ಅವರಲ್ಲಿ ಒತ್ತಾಯಿಸಿದ್ದಾರೆ.ಇದನ್ನು ಓದಿ –ಕೆಆರ್‌ಎಸ್‌ ಭರ್ತಿ: ನಾಳೆ ಕಾವೇರಿ ಮಾತೆಗೆ ಸಿಎಂ ಬೊಮ್ಮಾಯಿ ಬಾಗಿನ

ಮೇನಕಾಗಾಂಧಿ ಬರೆದ ಪತ್ರ ಭಾರೀ ಸಂಚಲನ ಸೃಷ್ಟಿಸಿದೆ. ಅದು ಕೇವಲ ರಾಜ್ಯಮಟ್ಟದಲ್ಲಿ ಅಲ್ಲದೆ ದೆಹಲಿ ಮಟ್ಟದಲ್ಲಿ ಭಾರೀ ಪ್ರತಿಧ್ವನಿಮಾಡಿದೆ.

ಪ್ರಕರಣದ ವಿವರ :

2022 ರ ಮಾರ್ಚ್ 18 ರಂದು ಸಿಕೆ ಅಚ್ಚುಕಟ್ಟು ಠಾಣೆಯಲ್ಲಿ ಕಾರ್ತಿಕ್ ಎಂಬಾತ ಸೇರಿದಂತೆ ಹಲವರ ಮೇಲೆ ಆನೆದಂತ ಮಾರಾಟ ವಿಚಾರವಾಗಿ ಪ್ರಕರಣ ದಾಖಲು ಮಾಡಿ ಆನೆದಂತವನ್ನು ಸೀಜ್ ಮಾಡಲಾಗಿತ್ತು.

ಮಾರಾಟ ಮಾಡಲು ಬಂದಿದ್ದ ಗ್ಯಾಂಗ್​ನ್ನು ಪೊಲೀಸರು ಬಂಧಿಸಿದ್ದರು. ಆದರೆ ಕಾರ್ತಿಕ್ & ಆತನ ಗ್ಯಾಂಗ್​ನ ಇಬ್ಬರು ಎಸ್ಕೇಪ್ ಆಗಿದ್ದರು . ಬಂಧಿತ ಆರೋಪಿಗಳ ವಿಚಾರಣೆ ಮಾಡಿದಾಗ ಈ ಕೇಸ್​ ಹಾಸನದ ವೀರಪುರದ ರೈತ ಚಂದ್ರೇಗೌಡ ಜಮೀನಿಗೆ ಲಿಂಕ್ ಆಗಿತ್ತು.

ಸಾಲಗಾಮೆ ತಾಲೂಕಿನ ವೀರಪುರ ಗ್ರಾಮದಲ್ಲಿ ಆನೆಗೆ ಕರೆಂಟ್ ಶಾಕ್​ ಕೊಟ್ಟು ಹತ್ಯೆ ಮಾಡಿ ದಂತ ತೆಗೆದು ಹೂತಾಕಿದ್ದರು. ಅಲ್ಲಿ ಜೆಸಿಬಿಯಿಂದ ಅಗೆದು ನೋಡಿದಾಗ 10 ಅಡಿಯಲ್ಲಿ ಆನೆಯ ದೇಹ ಪತ್ತೆಯಾಗಿತ್ತು. ಅಲ್ಲಿ ಬೆಂಗಳೂರು ಪೊಲೀಸರು ಸ್ಯಾಂಪಲ್ ಪಡೆದುಕೊಂಡಿದ್ದರು

ಈ ಪ್ರಕರಣದ ಆರೋಪಿಗಳು ಸಂಸದ ಪ್ರಜ್ವಲ್ ರೇವಣ್ಣ ಬೆಂಬಲಿಗರಾಗಿದ್ದಾರೆ ಅವರ ರಕ್ಷಣೆಗೆ ಪ್ರಕರಣವನ್ನು ಸಿಕೆ ಅಚ್ಚುಕಟ್ಟು ಠಾಣೆಯಿಂದ ಹಾಸನಕ್ಕೆ ವರ್ಗಾಯಿಸಲು ಅರಣ್ಯಾಧಿಕಾರಿಗಳಿಗೆ ಪ್ರಜ್ವಲ್​ ಒತ್ತಡ ಹೇರಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ ಇದಕ್ಕೆ ಈ ಹಿಂದೆ ಇದ್ದ ಡಿಸಿಪಿ ಹರೀಶ್ ಪಾಂಡೆ ನಿರಾಕರಿಸಿದ್ದರು. ಅಲ್ಲದೇ ಕೇಸ್​ನಲ್ಲಿ ಪ್ರಜ್ವಲ್ ಕಡೆಯ ಅರಣ್ಯ ಅಧಿಕಾರಿಗಳು ಭಾಗಿಯಾಗಿದ್ದಾರಂತೆ.


ಆರೋಪಿಗಳ ರಕ್ಷಣೆಗೆ ಹಾಸನ ಪೊಲೀಸರು ಯತ್ನಿಸುತ್ತಿದ್ದಾರಂತೆ. ಆರೋಪಿಗಳ ಬೇಲ್​ಗಾಗಿ ಒಂದೇ ಕ್ರೈಂಗೆ ಎರಡು ಎಫ್ಐಆರ್ ಹಾಕಿದ್ದಾರಂತೆ. ಈ ಮೂಲಕ ಆನೆ ಕೊಂದ ಆರೋಪ ಹೊಂದಿರುವವರನ್ನು ಬಚಾವ್ ಮಾಡಲು ನೋಡುತ್ತಿದ್ದಾರಂತೆ. ಈ ಬಗ್ಗೆ ರಾಜ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಜಿಲೆನ್ಸಗೆ ಶರತ್ ಬಾಬು ಎಂಬುವವರು ದೂರು ನೀಡಿದ್ದರು. ಡಿಸಿಪಿ ಹರೀಶ್ ಪಾಂಡೆ ವರ್ಗಾವಣೆ ಆದ ತಕ್ಷಣ ಕೇಸ್ ಟ್ರಾನ್ಸಫರ್ ಆಗಿದ್ದು ಸದ್ಯ ಹಲವು ಅನುಮಾನ ಹುಟ್ಟಿ ಹಾಕಿದೆ.

ಬೆಂಗಳೂರು ದಕ್ಷಿಣ ಡಿಸಿಪಿ ಕೃಷ್ಣ ಕಾಂತ್ ಬಂದ ತಕ್ಷಣ ಹಾಸನಕ್ಕೆ ಹೋಗಿ ಆನೆ ಪತ್ತೆ ಮಾಡಿದ್ದ ಕೇಸ್ ಅರ್ಧಕ್ಕೆ ಟ್ರಾನ್ಸಫರ್ ಆಗಿದ್ಯಾಕೆ. ಇದನ್ನು ನೋಡಿದ್ರೆ ಸದ್ಯದಲ್ಲೇ ಕೇಸ್ ಕ್ಲೋಸ್ ಮಾಡುವ ಸಾಧ್ಯತೆ ಇದೆ ಅಂತ ಶರತ್​ ಗಂಭೀರವಾಗಿ ಆರೋಪಿಸಿದ್ದಾರೆ.

ಹಾಸನ ಆರ್​ಎಫ್ಒ ವಿರುದ್ದ ಕ್ರಮ ತೆಗೆದುಕೊಳ್ಳುವಂತೆ ತಮ್ಮ ದೂರಿನಲ್ಲಿ ಮನೇಕಾ ಗಾಂಧಿ ಉಲ್ಲೇಖ ಮಾಡಿದ್ದಾರೆ. ಮಾತ್ರವಲ್ಲದೆ ಹಾಸನ ರೇಂಜ್ ಆಫೀಸರ್ ಬಗ್ಗೆ ಸೂಕ್ತ ತನಿಖೆ ಮಾಡಲು ಮನವಿ ಕೂಡ ಮಾಡಿದ್ದಾರೆ.

Share This Article
Leave a comment