December 27, 2024

Newsnap Kannada

The World at your finger tips!

WhatsApp Image 2023 03 10 at 1.52.40 PM

ಮಂಡ್ಯ ಸೊಸೆ ನಾನು ಸುತಾರಾಂ ಮಂಡ್ಯ ಬಿಡಲ್ಲ- ಸುಮಲತಾ

Spread the love

ಮಂಡ್ಯ :

ನಾನು ಮಂಡ್ಯ ಸೊಸೆ. ಯಾವತ್ತೂ ಮಂಡ್ಯ ಬಿಡಲ್ಲ, ರಾಜಕಾರಣ ಬಿಡಬಹುದು ಸ್ವಾಭಿಮಾನ, ಸಿದ್ದಾಂತ ಬಿಡಲ್ಲ.
ಅಂಬರೀಶ್ ಕುಟುಂಬಕ್ಕೆ ಮಂಡ್ಯ ಜನರು ಸಾಕಷ್ಟು ಪ್ರೀತಿ ಕೊಟ್ಟಿದ್ದಾರೆ. ಮಂಡ್ಯ ಬಿಟ್ಟು ನಾನು ಬೇರೆಲ್ಲೂ ಹೋಗಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಸಾರಿ ಹೇಳಿದರು.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ, ಮಂಡ್ಯ ಬಿಟ್ಟು ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧೆ ಮಾಡ್ತೀರಾ ಎಂದು ಕೇಳಿದಾಗ, ಜೆಡಿಎಸ್‌ ಬಿಜೆಪಿ ಮೈತ್ರಿ ಆಗಿದೆ, ಆದರೆ ಕ್ಷೇತ್ರ ಹಂಚಿಕೆ ಇನ್ನು ಆಗಿಲ್ಲ.
ಈಗ ಎದ್ದಿರುವ ಊಹಾಪೋಹಗಳಿಗೆ ಪ್ರತಿಕ್ರಿಯೆ ಕೊಡಲ್ಲ. ನಾನು ದುಡುಕಿನ ನಿರ್ಧಾರ ಮಾಡಲ್ಲ. ಕ್ಷೇತ್ರ ಹಂಚಿಕೆ ಬಗ್ಗೆ ಮಾತುಕತೆ ನೂರಾರು ನಡೆದಿರಬಹುದು. ಆದರೆ ಇನ್ನು ಯಾವುದೇ ಕ್ಷೇತ್ರ ಹಂಚಿಕೆ ಆಗಿಲ್ಲ. ಮಂಡ್ಯ ಜನ ನನ್ನ ಜೊತೆ ಇದ್ದಾರೆ, ನನಗೆ ಆ ಭರವಸೆ ಇದೆ ಎಂದರು.

ಈ ಕ್ಷೇತ್ರ ಬೇಕು, ಆ ಕ್ಷೇತ್ರ ಬೇಕು ಎಂದು ಯಾವ ಪಕ್ಷವನ್ನು ಕೇಳಿಲ್ಲ. ನನ್ನ ರಾಜಕೀಯ ಭವಿಷ್ಯದ ಬಗ್ಗೆ ನನಗೆ ಯೋಚನೆ ಇಲ್ಲ. ಬೆಂಗಳೂರು ಉತ್ತರ ಕ್ಷೇತ್ರದ ಆಫರ್ ಕಳೆದ ಚುನಾವಣೆಯಲ್ಲೇ ನಿರಾಕರಿಸಿದ್ದೆ. ನನಗೆ ಈ ಸ್ಥಾನಮಾನ ಕೊಟ್ಟಿದ್ದು ಮಂಡ್ಯ ಜನರು. ಬೇರೆ ಕ್ಷೇತ್ರದ ಆಫರ್ ಎಂದಿಗೂ ಒಪ್ಪಲ್ಲ. ಇದನ್ನ ನೂರಾರು ಬಾರಿ ಹೇಳಿದ್ದೇನೆ. ಇನ್ನು ರಕ್ತದಲ್ಲಿ ಬರೆದು ಕೊಡಬೇಕಾ? ಮಂಡ್ಯ ಜಿಲ್ಲೆ ರಾಜಕಾರಣ ಯಾವಾಗಲೂ ಚಾಲೆಂಜಿಂಗ್.
ಚಾಲೆಂಜ್‌ಗೆ ಹೆದರುವ ಸ್ವಭಾವ ನನ್ನದಲ್ಲ ಎಂದು ಪ್ರತಿಕ್ರಿಯಿಸಿದರು.

Copyright © All rights reserved Newsnap | Newsever by AF themes.
error: Content is protected !!