March 15, 2026

Newsnap Kannada

The World at your finger tips!

mandya nagarasabha

ಪತ್ರಕರ್ತರ ಆರೋಗ್ಯ ರಕ್ಷಣೆಗೆ 3 ಲಕ್ಷ ರು ಮೀಸಲಿಟ್ಟ ಮಂಡ್ಯ ನಗರ ಸಭೆ

Spread the love

ಅನಾರೋಗ್ಯ ಅಥವಾ ಶಸ್ತ್ರ ಚಿಕಿತ್ಸೆಗೆ ಒಳಗಾದ ಪತ್ರಕರ್ತರಿಗೆ ವೈದ್ಯಕೀಯ ವೆಚ್ಚ ಭರಿಸುವ ನಿಟ್ಟಿನಲ್ಲಿ ಆರ್ಥಿಕ ನೆರವು ನೀಡಲು ಮಂಡ್ಯ ನಗರಸಭೆ ಬಜೆಟ್ ನಲ್ಲಿ 3 ಲಕ್ಷ ರೂಗಳನ್ನು ಮೀಸಲಿರಿಸಲಾಗಿದೆ.

ಪತ್ರಕರ್ತರ ವೈದ್ಯಕೀಯ ವೆಚ್ಚ ನೆರವಿಗಾಗಿ ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ನಗರಸಭೆ ಬಜೆಟ್ ನಲ್ಲಿ
10 ಲಕ್ಷ ರೂ. ಅನುದಾನ ಮೀಸಲಿಡುವಂತೆ ನಗರಸಭೆ ಅಧ್ಯಕ್ಷ ಎಚ್.ಎಸ್. ಮಂಜು ಹಾಗೂ ಪೌರಾಯುಕ್ತ ಎಸ್.ಲೋಕೇಶ್ ಅವರಿಗೆ ಮನವಿ ಕಲ್ಪಿಸಲಾಗಿತ್ತು.

ಶಾಸಕರು, ನಗರಸಭೆ ಅಧ್ಯಕ್ಷ ಪೌರಾಯುಕ್ತರು ಹಾಗೂ ಸದಸ್ಯರು ಸ್ಪಂದಿಸಿದ್ದಾರೆ. ಇದು ಬಜೆಟ್ ನಲ್ಲೂ ಘೋಷಣೆಯಾಗಿದೆ.

ಜೊತೆಗೆ ಮಂಡ್ಯ ನಗರದಲ್ಲಿ ನಿವೇಶನ ರಹಿತ ಪತ್ರಕರ್ತರಿಗೆ ನಿವೇಶನ ಕೊಡುವ ಸಲುವಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆದುಕೊಳ್ಳುವ ಅಂಶವನ್ನು ಬಜೆಟ್ ನಲ್ಲಿ ಘೋಷಿಸಲಾಯಿತು.

error: Content is protected !!