ವಾರಣಾಸಿಯಲ್ಲಿ ಸಿಲುಕಿದ್ದ ಮಂಡ್ಯದ ಪ್ರವಾಸಿಗರು ಸುರಕ್ಷಿತವಾಗಿ ಮರಳಿ ಊರಿಗೆ

Team Newsnap
1 Min Read

ಅಗ್ನೀಪತ್ ಯೋಜನೆ ವಿರೋಧಿಸಿ ನಡೆದಿರುವ ಹಿಂಸಾಚಾರದಲ್ಲಿ ಕಾಶಿ ಮತ್ತು ವಾರಣಾಸಿಯಲ್ಲಿ ಸಿಲುಕಿದ್ದ ಮಂಡ್ಯ ಜಿಲ್ಲೆಯಿಂದ 31 ಮಂದಿ ಮಹಿಳೆಯರನ್ನು ಒಳಗೊಂಡಂತೆ 46 ಮಂದಿ ಮತ್ತು ರಾಮನಗರ ಜಿಲ್ಲೆಯಿಂದ 23 ಮಂದಿ ಯಾತಾರ್ಥಿಗಳನ್ನು ಸುಕ್ಷಿತವಾಗಿ ಕರೆತರಲಾಗಿದೆ.

ಜೂನ್ 11 ರಂದು ಬೆಳಿಗ್ಗೆ ಮಂಡ್ಯದಿಂದ ವಾರಣಾಸಿಗೆ ತೆರಳಿ ಜೂನ್ 17 ರಂದು ಪೂರ್ವ ನಿಗಧಿಯಾಗಿ ವಾಪಸ್ ತೆರಳಲು ಮಾಡಿಸಿದ್ದರು. ಅಗ್ನೀಪಥ್ ಯೋಜನೆ ವಿರುದ್ದ ಪ್ರತಿಭಟನೆ ನಡೆಯುತ್ತಿರುವ ಸಂಬಂದ ತೆರಳಬೇಕಾಗಿದ್ದ ರೈಲು ರದ್ದಾದ್ದರಿಂದ ಯಾತ್ರಾರ್ಥಿಗಳು ವಾರಣಾಸಿಯಲ್ಲಿಯೇ ಉಳಿದಿದ್ದು ಊಟ, ವಸತಿ, ಔಷಧಿ ಇತರೆ ಸೌಲಭ್ಯಗಳಿಲ್ಲದೆ ಸಮಸ್ಯೆಯುಂಟಾಗಿತ್ತು.

ತಮಗೆ ಸಹಾಯ ಮಾಡುವಂತೆ ಸರ್ಕಾರ ಮತ್ತು ಜಿಲ್ಲಾಡಳಿತವನ್ನು ಕೋರಿದ ನಂತರ ಸಮಸ್ಯೆ ತಿಳಿದ ತಕ್ಷಣವೆ ರಾಜ್ಯದ ವಿಪತ್ತು ನಿರ್ವಹಣಾ ಅಧಿಕಾರಿಗಳೊಂದಿಗೆ ಸಂಪರ್ಕಿಸಿ ಹಾಗೂ ಉತ್ತರ ಪ್ರದೇಶದ ವಾರಣಾಸಿಯ ಅಧಿಕಾರಿಗಳೊಂದಿಗೆ ಸಂಪರ್ಕಿಸಿ ಅಲ್ಲಿರುವ 2 ಜಿಲ್ಲೆಗಳ ಯಾತಾರ್ಥಿಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಯಿತು.

ಜಿಲ್ಲಾಡಳಿತವು ನೆನ್ನೆಯಿಂದ ಯಾತಾರ್ಥಿಗಳೊಂದಿಗೆ ನಿರಂತರ ಸಂಪರ್ಕ ಸಾಧಿಸಿ, ಯಾತಾರ್ಥಿಗಳನ್ನು ವಾಪಸ್ ತೆರಳಲು ಹಣದ ಕೊರತೆ ಇರುವುದಾಗಿ ತಿಳಿಸಿದರು.

ಇದನ್ನು ಓದಿ – ದ್ವಿತೀಯ PUC ಪರೀಕ್ಷೆ: ಕೊಪ್ಪಳದ ಅಪ್ಪ-ಮಗ ಪಾಸ್​: ತಂದೆಗೆ ಹೆಚ್ಚು ಅಂಕ

ಅಬಕಾರಿ ಸಚಿವರು ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ರವರ ನೇತೃತ್ವದಲ್ಲಿ ತಕ್ಷಣವೆ ಎಲ್ಲಾ ಪ್ರಾಯಾಣಿಕರಿಗೆ ಪ್ರಯಾಣಿಸಲು ಬಸ್ ಗಳ ವ್ಯವಸ್ಥೆ ಕಲ್ಪಿಸಲಾಯಿತು. ಹಾಗೂ ಈ ಸಂದರ್ಭ ದಲ್ಲಿ ಮಂಡ್ಯ ಜಿಲ್ಲೆಯವರೇ ಆದ ರವಿಕುಮಾರ್ IAS., ವಿಭಾಗೀಯ ಆಯುಕ್ತರು, ಗೋರಕ್ ಪುರ ರವರು ಸ್ಥಳೀಯವಾಗಿ ಯಾತ್ರಾರ್ಥಿಗಳಿಗೆ ಸೂಕ್ತ ವಸತಿ, ಊಟ ಹಾಗು ಇತರೆ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲು ಸಹಕರಿಸಿದರು.

ಪ್ರಸ್ತುತ ಯಾತ್ರಾರ್ಥಿಗಳು ಜೂ19ರಂಧು ಸಂಜೆ 6.00 ಗಂಟೆಗೆ ವಾರಣಾಸಿಯಿಂದ ಮಂಡ್ಯ ಮತ್ತು ರಾಮನಗರಕ್ಕೆ 2 ಬಸ್ ಗಳಲ್ಲಿ ತೆರಳಿರುತ್ತಾರೆ. ಉಳಿದ ಮಂಡ್ಯ ಮತ್ತು ತುಮಕೂರು ಜಿಲ್ಲೆಯ ಪ್ರಯಾಣಿಕರು ನಾಳೆ ಬೆಳಿಗ್ಗೆ ಪ್ರಯಾಣಿಸಲು ಬಸ್ ವವಸ್ಥೆ ಕಲ್ಪಿಸಲಾಗಿರುತ್ತದೆ.

Share This Article
Leave a comment