ಮಂಡ್ಯದಲ್ಲಿ ಪಡಿತರ ಅಕ್ಕಿ ಪಾಲಿಶ್ ಮಾಡಿ ಅಕ್ರಮವಾಗಿ ವಿದೇಶಕ್ಕೆ ರಫ್ತು ಮಾಡುವ ದಂಧೆ ಬಯಲಿಗೆ

Team Newsnap
1 Min Read

ಮಂಡ್ಯದಲ್ಲಿ ಪಡಿತರ ಅಕ್ಕಿ ಪಾಲಿಶ್ ಮಾಡಿ ಅಕ್ರಮವಾಗಿ ವಿದೇಶಕ್ಕೆ ರಫ್ತು ಮಾಡುವ ದಂಧೆಯನ್ನು ಪತ್ತೆ ಮಾಡುವಲ್ಲಿ ಅಧಿಕಾರಿಗಳು ಯಶಸ್ವಿ ಯಾಗಿದ್ದಾರೆ

ಮಂಡ್ಯದ ಲಕ್ಷ್ಮೀದೇವಿ ರೈಸ್ ಮಿಲ್ ಮೇಲೆ ದಾಳಿ ಮಾಡಿದ ಅಧಿಕಾರಿಗಳು ,ಬಡವರ ಅಕ್ಕಿಗೆ ಕನ್ನ ಹಾಕಿ ಶ್ರೀಮಂತರಿಗೆ ಅಕ್ರಮವಾಗಿ ಅಕ್ಕಿಯನ್ನು ಮಾರಾಟ ಮಾಡುತ್ತಿರುವುದು ತಿಳಿದುಬಂದಿದೆ.

ಈ ದಂಧೆಕೋರರು ಪಂಜಾಬ್ ರಾಜ್ಯದಿಂದ ಪಡಿತರ ಅಕ್ಕಿ ತಂದು ಪಾಲಿಶ್ ಮಾಡುತ್ತಿದ್ದರು
ನೂರಾರು ಚೀಲ ಅಕ್ಕಿಯನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ರೈಸ್ ಮಿಲ್ ನ ಖದೀಮರು ಯಾವುದೇ ರೀತಿಯ ಅನುಮತಿ ಪಡೆಯದೆ ನಕಲಿ ಬ್ರಾಂಡ್ ಸೃಷ್ಟಿಸಿ ಪಾಲಿಶ್ ಅಕ್ಕಿಯನ್ನು ಆಫ್ರಿಕಾ, ಮಲೇಶಿಯಾ, ಅರಬ್ ರಾಷ್ಟ್ರ ಸೇರಿದಂತೆ ಹಲವು ದೇಶಗಳಿಗೆ ರಫ್ತು ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದರು.

ರೈಸ್ ಮಿಲ್ ನಲ್ಲಿ ನೂರಾರು ಕ್ವಿಂಟಾಲ್ ಪಡಿತರ ಅಕ್ಕಿ, ಒಂದು ಕ್ಯಾಂಟರ್ ಅನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ

ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತೆ ಚಾಲಕ ಅಲ್ಲಿಂದ ಪರಾರಿಯಾಗಿದ್ದಾನೆ. ಈ ಪಾಲಿಶ್ ಅಕ್ಕಿಯನ್ನೇ ಸಣ್ಣ ಅಕ್ಕಿ ರೀತಿ ಪ್ಯಾಕ್ ಮಾಡಿ ಖದೀಮರು ಮಾರಾಟ ಮಾಡುತ್ತಿದ್ದರು.

ಅದು ಅಲ್ಲದೇ ಇವರು ವಿವಿಧ ಬ್ರಾಂಡ್‍ಗಳ ಮೂಲಕ ದೇಶ-ವಿದೇಶಗಳಿಗೆ ಅಕ್ಕಿಯನ್ನು ರಫ್ತು ಮಾಡುತ್ತಿದ್ದರು ಎಂದು ಸಹ ದಾಳಿಯ ವೇಳೆ ತಿಳಿದಿದೆ

Share This Article
Leave a comment