Silent ನಿಂದ violent ಗೆ ತಿರುಗಿದ ಮಂಡ್ಯ ಪಾಲಿಟಿಕ್ಸ್ : MP ಸುಮಲತಾ ಮೇಲೆ ಹಲ್ಲೆ ದೂರು ದಾಖಲು

Team Newsnap
1 Min Read

ಸಂಸದೆ ಸುಮಲತಾ ಮತ್ತು ಜೆಡಿಎಸ್​​​ ಸಮರ ತಾರಕಕ್ಕೇರಿದೆ ಚರಂಡಿ ಕಾಮಗಾರಿ ಗುದ್ದಲಿ ಪೂಜೆ ವೇಳೆ ಕೆ.ಆರ್. ನಗರದ ಮುಂಜನಹಳ್ಳಿಯಲ್ಲಿ ಗಲಾಟೆಯಾಗಿದೆ.

ಸಾರಾ ಬೆಂಬಲಿಗರಿಂದ ಸುಮಲತಾ ಮೇಲೆ ಹಲ್ಲೆ ಯತ್ನ ನಡೆದಿದೆ ಎಂಬ ಆರೋಪ ಕೇಳಿ ಬಂದಿದ್ದು, ಸಾಲಿಗ್ರಾಮ ಠಾಣೆಗೆ ತೆರಳಿ ಸುಮಲತಾ ದೂರು ನೀಡಿದ್ದಾರೆ.

ಮೈಸೂರಿನತ್ತ ಈ ಕದನ ಶಿಫ್ಟ್​ ಆಗಿದೆ. ಈ ಮೊದಲು ಮಾತಿಗೆ, ಪ್ರತಿಭಟನೆಗೆ ಸೀಮಿತವಾಗಿದ್ದ ಈ ಕದನ, ಈ ಬಾರಿ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ.

ಮಂಡ್ಯ ಲೋಕಸಭೆ ವ್ಯಾಪ್ತಿಗೆ ಬರುವ ಮೈಸೂರಿನ ಕೆ.ಆರ್​ ನಗರದ ಚೌಕಹಳ್ಳಿ ಗ್ರಾಮದಲ್ಲಿ ನಡೆಯಬೇಕಿದ್ದ ಗುದ್ದಲಿ ಪೂಜೆ ಗುದ್ದಾಟಕ್ಕೆ ಕಾರಣವಾಗಿದೆ.

50 ಲಕ್ಷ ವೆಚ್ಚದ ನೀರಾವರಿ‌ ಇಲಾಖೆ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಲಾಗಿದೆ ಚರಂಡಿ, ಸಿಮೆಂಟ್ ಕಾಂಕ್ರೀಟ್ ರಸ್ತೆಗಳ ನಿರ್ಮಾಣ ಕಾಮಗಾರಿಗಾಗಿ ಚೌಕಹಳ್ಳಿ, ಬ್ಯಾಡಹಳ್ಳಿ, ಹಂಪಾಪುರ ಸೇರಿ ಕೆಲವೆಡೆ ಕಾರ್ಯಕ್ರಮ ನಡೆಯಿತು.

suma aunt
ಸುಮಲತಾ

ಗುದ್ದಲಿ ಪೂಜೆ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕರನ್ನು ಆಹ್ವಾನಿಸಿಲ್ಲ, ಶಿಷ್ಟಾಚಾರ ಪಾಲಿಸಿಲ್ಲವೆಂದು ಸಾರಾ ಮಹೇಶ್​​​ ಬೆಂಬಲಿಗರ ತಕರಾರು ಮಾಡಿ ನಂತರ ಗ್ರಾಮಕ್ಕೆ ಬಾರದಂತೆ ಸಂಸದರು ಹಾಗೂ ಜೊತೆಯಲ್ಲಿದ್ದವರಿಗೆ ತಡೆ ನೀಡಲಾಗಿತ್ತು.

ಈ ವೇಳೆ ಸಂಸದೆ ಸುಮಲತಾ ಪರವಾಗಿ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ, ಪರಸ್ಪರ ಕಿತ್ತಾಟ ತಳ್ಳಾಟ, ಸಂಸದರ ಕಾರು ಚಾಲಕ ನಂಜುಂಡಗೆ ಗಾಯ, ಕೆ.ಆರ್.ನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ,


ಕಾರ್ಯಕ್ರಮ ಆರಂಭದಿಂದಲೇ ಶಾಮಿಯಾನ, ಚೇರ್​​​ ವಿಚಾರವಾಗಿ ಅಧಿಕಾರಿಗಳಿಗೆ ತರಾಟೆ ಮೂಲಕ ಶುರುವಾದ ಜಟಾಪಟಿ, ಜೆಡಿಎಸ್ ಕಾರ್ಯಕರ್ತರ ನಡುವೆ ವಿಸ್ತರಿಸಿತು. ಈ ಗಲಾಟೆ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದು, ಪ್ರಕರಣ ಸಾಲಿಗ್ರಾಮ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

Share This Article
Leave a comment