ಮಂಡ್ಯ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಕೆ ಆರ್ ಪೇಟೆ ಕೆ ಶ್ರೀನಿವಾಸ್ ಅವರನ್ನು ಸರ್ಕಾರ ಪದಚ್ಯುತಗೊಳಿಸಿದೆ. ನೂತನ ಅಧ್ಯಕ್ಷರಾಗಿ ಮಂಡ್ಯದ ಹಿರಿಯ ವಕೀಲ , ಬಿಜೆಪಿ ನಾಯಕ ಕೆ ಎಸ್ ದೊರೆಸ್ವಾಮಿ ಅವರನ್ನು ನೂತನ ಅಧ್ಯಕ್ಷರಾಗಿ ಸರ್ಕಾರ ನೇಮಕ ಮಾಡಿದೆ.
ಕಳೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹೀನಾಯವಾಗಿ ಸೋತು ಮುಖ ಭಂಗ ಅನುಭವಿಸಿದ ಬಿಜೆಪಿ ಸೋಲಿಗೆ ಕಾರಣರಾದ ನಾಯಕರನ್ನು ಪತ್ತೆ ಮಾಡಿ ನಿರ್ದಾಕ್ಷಣ್ಯ ಕ್ರಮಗಳನ್ನು ಕೈಗೊಳ್ಳುವ ನಿಧಾ೯ರ ಮಾಡಿರುವ ಪಕ್ಷ , ಸಚಿವ ನಾರಾಯಣಗೌಡರ ಕಟ್ಡಾ ಬೆಂಬಲಿಗನನ್ನು ಮೊದಲ ಪದಚ್ಯುತಿ ಮಾಡಿದೆ.
ಜಿಲ್ಲೆಯಲ್ಲಿ ಬಿಜೆಪಿ ಹೀನಾಯ ಸೋಲಿಗೆ ಕಾರಣರಾಗಿರುವ ಎಲ್ಲರಿಗೂ ಇಂತಹದ್ದೇ ಶಿಕ್ಷೆ ನೀಡಲು ಬಿಜೆಪಿ ಕಠಿಣ ನಿರ್ಧಾರ ಕೈಗೊಳ್ಳಲು. ಮುಂದಾಗಿದೆ ಈ ಹಿನ್ನೆಲೆ ಸಂಪುಟ ಪುನರ್ ರಚನೆ ವೇಳೆ ಸಚಿವ ನಾರಾಯಣ ಗೌಡರಿಗೂ ಸಚಿವ ಸ್ಥಾನದಿಂದ ಕೊಕ್ ಕೊಡುವ ಸಾಧ್ಯತೆಗಳು ನಿಚ್ಚಳವಾಗಿವೆ.
ಅಧ್ಯಕ್ಷ – ಐವರು ಸದಸ್ಯರ ನೇಮಕ:
ಜನವರಿ 1ರಂದೇ ಮಂಡ್ಯ ಮೂಡಾ ಅಧ್ಯಕ್ಷರಾಗಿ ಹಿರಿಯ ಬಿಜೆಪಿ ನಾಯಕ ದೊರಸ್ವಾಮಿ ಅವರನ್ನು ಸಕಾ೯ರ ನೇಮಕ ಮಾಡಿ ಆದೇಶ ಹೊರಡಿಸಿದೆ
ಅಧ್ಯಕ್ಷರ ಜೊತೆಯಲ್ಲಿ ಐವರು ಸದಸ್ಯರನ್ನೂ ಕೂಡ ನೇಮಕ ಮಾಡಲಾಗಿದೆ. ಪಟ್ಟಿ ಇಂತಿದೆ :
More Stories
ಸಪ್ತಪದಿ ತುಳಿದ ಮೂರೇ ದಿನದಲ್ಲಿ ಹೃದಯಾಘಾತದಿಂದ ನವವಿವಾಹಿತ ಅಕಾಲಿಕ ಸಾವು
ಏ.7 ಕ್ಕೆ ಮೇಲುಕೋಟೆ ವೈರಮುಡಿ ಉತ್ಸವ
ಮಂಡ್ಯದಲ್ಲಿ ಭೀಕರ ಅಪಘಾತ: ಸಾಫ್ಟ್ವೇರ್ ಇಂಜಿನಿಯರ್ ದಾರುಣ ಸಾವು