ಮಂಡ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣೆಯ ಕಾವು ತಾರಕಕ್ಕೇರಿದೆ.
ಮಂಡ್ಯ ಜೆಡಿಎಸ್ ಅಭ್ಯರ್ಥಿ ರಾಮಚಂದ್ರ ಅವರು ಕ್ಷೇತ್ರದಾದ್ಯಂತ ನಡೆಸಿರುವ ಪ್ರಚಾರಕ್ಕೆ ಮತದಾರರಿಂದ
ಭಾರಿ ಸ್ಪಂದನೆ ಸಿಕ್ಕಿದೆ.
ಕೆರಗೋಡು ಹೋಬಳಿಯ ಪ್ರತಿ ಗ್ರಾಮದಲ್ಲೂ ಅದ್ದೂರಿ ಸ್ವಾಗತ ಸಿಗುತ್ತೆ. ಜೆಡಿಎಸ್ ಅಧಿಪತಿ ಕುಮಾರಸ್ವಾಮಿ ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗುವುದು ಖಚಿತ ಎಂಬುದನ್ನು ಅಭ್ಯರ್ಥಿ ರಾಮಚಂದ್ರ ಮತದಾರರಿಗೆ ಮನವರಿಕೆ ಮಾಡಿಕೊಟ್ಟ ಮೇಲೆ ಜೆಡಿಎಸ್ ಅಲೆ ಜೋರಾಗಿದೆ.

ಜೆಡಿಎಸ್ ನಲ್ಲಿ ಯಾವುದೇ ಬಂಡಾಯ ಮತ್ತು ವಿರೋಧಿ ಅಲೆ ಇಲ್ಲ. ಕಳೆದ ಬಾರಿಗಿಂತ ಈ ಬಾರಿ ಇನ್ನು ಹೆಚ್ಚಿನ ಮತ ಜೆಡಿಎಸ್ ಗೆ ಸಿಗಲಿದೆ ಎಂದು ರಾಮಚಂದ್ರ ಹೇಳಿದರು.
ಈ ನಡುವೆ ಮೇ 5 ರಂದು ಮಂಡ್ಯದಲ್ಲಿ ಕುಮಾರಸ್ವಾಮಿ ಅದ್ದೂರಿ ಪ್ರಚಾರ ಹಾಗೂ ಬಹಿರಂಗ ಸಭೆ ನಡೆಸಲಿದ್ದಾರೆ.
ಮಂಡ್ಯದಲ್ಲಿ ಪ್ರಚಾರ :

ಮಂಡ್ಯ ನಗರದ ಕರ್ನಾಟಕ ಸಂಘದ ಕೆವಿಎಸ್ಎಸ್ ಭವನದಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಆಯೋಜಿಸಿದ್ದ ಮಡಿವಾಳ ಮುಖಂಡರ ಸಭೆಯಲ್ಲಿ ಜೆಡಿಎಸ್ ಅಭ್ಯರ್ಥಿ ರಾಮಚಂದ್ರ ಮತಯಾಚಿಸಿದರು, ಮನ್ ಮುಲ್ ಉಪಾಧ್ಯಕ್ಷ ಎಂ.ಎಸ್ . ರಘುನಂದನ್ ಹಾಗೂ ವಸಂತರಾಜು ಮತ್ತು ಆನಂದ್ ಉಪಸ್ಥಿತರಿದ್ದರು.