ಕೊರೋನಾ ಮಾಹಾ ಸುನಾಮಿಯನ್ನು ತಡೆಗಟ್ಟಲು ಸರ್ಕಾರದ ಘೋಷಣೆ ಮಾಡಿರುವ 15 ದಿನ ಲಾಕ್ ಡೌನ್ ( ಬಿಗಿ ಕ್ರಮಗಳು) ಮೊದಲ ದಿನ ಯಶಸ್ವಿ ಯಾಗಿದೆ.
ಬುಧವಾರ ಬೆಳಿಗ್ಗೆ 10 ಗಂಟೆಯಿಂದಲೇ ಮಂಡ್ಯ ಸೇರಿದಂತೆ ಜಿಲ್ಲೆಯಲ್ಲಿ ಸಂಪೂರ್ಣ ಸ್ಥಬ್ಧವಾಯಿತು. ಔಷಧ ಅಂಗಡಿಗಳು ಮಾತ್ತು ಆಸ್ಪತ್ರೆ ಗಳನ್ನು ಹೊರತುಪಡಿಸಿ ಉಳಿದಂತೆ ಎಲ್ಲಾ ಅಂಗಡಿಗಳು,ಹೋಟೆಲ್ ಗಳು ಮುಚ್ಚಿ ದ್ದವು. ಸಂಚಾರ ಸ್ಥಬ್ಧವಾಗಿತ್ತು.
ಮಂಡ್ಯ ನಗರದಾದ್ಯಂತ ಬಿಗಿ ಪೋಲಿಸ್ ಬಂದೋಬಸ್ತು ಹಾಕಲಾಗಿದೆ. ಜನರ ಓಡಾಟ ಸಂಪೂರ್ಣವಾಗಿ ಸ್ಥಗಿತ ಗೊಂಡಿದೆ. ಲಾಕ್ ಡೌನ್ ಬೆಂಬಲ ಸೂಚಿಸಿ, ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
ನಗರದ ಪ್ರಮುಖ ರಸ್ತೆಗಳು, ಬಸ್ ಸ್ಟ್ಯಾಂಡ್ ಗಳು ಬಿಕೋ ಎನ್ನುತ್ತಿದ್ದವು. ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಜನರು ಮನೆಯಲ್ಲಿ ಕಾಲ ಕಳೆಯಲು ಈ ಅವಕಾಶವನ್ನು ಚೆನ್ನಾಗಿ ಉಪಯೋಗಿಸಿಕೊಂಡರು.
More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ