ಸೆ.11 ರಂದು ಮೈ-ಬೆಂ ದಶಪಥ ರಸ್ತೆ ಬಂದ್ ಮಾಡಲಿರುವ ಮಂಡ್ಯ ರೈತರು

Team Newsnap
1 Min Read

ಮಂಡ್ಯ :

ಮಂಡ್ಯದಲ್ಲಿ ರೈತರ ಕಿಚ್ಚು ಹೆಚ್ಚಾಗಿದೆ. ಇಂದು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ರೈತ ಸಂಘ ಮುಂದಾಗಿದೆ.

ಸೆಪ್ಟೆಂಬರ್​ 11ಕ್ಕೆ ಮಂಡ್ಯದಲ್ಲಿ ದಶಪಥವನ್ನೇ ಬಂದ್​ ಮಾಡಲು ಕರೆ ಕೊಟ್ಟಿದೆ.ಮಳೆ ಬಾರದೇ ಕಳೆಗುಂದಿರುವ ಕಾವೇರಿ ಒಡಲು ನಿತ್ಯವೂ ತಳಕ್ಕೆ ಮುಟ್ಟುತ್ತಿದೆ. ನೆರೆಮನೆಯ ನೀರಿನ ಹಪಾಹಪಿಗೆ ರಾಜ್ಯವನ್ನೇ ಸೆರೆವಾಸಕ್ಕೆ ತಳ್ಳುವಂತೆ ಮಾಡ್ತಿದೆ. ಒಂದೆಡೆ ಸುಪ್ರೀಂಕೋರ್ಟ್​​ನ ಕಟಕಟೆಯಲ್ಲಿ ಕಾವೇರಿ ನಿಂತಿದ್ರೆ, ಇನ್ನೊಂದೆಡೆ ಸಕ್ಕರೆ ನಾಡಿನಲ್ಲಿ ಪ್ರತಿಭಟನೆ ಕಾಡ್ಗಿಚ್ಚು ಕರಗುತ್ತಿಲ್ಲ.

ಕಾವೇರಿ ನಮ್ಮವಳು ಅಂತ ನಿತ್ಯವೂ ವಿವಿಧ ರೀತಿಯಲ್ಲಿ ಮಂಡ್ಯದ ಮಣ್ಣಿನಲ್ಲಿ ಪ್ರತಿಭಟನೆ ನಡೆಯುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಮತ್ತೊಂದೆಡೆ ಕಾವೇರಿ ಹೋರಾಟಗಾರರು, ಬೃಹತ್​​ ಪ್ರತಿಭಟನೆಗೆ ಸಜ್ಜಾಗ್ತಿದ್ದಾರೆ. ಮೈಸೂರು -ಬೆಂಗಳೂರು ದಶಪಥ ಬಂದ್​ಗೆ ಕರೆ ಶಪಥ ತೊಟ್ಟಿದ್ದಾರೆ. ಸೆಪ್ಟೆಂಬರ್​​ 11 ಸೋಮವಾರ ದಶಪಥ ಹೆದ್ದಾರಿ ಬಂದ್ ಮಾಡಲು ಕರ್ನಾಟಕ ರಾಜ್ಯ ರೈತ ಸಂಘ ಕರೆ ಕೊಟ್ಟಿದೆ.

ಇಂದು ಸಿಎಂ‌ ಭೇಟಿ ಮಾಡಲು ರೈತ ಸಂಘದ ನಿಯೋಗ ನಿರ್ಧರಿಸಿದೆ. ಜಿಲ್ಲೆಯ ರೈತರ ಬದುಕಿನ ವಾಸ್ತವ ಸ್ಥಿತಿಯನ್ನ ಸಿಎಂಗೆ ತಿಳಿಸಲಿದ್ದಾರೆ. ಅಲ್ಲದೆ, ತಮಿಳುನಾಡಿಗೆ ಹರಿಸುತ್ತಿರುವ ನೀರು ನಿಲ್ಲಿಸುವಂತೆ ಒತ್ತಾಯಿಸಲಿದ್ದಾರೆ. ಕೆಆರ್​​ಎಸ್​​ ಬಳಿ ನಡೆಯುತ್ತಿದ್ದ ಧರಣಿ ಸ್ಥಗಿತವಾಗಿದ್ದು, ಸೆಪ್ಟೆಂಬರ್​​ 8 ರಿಂದ ಶ್ರೀರಂಗಪಟ್ಟಣದಲ್ಲಿ ಅನಿರ್ಧಿಷ್ಟಾವಧಿ ಹೋರಾಟಕ್ಕೆ ಮುಂದಾಗಿದೆ.

ರೈತ‌ ಹಿತರಕ್ಷಣಾ ಸಮಿತಿ ಸಭೆ ನಡೀತು. ಸಭೆ ಬಳಿಕ ಮಂಡ್ಯ ಶಾಸಕ ರವಿಕುಮಾರ್ ಮಾತನಾಡಿ ಕುಡಿಯುವ ನೀರಿಗೂ ಸಮಸ್ಯೆ ಎದುರಾಗುವ ಆತಂಕವಿದೆ. ತಕ್ಷಣ ಡ್ಯಾಂನಿಂದ ಹರಿಸುತ್ತಿರುವ ನೀರು ನಿಲ್ಲಿಸಬೇಕಿದೆ. ಆ ಬಗ್ಗೆ ಉಸ್ತುವಾರಿ ಸಚಿವರು ಸಿಎಂ, ಡಿಸಿಎಂ ಜೊತೆ ಮಾತನಾಡ್ತೇನೆ ಎಂದಿದ್ದಾರೆ. ಅವರ ನಿರ್ಧಾರದ ಬಳಿಕ ನಾವು ನಿರ್ಧಾರ ಮಾಡ್ತೇವೆ ಎಂದಿದ್ದಾರೆ.

Share This Article
Leave a comment