December 19, 2024

Newsnap Kannada

The World at your finger tips!

jodetthu

ಮಾಜಿ CM ಕುಮಾರಸ್ವಾಮಿಗೆ 1,80,000 ಮೌಲ್ಯದ ಜೋಡೆತ್ತು GIFT ನೀಡಿದ ಮಂಡ್ಯದ (Mandya) ಅಭಿಮಾನಿ

Spread the love

ಮಂಡ್ಯದ (Mandya) ಜನ ಅಂದ್ರೆ ಹಾಗೆ ಕಣ್ರಿ. ಮಾತಲ್ಲಿ ಒರಟು, ಮನಸ್ಸು ಮಾತ್ರ ಬೆಣ್ಣೆ. ಬೇಗ ಕರಗಿ ಹೋಗ್ತಾರೆ. ಅದರಲ್ಲೂ ಅಭಿಮಾನದ ಪ್ರಶ್ನೆ ಬಂದಾಗ ಪ್ರಾಣ ಕೊಡಲು ತಯಾರಿರುತ್ತಾರೆ.

ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಅವರ ಮೇಲಿನ ಅಭಿಮಾನಕ್ಕೆ ವ್ಯಕ್ತಿಯೊಬ್ಬ 1.80 ಲಕ್ಷರು ಬೆಲೆ ಬಾಳುವ ತನ್ನ ದುಬಾರಿ ಬೆಲೆಯ ಜೋಡೆತ್ತುಗಳನ್ನೇ ಗಿಫ್ಟ್ ಮಾಡಿದ್ದಾನೆ.

jodetthu 1

ಮಂಡ್ಯದ (Mandya) ಮಧುಸೂಧನ್ ಎಂಬ ವ್ಯಕ್ತಿ ತಾನು ಸಾಕಿದ್ದ ದುಬಾರಿ ಬೆಲೆಯ ಜೊಡೆತ್ತನ್ನೇ ಗಿಫ್ಟ್ ಮಾಡಿದ್ದಾನೆ. ತನ್ನ ನೆಚ್ಚಿನ ನಾಯಕ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಈ ಗಿಫ್ಟ್ ಮಾಡಿದ್ದಾನೆ. ಈ ಅಭಿಮಾನಿ ನೀಡಿರುವ ಗಿಫ್ಟ್ ಕಂಡು ಕುಮಾರಸ್ವಾಮಿ ಭಾವುಕರಾಗಿದ್ದಾರೆ.

ಮಂಡ್ಯ (Mandya) ಜಿಲ್ಲೆಯ ಮದ್ದೂರು ತಾಲ್ಲೂಕಿನ ಚೊಟ್ಟನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಬಾರಿ ದನಗಳ ಜಾತ್ರೆ ಹಮ್ಮಿಕೊಳ್ಳಲಾಗಿತ್ತು.

ಈ ಜಾತ್ರೆ ಕಾರ್ಯಕ್ರಮಕ್ಕೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಆಹ್ವಾನ ನೀಡಲಾಗಿತ್ತು. ಕುಮಾರಸ್ವಾಮಿ ಅವರು ಚೊಟ್ಟನಹಳ್ಳಿ ಗ್ರಾಮಕ್ಕೆ ಆಗಮಿಸಿ, ಕಾರ್ಯಕ್ರಮದಲ್ಲಿ ಬಾಗಿಯಾಗಿದ್ದರು.

ಈ ವೇಳೆ ಜಾತ್ರೆಗೆ ಆಗಮಿಸಿದ್ದ ಕೋಣಸಾಲೆ ಗ್ರಾಮದ ಮಧುಸೂಧನ್, ಕುಮಾರಸ್ವಾಮಿ ಅವರಿಗೆ ತನ್ನ ಜೋಡೆತ್ತನ್ನೇ ಗಿಫ್ಟ್ ಆಗಿ ನೀಡಿದ್ದಾನೆ.

ಸುಮಾರು 1.80 ಲಕ್ಷ ಮೌಲ್ಯದ ಹಳ್ಳಿಕಾರ್ ತಳಿಯ ಜೋಡೆತ್ತುಗಳನ್ನ ಗಿಫ್ಟ್ ಪಡೆದುಕೊಂಡ ಕುಮಾರಸ್ವಾಮಿ
ಬಿಡದಿಯ ತಮ್ಮ ತೋಟದ ಮನೆಯಲ್ಲಿ ಎತ್ತುಗಳು ಸಾಕಲು ನಿರ್ಧಾರ ಮಾಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!