ಮಂಡ್ಯ – ದಿಶಾ ಸಭೆ : ಅಧಿಕಾರಿಗಳ ಜೊತೆ ಜಟಾಪಟಿ ನಡೆಸಿದ ದಳಪತಿಗಳು

Team Newsnap
2 Min Read
You do not have the right to use the word 'self-respecting': Sumalatha vs Ravindra 'ಸ್ವಾಭಿಮಾನಿ' ಪದ ಬಳಕೆ ಹಕ್ಕು ನಿಮಗಿಲ್ಲ : ಸುಮಲತಾ ವಿರುದ್ಧ ರವೀಂದ್ರ ತರಾಟೆ

ಮಂಡ್ಯ ಸಂಸದೆ ಸುಮಲತಾ ಅಧ್ಯಕ್ಷತೆಯಲ್ಲಿ ಜಿಪಂನ‌ ಕಾವೇರಿ‌ ಸಭಾಂಗಣದಲ್ಲಿ ನಡೆದ ದಿಶಾ ಸಭೆಯಲ್ಲಿ ಶಾಸಕರು ಮತ್ತು ಸಿಇಓ ನಡುವೆ ಜಟಾಪಟಿ ನಡೆಯಿತು. ‌

ಸಭೆ ಆರಂಭವಾಗುತ್ತಿದ್ದಂತೆ ಸಿಇಓ ವಿರುದ್ಧ ಸಿಡಿದೆದ್ದ ಶಾಸಕ ರವೀಂದ್ರ ಶ್ರೀಕಂಠಯ್ಯ , ಈ ಸಭೆ ಮಾಡೋ ಅಧಿಕಾರ ಇದೆಯಾ? ಎಂದು ಪ್ರಶ್ನಿಸಿ, ನಾನು ಪತ್ರದ ಮುಖೇನ ಪ್ರಶ್ನೆ ಕೇಳಿದ್ದೀನಿ. ನೀವು ಉತ್ತರ ಕೊಡಿ ಎಂದು ಸಿಇಓ ಅವರನ್ನು ತರಾಟೆಗೆ ತೆಗೆದುಕೊಂಡರು.

ದಿಶಾ ಸಭೆಗೆ ಸಂಸದರು ಅಧ್ಯಕ್ಷರಾಗಿರುತ್ತಾರೆ. ಸಂಸದರು ಸಭೆ ಕರೆಯುವಂತೆ ಕೇಳಿದಾಗ ನಾನು ಸಭೆ ಕರೆದಿದ್ದೇನೆ. ಕೊವಿಡ್ ಹಿನ್ನೆಲೆಯಲ್ಲಿ ಪ್ರಗತಿ ಪರಿಶೀಲನೆಗೆ ಕೇಂದ್ರ ಸೂಚಿಸಿದೆ. ಹೀಗಾಗಿ ಸಭೆ ಮಾಡ್ತಿದ್ದೀನಿ ಎಂದು ಸಿಇಓ ಉತ್ತರಿಸಿದರು.

ಈ ಬಗ್ಗೆ ನನಗೆ ಪತ್ರದ ಮೂಲಕ ಉತ್ತರ ಕೊಡಿ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಒತ್ತಾಯಿಸಿದರು. ಪತ್ರದ ಮೂಲಕ ಉತ್ತರ ಕೊಡುವುದಾಗಿ ಸಿಇಓ ತಿಳಿಸಿದರು.

ಈ ಸಭೆಯಲ್ಲಿ ಜೆಡಿಎಸ್ ಶಾಸಕರಾದ ಸಿ.ಎಸ್.ಪುಟ್ಟರಾಜು, ರವೀಂದ್ರ ಶ್ರೀಕಂಠಯ್ಯ, ಎಂ.ಶ್ರೀನಿವಾಸ್, ಪರಿಷತ್ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ, ಅಪ್ಪಾಜಿಗೌಡ ಭಾಗಿಯಾಗಿ
ಸಂಸದೆಯ ಹಿಂಬಾಲಕರು, ಅಪ್ತ ಕಾರ್ಯದರ್ಶಿಯ ಅಧಿಕಾರ ದುರುಪಯೋಗ ಕುರಿತು ತರಾಟೆಗೆ ತೆಗೆದುಕೊಂಡರು. ‌

ಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ, ಶ್ರೀರಂಗಪಟ್ಟಣ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯರಿಂದ ದಿಶಾ ಸಭೆಗೆ ವಿಧಾನ ಪರಿಷತ್ ಸದಸ್ಯರನ್ನು ಏಕೆ ಆಹ್ವಾನಿಸಿಲ್ಲ? ಎಂದು ಪ್ರಶ್ನೆ ಮಾಡಿದರು.‌

ಈ ಹಿಂದಿನ ಸಂಸದರ ಸಭೆಯಲ್ಲಿ ನಮಗೆ ಆಹ್ವಾನ ಇತ್ತು. ಇಂದಿನ ಸಭೆಗೆ ನನಗೆ ಏಕೆ ಆಹ್ವಾನಿಸಿಲ್ಲ? ಎಂಬುದಾಗಿ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಪ್ರಶ್ನೆಸಿದರು.

ಗೈಡ್ ಲೈನ್ ನಲ್ಲಿ ಇರೋದನ್ನು ಮಾಡಿದ್ದೇನೆ ಎಂದು ಸಿಇಓ ಉತ್ತರ ನೀಡಿದರು. ಇದರಿಂದ ಕುಪಿತರಾದ ಶಾಸಕ ರವೀಂದ್ರ ಶ್ರೀಕಂಠಯ್ಯ, ಸಂಸದೆ, ಸಿಇಓ, ಎಸ್ಪಿಗೆ ತರಾಟೆಗೆ ತೆಗೆದುಕೊಂಡರು.

ಸಭೆಗೆ ಸಂಬಂಧಿಸಿದ ಅನಧಿಕೃತ ವ್ಯಕ್ತಿಗಳನ್ನು ಹೊರಗೆ ಕಳಿಸಿ ಎಂದರು. ಅನಧಿಕೃತ ವ್ಯಕ್ತಿಗಳು ಯಾರೂ ಇಲ್ಲ ಎಂಬುದಾಗಿ ಸಿಇಓ ಹೇಳಿದರು. ಆಗ ಸಂಸದರ ಆಪ್ತ ಕಾರ್ಯದರ್ಶಿ ಹೆಸರಲ್ಲಿ ಶ್ರೀನಿವಾಸ್ ಭಟ್ ಇದ್ದಾರೆ. ಅವರು ಅನಧಿಕೃತ ವ್ಯಕ್ತಿ ಇದ್ದಾರ? ಅವರು ಯಾರು ಎಂದು ಹೇಳಿ? ಎಂದರು.

ಸಂಸದರ ಆಪ್ತ ಕಾರ್ಯದರ್ಶಿ ಹೆಸರಲ್ಲಿ ಶ್ರೀನಿವಾಸ್ ಭಟ್ ಪತ್ರ ವ್ಯವಹಾರ ಮಾಡಿದ್ದಾರೆ. ಈ ಬಗ್ಗೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಕೆ ಆರ್ ಎಸ್ ಕುರಿತ ಕೆಲವೊಂದು ಗೌಪ್ಯ ವಿಚಾರಗಳು ಚರ್ಚೆಯಾಗಲಿವೆ. ಅನಧಿಕೃತ ವ್ಯಕ್ತಿಗಳು ಇಲ್ಲಿ ಇರಬಾರದು. ಅನಧಿಕೃತ ವ್ಯಕ್ತಿಗಳನ್ನು ಈ ಕೂಡಲೇ ಹೊರ ಕಳುಹಿಸಿ. ನಿಮ್ಮ ಇಷ್ಟ ಬಂದಂತೆ ಮಂಡ್ಯವನ್ನು ಕೊಂಡೊಯ್ಯೋಕೆ ನಾವು ಬಿಡಲ್ಲ ಎಂಬುದಾಗಿ ಸಂಸದೆಗೆ ಶಾಸಕ ರವೀಂದ್ರ ತರಾಟೆ ತೆಗೆದುಕೊಂಡರು.

ಇದು ರಾಜಕೀಯ ಸಭೆ ಅಲ್ಲ :

ದಿಶಾ ಸಭೆಯಲ್ಲಿ ಪರಸ್ಪರ ಮಾತಿನ ಚಕಮಕಿ ನಡೆಯಿತು.

ನೀವು ಅಕ್ರಮದ ಬಗ್ಗೆ ಮಾತಾಡ್ತೀರಾ, ನಿಮ್ಮ ಸುತ್ತಮುತ್ತಲೇ ಅಕ್ರಮ ವ್ಯಕ್ತಿಗಳು ಇದ್ದಾರೆ..ಮಂಡ್ಯ ಜನರ ಮರ್ಯಾದೆ ಹೋಗ್ತಿದೆ. ಮಂಡ್ಯ ಜನರ ದಿಕ್ಕು ತಪ್ಪಿಸುವ ಕೆಲಸ ಇದು. ಇದು ರಾಜಕೀಯ ಮಾತಾಡುವ ಸ್ಥಳವಲ್ಲ, ರಾಜಕೀಯ ಮಾಡುವ ಸಭೆಯಲ್ಲ. ಅಭಿವೃದ್ಧಿ ಚರ್ಚಿಸುವ ವಿಚಾರ ಇದು. ಈ ಸಭೆಯಲ್ಲಿ ರಾಜಕೀಯ ಬೇಡ ಎಂದು ಸಂಸದೆ ಸುಮಲತಾ ಹೇಳಿದರು.

ಈ ಬಗ್ಗೆ ನನ್ನ ಗಮನಕ್ಕೆ ಶಾಸಕರು ತರಬಹುದಿತ್ತು. ನಾನು ಸಭೆಗೆ 2 ಗಂಟೆ ಮುನ್ನ ಎಸ್ಪಿಗೆ ಪತ್ರದಲ್ಲಿ ಪ್ರಶ್ನೆ ಕೇಳಿದ್ದೀನಿ. ಇದಕ್ಕೆ ಉತ್ತರ ಬೇಕೆ ಬೇಕು ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಪಟ್ಟು ಹಿಡಿದರು. ಅಲ್ಲದೇ ‘ಮೊದಲು ಉತ್ತರ ಕೊಡಿ, ನಂತರ ಸಭೆ ನಡೆಸಿ’ ಎಂದರು.

Share This Article
Leave a comment