December 22, 2024

Newsnap Kannada

The World at your finger tips!

a5f028b4 36fa 490d bc77 81c5c65b2b57

ನಾಳೆ ಮಂಡ್ಯ ಡಿಸಿಸಿ ಬ್ಯಾಂಕ್ ಚುನಾವಣೆ – ಕಾಂಗ್ರೆಸ್ ನ ಅಶ್ವತ್ಥ ಜೆಡಿಎಸ್ ಅಂಗಳದಲ್ಲಿ

Spread the love
  • ಡಿಸಿಸಿ ಬ್ಯಾಂಕ್ ನ ಚುನಾವಣೆಯ ನಿರ್ವಹಣೆ ಹೊಣೆ ಮಾಜಿ ಮಂತ್ರಿ ಪುಟ್ಟರಾಜು ಹೆಗಲಿಗೆ
  • ಜೆಡಿಎಸ್ ನ 4 ಸದಸ್ಯರೊಂದಿಗೆ ಕಾಂಗ್ರೆಸ್ ನ ಸಿ. ಅಶ್ವತ್ಥ ಈಗ ಜೆಡಿಎಸ್ ಅಂಗಳದಲ್ಲಿ ಇದ್ದಾರೆ.
  • ದೀಪಾವಳಿ ಹಬ್ಬದ ಸಂಭ್ರಮ ಬಿಟ್ಟು‌ ಪಕ್ಷ ಕ್ಕೆ ಅಧಿಕಾರದ ಬಲ ತುಂಬಲು ಪುಟ್ಟರಾಜು ಅಶ್ವತ್ಥ ಸೇರಿದಂತೆ ಎಲ್ಲಾ ಸದಸ್ಯರನ್ನು ತಮ್ಮ ಉಸ್ತುವಾರಿಯಲ್ಲಿ ಅಜ್ಙಾತ ಸ್ಥಳದಲ್ಲಿ ನೋಡಿ ಕೊಳ್ಳುತ್ತಿದ್ದಾರೆ.
  • ಜೆಡಿಎಸ್ – ಬಿಜೆಪಿ ಮೈತ್ರಿಗೆ ನಾಂದಿ ಹಾಡಿರುವ ಡಿಸಿಸಿ ಬ್ಯಾಂಕ್ ಚುನಾವಣೆಗೆ ಮಾಜಿ ಸಿಎಂ ಕುಮಾರಸ್ವಾಮಿ ಎಂಟ್ರಿ ಕೊಟ್ಟಿರುವುದು ಮತ್ತಷ್ಟು ರಂಗೇರಿದೆ.

ಪ್ರತಿಷ್ಠಿತ ಕಣವಾಗಿರುವ ಮಂಡ್ಯ ಡಿಸಿಸಿ ಬ್ಯಾಂಕ್ ನ ಅಧ್ಯಕ್ಷ – ಉಪಾಧ್ಯಕ್ಷರ ಚುನಾವಣೆ ನಾಳೆ ನಡೆಸಲು ಸಿದ್ದತೆ ಗಳು ಪೂರ್ಣಗೊಂಡ ಬೆನ್ನಲ್ಲೇ ಬಿರುಸಿನ ರಾಜಕೀಯ ಚಟುವಟಿಕೆಗಳೂ ಕೂಡಾ ಕುತೂಹಲ ಘಟ್ಟ ತಲುಪಿವೆ.

ಈ ಕ್ಷಣದವರೆಗೂ ಜೆಡಿಎಸ್ – ಬಿಜೆಪಿ ಮೈತ್ರಿ ಫಲಪ್ರದಗೊಳಿಸಲು ಸಾಕಷ್ಟು ಪ್ರಯತ್ನ ಗಳು ಮುಂದುವರೆದಿವೆ.

ಡಿಸಿಸಿ ಬ್ಯಾಂಕ್ ನಲ್ಲಿ ಅಧಿಕಾರ ಹಿಡಿಯಲು ಜೆಡಿಎಸ್ – ಬಿಜೆಪಿ ಪ್ರತಿಷ್ಠೆಯನ್ನು ಪಣಕ್ಕೆ ಇಟ್ಟಿವೆ. ಕಾಂಗ್ರೆಸ್ ನಿರ್ದೇಶಕ ಸಿ. ಅಶ್ವತ್ಥ ಜೆಡಿಎಸ್ ಪಾಳೆಯದಲ್ಲಿ ಗುರುತಿಸಿಕೊಂಡು ಅಜ್ಞಾತ ಸ್ಥಳದಲ್ಲಿ ಬಿಡಾರ ಹೂಡಿದ್ದಾರೆಂದು ಗೊತ್ತಾಗಿದೆ.

dcc bank

ನಾಳೆ ಮಂಡ್ಯಕ್ಕೆ ಸದಸ್ಯರ ಆಗಮನ:

ಅಜ್ಙಾತ ಸ್ಥಳದಲ್ಲಿರುವ ಎಲ್ಲಾ ಸದಸ್ಯರು ನಾಳೆ (ನ.17) ಚುನಾವಣೆಯ ವೇಳೆಗೆ ಮಂಡ್ಯ ಡಿಸಿಸಿ ಬ್ಯಾಂಕ್ ಗೆ ಆಗಮಿಸುವ ನಿರೀಕ್ಷೆ ಇದೆ.

ಈ ನಡುವೆ ಬಿಜೆಪಿಯು ಸಾಸಲು ಪ್ರಕಾಶ್ ಅವರನ್ನು ಬ್ಯಾಂಕ್ ಗೆ ನಾಮಿನಿ‌ಯಾಗಿ ನೇಮಕ ಮಾಡಿತ್ತು. ಅವರನ್ನು ಬದಲಾವಣೆ ಮಾಡಬಹುದು ಅಥವಾ ಮುಂದುವರೆಸುವ
ಸಾಧ್ಯತೆ ಯೂ ಇದೆ.

ಶೀಳನೆರೆ ಅಂಬರೀಶ್ ಸೇರಿದಂತೆ ಇಬ್ಬರು ,ಮೂರು ಹೊಸ ಹೆಸರುಗಳು ಕೇಳಿ ಬಂದಿವೆ. ನಾಳೆ ಬೆಳಿಗ್ಗೆ ನಾಮಿನಿ ನೇಮಕ ಫೈನಲ್ ಆಗಬಹುದು.

Copyright © All rights reserved Newsnap | Newsever by AF themes.
error: Content is protected !!