ಮಂಡ್ಯ ಡಿಸಿಸಿ ಬ್ಯಾಂಕ್ ಚುನಾವಣೆ: ಮಂಡ್ಯ ಸಂಸದೆ ಸುಮಲತಾ ಎಂಟ್ರಿ

Team Newsnap
1 Min Read

ಮಂಡ್ಯ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯು ನಾಳೆ ನಡೆಯಲಿದೆ. ಡಿಸಿಸಿ ಬ್ಯಾಂಕ್ ಗದ್ದುಗೆಗೆ ತೀವ್ರ ಜಿದ್ದಾಜಿದ್ದಿ ಏರ್ಪಟ್ಟಿದೆ.

ಸಂಸದೆ ಸುಮಲತಾ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆದಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.‌

ಆಂತರಿಕವಾಗಿ ಮಂಡ್ಯ ಡಿಸಿಸಿ ಬ್ಯಾಂಕ್ ನಲ್ಲಿ ಬಿಜೆಪಿ – ಜೆಡಿಎಸ್ ಮೈತ್ರಿ ಗೆ ಬಲು ವಿರೋಧವಿದ್ದರೂ ಈ ಕುರಿತಂತೆ ಯಾವುದೇ ಪ್ರತಿಕ್ರಿಯೆ ನೀಡಲು ಬಯಸದ ಸಂಸದೆ ರೈತ ಪರ ಕೆಲಸ ಮಾಡುವವರು ಅಧ್ಯಕ್ಷ ರಾಗಲಿ ಎಂದಷ್ಟೇ ಹೇಳಿರುವುದು ಜಾಣ ನಡೆಯಾಗಿದೆ.

dcc bank

12 ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಗರು 8, ಜೆಡಿಎಸ್ ಬೆಂಬಲಿಗರು 4 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರು. ಕಾಂಗ್ರೆಸ್ ಅಧಿಕಾರ ಹಿಡಿಯುವುದು ನಿಶ್ಚಿತವಾಗಿದ್ದರೂ 4 ಸ್ಥಾನ ಗಳಿಸಿರುವ ಜೆಡಿಎಸ್ – ಬಿಜೆಪಿ ಮೈತ್ರಿ ಹಾಗೂ ಕಾಂಗ್ರೆಸ್ ನ ಅತೃಪ್ತ ನಿರ್ದೇಶಕರನ್ನು ತನ್ನತ್ತ ಸೆಳೆದು ಅಧಿಪತ್ಯ ಸ್ಥಾಪಿಸಲು ಪ್ರತಿತಂತ್ರ ದಿಂದ ಡಿಸಿಸಿ ಬ್ಯಾಂಕ್ ಆಡಳಿತ ಕಾಂಗ್ರೆಸ್ ದಕ್ಕುತ್ತದೆ ಎಂಬ ಅನುಮಾನ‌ ಹೆಚ್ಚುತ್ತಲೇ ಇದೆ.

ಮಂಡ್ಯ ಸಂಸದೆ ಇಂದು ಮುಖ್ಯಮಂತ್ರಿ ಗಳನ್ನು ಭೇಟಿ ಮಾಡಿ ಈ ಸಂಬಂಧ ಮಾತುಕತೆ ನಡೆಸಿದ್ದಾರೆ.

ಸಿಎಂ ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸುಮಲತಾ “ಮಂಡ್ಯ ಡಿಸಿಸಿ ಬ್ಯಾಂಕ್ ಚುನಾವಣೆ ವಿಚಾರವಾಗಿ ನಾನು, ರಾಜಕೀಯ, ಜೆಡಿಎಸ್ ಮೈತ್ರಿ ವಿಚಾರ ಪ್ರಸ್ತಾಪ ಮಾಡಲ್ಲ. ಪಕ್ಷದ ವಿಚಾರ ಮಾತನಾಡಲ್ಲ. ಏನೇನು ಬೆಳವಣಿಗೆ ಆಗುತ್ತಿದೆ ಅಂತ ನನಗೂ ಗೊತ್ತು. ಆದರೆ ನಾನು ಹೇಳೋದಿಷ್ಟೇ, ರೈತರ ಪರ ಕೆಲಸ ಮಾಡೋರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಲಿ.  ಇದನ್ನೇ ಸಿಎಂ ಬಳಿಯೂ ಮನವಿ ಮಾಡಿದ್ದೇನೆ” ಎಂದು ಹೇಳಿದ್ದಾರೆ.

ಅಂತಿಮವಾಗಿ ಸಂಸದರು ಮಾತ್ರ ಡಿಸಿಸಿ ಬ್ಯಾಂಕ್ ವಿಚಾರದಲ್ಲಿ ಯಾವುದೇ ಸ್ಪಷ್ಟ ನಿಲುವು ವ್ಯಕ್ತಪಡಿಸಲು ಮುಂದಾಗಿಲ್ಲ.

TAGGED:
Share This Article
Leave a comment