ಮಾಜಿ ಸಚಿವ ಅರವಿಂದ ಲಿಂಬಾವಳಿ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಪ್ರದೀಪ್ ಕೇಸ್ ತನಿಖೆ ತೀವ್ರಗೊಂಡಿದೆ.
ಕಗ್ಗಲಿಪುರ ಪೊಲೀಸರು ಡೆತ್ ನೋಟ್ನಲ್ಲಿ ಉಲ್ಲೇಖಿಸಲಾದ ಅರವಿಂದ ಲಿಂಬಾವಳಿ ಸೇರಿದಂತೆ ಆರು ಮಂದಿ ಎಫ್ಐಆರ್ ದಾಖಲಿಸಿದ್ದಾರೆ.ವೈಕುಂಠ ಏಕಾದಶಿ 2023 ( Vaikuntha Ekadashi )
ಮೃತ ವ್ಯಕ್ತಿಯು ಮೈಸೂರು ನಿವಾಸಿ. ಈತ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದ. ಕಾರಿನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಈತ ಗೋಪಿ, ಸೋಮಯ್ಯ, ರಮೇಶ್ ರೆಡ್ಡಿ, ಅರವಿಂದ ಲಿಂಬಾವಳಿ, ಡಾ. ಜಯರಾಮ್ ರೆಡ್ಡಿ, ರಾಘವ ಭಟ್ ನನ್ನ ಸಾವಿಗೆ ಕಾರಣ ಎಂದು ಬರೆದಿದ್ದ.
ಈಗಾಗಲೇ ಪೊಲೀಸರು ತನಿಖೆ ಭಾಗವಾಗಿ ಮೊದಲ ಹಂತದಲ್ಲಿ ಪ್ರದೀಪ್ ಕಾಲ್ ರೆಕಾರ್ಡ್ ಡೀಟೈಲ್ಸ್ ತೆಗೆದಿದ್ದಾರೆ. ಪ್ರದೀಪ್ ಸಿಡಿಆರ್ ಆಧಾರದ ಮೇರೆಗೆ ಪರಿಶೀಲನೆ ನಡೆಸುತ್ತಿದ್ದಾರೆ.
ಪ್ರದೀಪ್ ಜತೆಗೆ ಯಾರ ಸಂಬಂಧ ಇದೆ. ಮೃತ ಪ್ರದೀಪ್ ಯಾರೊಂದಿಗೆ ವ್ಯವಹಾರ ಮಾಡಿದ್ದರು. ಆತನ ವಾಟ್ಸಪ್ನಲ್ಲಿ ಡೀಟೈಲ್ಸ್ ಏನಿದೆ..? ಸೂಸೈಡ್ ಮಾಡಿಕೊಳ್ಳುವಾಗ ಬಳಸಿದ ಗನ್ ಯಾರದ್ದು..? ಅದರ ಲೈಸನ್ಸ್ ನಂಬರ್ ಏನು..? ಗನ್ ಮೇಲಿರುವ ಬೆರಳಚ್ಚು ಯಾರದ್ದು..? ಹೀಗೆ ಹತ್ತಾರು ವಿಚಾರಗಳ ಕುರಿತಾದ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು