ವಾಣಿಜ್ಯ ಬಳಕೆ ಸಿಲಿಂಡರ್‌ ದರ 25 ರೂ. ಹೆಚ್ಚಳ: ಹೊಸ ವರ್ಷವೇ ದರ ಏರಿಕೆ ಶಾಕ್

Team Newsnap
1 Min Read

ಹೊಸ ವರ್ಷದ ಆರಂಭದ ದಿನವೇ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ದರ ಹೆಚ್ಚಳವಾಗಿದೆ.

ತತ್‌ಕ್ಷಣದಿಂದಲೇ ಅನ್ವಯವಾಗುವಂತೆ ರವಿವಾರ ತೈಲ ಕಂಪೆನಿಗಳು 19 ಕೆಜಿ ವಾಣಿಜ್ಯ ಸಿಲಿಂಡರ್‌ ದರವನ್ನು 25 ರೂ. ಏರಿಕೆ ಮಾಡಿವೆ.ಗುಂಡು ಹಾರಿಸಿ ಆತ್ಮಹತ್ಯೆ- ಮಾಜಿ ಸಚಿವ ಲಿಂಬಾವಳಿ ಸೇರಿ 6 ಮಂದಿ ವಿರುದ್ಧ FIR

ಬೆಂಗಳೂರಿನಲ್ಲಿ 19 ಕೆ.ಜಿ. ಸಿಲಿಂಡರ್‌ ದರ 1,685.50 ರೂ.ಗಳಾದರೆ ದಿಲ್ಲಿಯಲ್ಲಿ 1,769 ರೂ, ಮುಂಬಯಿಯಲ್ಲಿ 1,721 ರೂ. ಹಾಗೂ ಚೆನ್ನೈಯಲ್ಲಿ 1,971 ರೂ. ಆಗಲಿದೆ. ಗೃಹಬಳಕೆಯ ಅಡುಗೆ ಅನಿಲ ಸಿಲಿಂಡರ್‌ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಕಳೆದ ವರ್ಷ ಒಟ್ಟು ನಾಲ್ಕು ಬಾರಿ ಅಡುಗೆ ಅನಿಲ ಸಿಲಿಂಡರ್‌ ದರವನ್ನು ಕಂಪೆನಿಗಳು ಹೆಚ್ಚಳ ಮಾಡಿದ್ದವು.

Share This Article
Leave a comment