ಬೆಂಗಳೂರು : ಸಿಗರೇಟ್ ಸೇದುವ ವೇಳೆ ಬಾಲ್ಕನಿಯಿಂದ ಆಯತಪ್ಪಿ ಬಿದ್ದು ಟೆಕ್ಕಿಯೊಬ್ಬ ಸಾವನ್ನಪ್ಪಿರುವ ಘಟನೆ ಕೆ.ಆರ್.ಪುರಂ ಅಯ್ಯಪ್ಪನಗರದ ಕೊಡಿಗೇಹಳ್ಳಿಯಲ್ಲಿ ನಡೆದಿದೆ.
ದಿಪಾಂಶು ಶರ್ಮಾ (27) ಮೃತ ಟೆಕ್ಕಿ. ಸ್ನೇಹಿತರ ಜೊತೆ ಪಾರ್ಟಿ ಮಾಡುತ್ತಿದ್ದಾಗ ದುರಂತ ಸಂಭವಿಸಿದೆ.
ದಿಪಾಂಶು ಶರ್ಮಾ, ಇಬ್ಬರು ಯುವತಿಯರು ಹಾಗೂ ಓರ್ವ ಸ್ನೇಹಿತ ಸೇರಿ ಪಾರ್ಟಿ ಮಾಡಿದ್ದರು. ಪಾರ್ಟಿ ವೇಳೆ ಕಂಠಪೂರ್ತಿ ಕುಡಿದು ಗಾಂಜಾ ಸೇವನೆ ಮಾಡಿರುವ ಅನುಮಾನ ಪೊಲೀಸರನ್ನು ಕಾಡಿದೆ.ಚೆಕ್ ಬೌನ್ಸ್ ಪ್ರಕರಣ : ಸಚಿವ ಮಧು ಬಂಗಾರಪ್ಪಗೆ 6.96 ಕೋಟಿ ದಂಡ
33ನೇ ಮಹಡಿಯ ಬಾಲ್ಕನಿಯಿಂದ ಯುವಕ ಬಿದ್ದಿದ್ದಾನೆ ಎಂದು ಹೇಳಲಾಗುತ್ತಿದೆ. ಮೃತ ಟೆಕ್ಕಿಯು ಆರ್ಮಿ ಸಿಬ್ಬಂದಿಯ ಮಗನಾಗಿದ್ದು, ಉತ್ತರ ಪ್ರದೇಶ ಮೂಲದವ. ಪಿಜಿಯಲ್ಲಿ ವಾಸವಾಗಿದ್ದು ಮೊನ್ನೆ ರಾತ್ರಿ ಸ್ನೇಹಿತರ ಮನೆಯಲ್ಲಿ ಪಾರ್ಟಿಗೆಂದು ಹೋಗಿದ್ದ. ಪೊಲಿಸರು ತನಿಖೆ ನಡೆಸುತ್ತಿದ್ದಾರೆ .
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ