ಬೆಳಗಾವಿ ಡಿಪೋ-1ರ ಅಳ್ನಾವರ್-ಬೆಳಗಾವಿ ಬಸ್‌ನಲ್ಲಿ ಮೆಕ್ಯಾನಿಕ್ ಕೇಶವ ಕಮಡೊಳಿ (57) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಬೆಳಗಾವಿಯ ಹಳೆ ಗಾಂಧಿ ನಗರದಲ್ಲಿ ವಾಸವಾಗಿದ್ದರು ಮತ್ತು ಬಸ್‌ಗಳ ವಾಶಿಂಗ್ ಹಾಗೂ ಪಂಚರ್ ತೆಗೆಯುವ ಕೆಲಸ ಮಾಡುತ್ತಿದ್ದರು.
ಮೃತ ಕೇಶವ್‌ಗೆ ಬೆನ್ನು ನೋವಿದ್ದರೂ ಸಹ, ಅಧಿಕಾರಿಗಳು ಅವರನ್ನು ಪಂಚರ್ ತೆಗೆಯುವ ಕೆಲಸಕ್ಕೆ ಒತ್ತಾಯಿಸುತ್ತಿದ್ದರು ಎನ್ನಲಾಗುತ್ತಿದೆ. ಈ ಕುರಿತು ಅವರ ಕುಟುಂಬಸ್ಥರು ಡಿಪೋ ಮ್ಯಾನೇಜರ್ ಲಿಂಗರಾಜ್ ಲಾಠಿ ಹಾಗೂ ಸಹಾಯಕ ಕಾರ್ಯ ಅಧೀಕ್ಷಕ ಅನಿಲ್ ಬಾಂದೇಕರ್‌ಗೆ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಲಿಲ್ಲ.
ಕೆಲಸದ ಒತ್ತಡವನ್ನು ಸಹಿಸಲಾಗದೆ ಕೇಶವ್ ಆತ್ಮಹತ್ಯೆ ಮಾಡಿಕೊಂಡಿರುವುದು ಶಂಕೆಗೆ ಕಾರಣವಾಗಿದ್ದು, ಅವರ ಕುಟುಂಬಸ್ಥರು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಮಾರ್ಕೆಟ್ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು