ರಾಮನಗರವನ್ನು ಮಾದರಿ ಜಿಲ್ಲೆ ಮಾಡಿ: ಅಬ್ದುಲ್ ಅಜೀಮ್

Team Newsnap
1 Min Read

ರಾಮನ ಹೆಸರು ಹೊಂದಿರುವ ರಾಮನಗರ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ಮಾಡಿ ಎಂದು ಅಲ್ಪಸಂಖ್ಯಾತರ ಕಲ್ಯಾಣ ಆಯೋಗದ ಅಧ್ಯಕ್ಷರಾದ ಅಬ್ದುಲ್ ಅಜೀಮ್ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣ ದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅಬ್ದುಲ್ ಅಜೀಮ್ ರಾಮನಗರ ನಗರ ಪ್ರದೇಶದಲ್ಲಿ ಐಜೂರು ಭಾಗದಲ್ಲಿರುವ ಬಡಾವಣೆಗಳು ಮೂಲಭೂತ ಸೌಕರ್ಯಗಳನ್ನು ಹೊಂದಿದೆ ಹಾಗೂ ವ್ಯವಸ್ಥಿತವಾಗಿ ನಿರ್ಮಾಣವಾಗಿದೆ ಎಂದರು.

ಯಾರಬ್ ನಗರ, ಗೌಸಿಯಾ ನಗರ, ಟಿಪ್ಪು ನಗರ ಮುಂತಾದ ಬಡಾವಣೆಗಳಲ್ಲಿ ಸರಿಯಾದ ಸೌಕರ್ಯಗಳಲ್ಲಿ. ಜನರಿಗೆ ಮೊದಲು ಕುಡಿಯುವ ನೀರು ಹಾಗೂ ಶುದ್ದ ಗಾಳಿ ಒದಗಿಸಿಕೊಡಬೇಕು. ಈ ಬಡಾವಣೆಗಳ ಮನೆಯ ಮುಂಭಾಗ ಸಮಾಜಿಕ ಅರಣ್ಯ ದವರ ಸಹಕಾರದೊಂದಿಗೆ ಗಿಡ ನೆಡುವ ಅಭಿಯಾನ ನಡೆಸಿ ಮನೆಯವರಿಗೆ ಗಿಡಗಳನ್ನು ಪೋಷಿಸುವಂತೆ ತಿಳಿಸಿ.ಬಡಾವಣೆಗಳಿಗೆ ನೀರು ಸರಬರಾಜು ಮಾಡುವ ಪೈಪ್ ಹಾಗೂ ಒಳಚರಂಡಿ ಪೈಪ್ ಗಳನ್ನು ಪರಿಶೀಲಿಸಿ ತುಂಬ ಹಳೆಯದಾಗಿ ರಂದ್ರ ಉಂಟಾದರೆ ಕುಡಿಯುವ ನೀರು ಒಳಚರಂಡಿ ನೀರಿನೊಂದಿಗೆ ಮಿಶ್ರಣವಾಗಿ ರೋಗಗಳು ಉಂಟಾಗುತ್ತದೆ ಎಂದರು.

ರಾಮನಗರ ತುಂಬೆಲ್ಲಾ ರಸ್ತೆ ಕಿರಿದಾಗಿದೆ. ಇಲ್ಲಿ ವಾಹನ ನಿಲುಗಡೆ ಹಾಗೂ ಸಂಚಾರದ ಬಗ್ಗೆ ವ್ಯವಸ್ಥೆ ಮಾಡಿ. ಜಿಲ್ಲೆಯಲ್ಲಿ ಯಾವುದೇ ಮತೀಯ ಕಲಹಗಳು ಇಲ್ಲ ಆಗಾಗ ಶಾಂತಿ ಸಭೆಗಳನ್ನು ನಡೆಸಲಾಗುತ್ತಿದೆ ಎಂದು ಪೊಲೀಸ್ ಇಲಾಖೆ ಅವರು ಮಾಹಿತಿ ನೀಡಿದ್ದಾರೆ. ಮತೀಯವಾಗಿ ಸೂಕ್ಷ್ಮವಾಗಿರುವ ಪ್ರದೇಶದಲ್ಲಿ ಶಾಂತಿ ಸಮಿತಿ ರಚಿಸಿ ಸಮಿತಿಗೆ ಮತೀಯ ಕಲಹಗಳನ್ನು ತಡೆಯುವ ಶಕ್ತಿ ಇರುವ ಪ್ರಭಾವಿ ವ್ಯಕ್ತಿಗಳನ್ನು ನೇಮಕ ಮಾಡಿ ಎಂದರು.

ರಾಮನಗರ ಜಿಲ್ಲೆಯಲ್ಲಿ ಶಿಕ್ಷಕರ ಹುದ್ದೆ ಖಾಲಿ ಇದೆ. ಇದನ್ನು ಭರ್ತಿ ಮಾಡುವ ಬಗ್ಗೆ ಚರ್ಚಿಸಲಾಗುವುದು. ಅಧಿಕಾರಿಗಳು ಜನಸ್ನೇಹಿ ಆಡಳಿತ ನೀಡಿ ಎಂದರು.

ಸುದ್ದಿ ಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಎಂ.ಎಸ್ .ಅರ್ಚನಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ, ಅಪರ ಜಿಲ್ಲಾಧಿಕಾರಿ ಜವರೇಗೌಡ ಟಿ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Share This Article
Leave a comment