December 22, 2024

Newsnap Kannada

The World at your finger tips!

mandya , DC , kumba mela

Make all preparations for Kumbh Mela program - DC Ashwati instructs officials ಕುಂಭಮೇಳ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಿ - ಅಧಿಕಾರಿಗಳಿಗೆ ಡಿಸಿ ಅಶ್ವತಿ ಸೂಚನೆ

ಕುಂಭಮೇಳ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಿ – ಅಧಿಕಾರಿಗಳಿಗೆ ಡಿಸಿ ಅಶ್ವತಿ ಸೂಚನೆ

Spread the love

ಕೆ.ಆರ್.ಪೇಟೆ ತಾಲ್ಲೂಕಿನ ಅಕ್ಕಿ ಹೆಬ್ಬಾಳು ಹೋಬಳಿಯ ಅಂಬಿಗರಹಳ್ಳಿ – ಸಂಗಾಪುರ-ಪುರದ ತ್ರಿವೇಣಿ ಸಂಗಮದಲ್ಲಿ ಅಕ್ಟೋಬರ್ 13 ರಿಂದ ಅಕ್ಟೋಬರ್ 16 ರವರೆಗೆ ಕುಂಭಮೇಳ ನಡೆಯಲಿದೆ. ಕುಂಭಮೇಳ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಸ್ ಅಶ್ವತಿ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಡೆದ ಕೆ.ಆರ್ ಪೇಟೆ ತಾಲ್ಲೂಕಿನ ಅಂಬಿಗರಹಳ್ಳಿ ಹತ್ತಿರ ತ್ರಿವೇಣಿ ಸಂಗಮದಲ್ಲಿ ನಡೆಯುವ ಕುಂಭಮೇಳ ಕಾರ್ಯಕ್ರಮಕ್ಕೆ ರಚಿಸಿದ ಸಮಿತಿಯ ಸದಸ್ಯರುಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.ಇದನ್ನು ಓದಿ –ರಾಜ್ಯಸಭೆ ಚುನಾವಣೆ: ಅಡ್ಡ ಮತದಾನ ಮಾಡಿದ ಜೆಡಿಎಸ್‌ನ ಇಬ್ಬರು ಶಾಸಕರಿಗೆ ನೋಟಿಸ್ ಜಾರಿ

ಅಕ್ಟೋಬರ್ 06 ರಂದು ಮಲೈ ಮಹದೇಶ್ವರ ಬೆಟ್ಟದಲ್ಲಿ 3 ಜ್ಯೋತಿರಥಕ್ಕೆ ಚಾಲನೆ ನೀಡಲಾಗುವುದು ಜ್ಯೋತಿರಥಗಳು ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳ ವಿವಿಧ ಗ್ರಾಮಗಳಲ್ಲಿ ಸಂಚರಿಸಿ ಅಕ್ಟೋಬರ್ 13 ರಂದು ಕೆ.ಆರ್.ಪೇಟೆಗೆ ತಲುಪಲಿದೆ. ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ಜ್ಯೋತಿ ಮೆರವಣಿಗೆ ನಡೆಯಲಿದೆ.

ನಂತರದಲ್ಲಿ ಅಂಬಿಗರ ಹಳ್ಳಿಯ ತ್ರಿವೇಣಿ ಸಂಗಮಕ್ಕೆ ಜ್ಯೋತಿರಥ ತಲುಪಲಿದೆ. ಕುಂಭ ಮೇಳ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ವಿವಿಧ ಸಮಿತಿಯನ್ನು ರಚಿಸಲಾಗಿದ್ದು, ಅಧಿಕಾರಿಗಳು ತಮಗೆ ವಹಿಸಿರುವ ಜವಾಬ್ದಾರಿಯನ್ನು ಯಾವುದೇ ಲೋಪಕ್ಕೆ ಆಸ್ಪಾದ ನೀಡದೆ ಕಾರ್ಯನಿರ್ವಹಿಸಲು ಸೂಚಿಸಿದರು.

ಆಹಾರ ಸಮಿತಿ:

ಲಕ್ಷಾಂತರ ಭಕ್ತಾಧಿಗಳು ಕುಂಭ ಮೇಳಕ್ಕೆ ಆಗಮಿಸಲಿದ್ದಾರೆ.ಭಕ್ತಾಧಿಕಾರಿಗಳಿಗೆ ಬೆಳಗಿನ ಉಪಹಾರ,ಮಧ್ಯಾಹ್ನ ಹಾಗೂ ರಾತ್ರಿಯ ಊಟದ ವ್ಯವಸ್ಥೆಯಾಗಬೇಕು. ಈಗಾಗಲೇ ಹಲವಾರು ದಾನಿಗಳು ಅಕ್ಕಿ,ಬೇಳೆ,ಎಣ್ಣೆ ಇನ್ನಿತರ ಆಹಾರ ಪದಾರ್ಥಗಳನ್ನು ನೀಡುತ್ತಿದ್ದು,ಅವುಗಳನ್ನು ಸೂಕ್ತವಾಗಿ ಸಂಗ್ರಹಿಸಿ ಕೊಳ್ಳಬೇಕು.ಇನ್ನುಳಿದಂತೆ ಬೇಕಿರುವ ಆಹಾರ ಪದಾರ್ಥಗಳ ವ್ಯವಸ್ಥೆ ಮಾಡಿಕೊಳ್ಳಬೇಕು.
ಭಕ್ತಾದಿಗಳಿಗೆ ಆಹಾರ ವಿತರಿಸಲು ಬೇಕಿರುವ ಸಂಖ್ಯೆಯಲ್ಲಿ ಕೌಂಟರ್ ಗಳನ್ನು ತೆರೆಯಿರಿ ಎಂದರು.

ಸ್ವಚ್ಛತಾ ಸಮಿತಿ:

ತ್ರಿವೇಣಿ ಸಂಗಮದಲ್ಲಿ ನಡೆಯುವ ನಾಲ್ಕು ದಿನ ಕುಂಭಮೇಳದಲ್ಲಿ ಲಕ್ಷಾಂತರ ಭಕ್ತಾದಿಗಳು ಭಾಗವಹಿಸಲಿದ್ದು, ಮಂಡ್ಯ ಜಿಲ್ಲೆಯ ಜನರ ಜೊತೆಗೆ ಬೇರೆ ಬೇರೆ ಜಿಲ್ಲೆಗಳಿಂದ ಜನ ಸಾಮಾನ್ಯರು ಹೆಚ್ಚಿನ ಸಂಖ್ಯೆಯಲ್ಲಿ ಕುಂಭಮೇಳ ಕಾರ್ಯಕ್ರಮಕ್ಕೆ ಬರುತ್ತಾರೆ. ಹಾಗಾಗಿ ಕುಂಭಮೇಳ ನಡೆಯುವ ಸ್ಥಳ ಹಾಗೂ ಸುತ್ತಮುತ್ತಲು ಬಹಳ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಸ್ವಚ್ಛತಾ ಕಾರ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪೌರಕಾರ್ಮಿಕರನ್ನು ನಿಯೋಜಿಸುವಂತೆ ಸೂಚಿಸಿದರು.

ಮೂಲ ಸೌಕರ್ಯಗಳಾದ ರಸ್ತೆ, ಶೌಚಾಲಯ,ವಾಹನ ನಿಲ್ದಾಣ, ಕುಡಿಯುವ ನೀರು, ಊಟೋಪಚಾರ, ನೈರ್ಮಲ್ಯ, ತಂಗುದಾಣಗಳು, ವೈದ್ಯಕೀಯ ಸೇವೆಗಳು ಮತ್ತು ತುರ್ತುಚಿಕಿತ್ಸೆ, ಅಗ್ನಿಶಾಮಕದಳ, ಹೆಲಿಪ್ಯಾಡ್, ರಕ್ಷಣಕಾರ್ಯ ಗಳ ವ್ಯವಸ್ಥೆ ಕಲ್ಪಿಸಲು ಸಿದ್ಧತೆ ಮಾಡಿಕೊಳ್ಳಿ ಎಂದು ಹೇಳಿದರು.ಎಐಸಿಸಿ ಅಧ್ಯಕ್ಷೀಯ ಚುನಾವಣೆ – ಪುತ್ರನೊಂದಿಗೆ ಚರ್ಚಿಸಲು ಸೋನಿಯಾ ಕೆಲ ಹೊತ್ತಿನಲ್ಲಿ ಮೈಸೂರಿಗೆ

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್.ನಾಗರಾಜು ತಹಶೀಲ್ದಾರ್ ನರಸಿಂಹಮೂರ್ತಿ, ನಂದೀಶ್, ಜಿಲ್ಲಾ ಯೋಜನಾಧಿಕಾರಿ ತುಷಾರಮಣಿ, ಜಿಲ್ಲಾ ವಾರ್ತಾಧಿಕಾರಿ ಎಸ್.ಹೆಚ್ ನಿರ್ಮಲ, ಕುಂಭಮೇಳ ಕಾರ್ಯಕ್ರಮದ ಸಂಯೋಜಕ ರಂಗನಾಥ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Copyright © All rights reserved Newsnap | Newsever by AF themes.
error: Content is protected !!