December 24, 2024

Newsnap Kannada

The World at your finger tips!

tugudip

ನಟ ತೂಗುದೀಪ್ ಶ್ರೀನಿವಾಸ್ ಪ್ರತಿಮೆ ನಿರ್ಮಾಣಕ್ಕಾಗಿ ಮಹೇಂದ್ರ ಸಿಂಗ್ ಕಾಳಪ್ಪ ಒತ್ತಾಯ

Spread the love

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿ ಬಳಗದ ವತಿಯಿಂದ ಲಲಿತ ಮಹಲ್ ರಸ್ತೆಯಲ್ಲಿರುವ ತೂಗುದೀಪ್ ಶ್ರೀನಿವಾಸ್ ವೃತ್ತದಲ್ಲಿ ನಟ ಭಯಂಕರ ತೂಗುದೀಪ್ ಶ್ರೀನಿವಾಸ್ ರವರ 81ನೇ ಜನ್ಮ ದಿನಾಚರಣೆಯನ್ನು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಆಚರಿಸಲಾಯಿತು.

ಈ ವೇಳೆ ಸಾರ್ವಜನಿಕರಿಗೆ ಸಿಹಿ ವಿತರಿಸಿ ಮಾತನಾಡಿದ ಪರಿಸರ ಜಾಗೃತಿ ಅಧ್ಯಕ್ಷ ಮಹೇಂದ್ರಸಿಂಗ್ ಕಾಳಪ್ಪ ಬನ್ನೂರು ಕನ್ನಡ ಸಿನಿಮಾರಂಗದಲ್ಲಿ ಖಳನಟನಿಗೂ ಬೇರೆಯದ್ದೇ ಗತ್ತು-ಗಾಂಭೀರ್ಯ ಇದೆ ಎನ್ನುವುದನ್ನು ಅಭಿನಯದ ಮೂಲಕವೇ ಪ್ರೇಕ್ಷಕರಿಗೆ ತೋರಿಸಿಕೊಟ್ಟವರು ನಟ ತೂಗುದೀಪ ಶ್ರೀನಿವಾಸ್ ಎಂದರು.

ಕಲಾವಿದನಿಗೆ ಸಾವಿಲ್ಲ. ಸಾವು ಅವರ ದೇಹಕ್ಕೆ ಮಾತ್ರ ಎನ್ನುವ ಮಾತಿದೆ. ಅಂತೆಯೇ ತೂಗುದೀಪ ಶ್ರೀನಿವಾಸ್ ಅಪಾರ ನಮ್ಮಂತಹ ಸಾವಿರಾರು ಅಭಿಮಾನಿಗಳನ್ನು ಅಗಲಿದ್ದರೂ ಕೂಡ ಇಂದಿಗೂ ಕನ್ನಡ ಸಿನಿಮಾ ಪ್ರೇಮಿಗಳ ಮನಸ್ಸಿನಲ್ಲಿ ಅವರು ಅಜರಾಮರ . ಹಾಗೆಯೇ ಮೈಸೂರಿನಲ್ಲಿ ಹುಟ್ಟಿ ಬೆಳೆದ ಈ ಮೇರು ಕಲಾವಿದನ ಪ್ರತಿಮೆಯನ್ನು ಲಲಿತಮಹಲ್ ರಸ್ತೆಯಲ್ಲಿರುವ ಅವರ ಹೆಸರಿನಲ್ಲಿರುವ ವೃತ್ತದಲ್ಲಿ ಕಂಚಿನ ಪ್ರತಿಮೆ ನಿರ್ಮಾಣ ಮಾಡಿ ಅಂಥ ಮೇರು ನಟನಿಗೆ ನಗರಪಾಲಿಕೆ ಗೌರವ ಕೊಡಬೇಕು. ಇಲ್ಲವಾದಲ್ಲಿ ಅಭಿಮಾನಿಗಳೇ
ಅವರ ಸ್ವಂತ ಹಣದಿಂದಲೇ ಪ್ರತಿಮೆ ನಿರ್ಮಾಣ ಮಾಡಲು ಮುಂದಾಗುತ್ತೇವೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಬಿಜೆಪಿ ನರಸಿಂಹರಾಜ ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷರಾದ ಲೋಹಿತ್ , ಹರೀಶ್ ನಾಯ್ಡು ,ಸುಚೇಂದ್ರ ,ದರ್ಶನ್ ಅಭಿಮಾನಿ ಬಳಗದ ಅಧ್ಯಕ್ಷರಾದ ನವೀನ್, ಸಂತೋಷ್. ಎನ್, ರೋಹಿತ್, ವರುಣ್ ,ಸಂಜಯ್ ಮುಂತಾದವರು ಉಪಸ್ಥಿತರಿದ್ದರು

Copyright © All rights reserved Newsnap | Newsever by AF themes.
error: Content is protected !!