ಸಂಸ್ಕೃತದಲ್ಲಿ ‘ಪಿತೃ’ ಎಂಬ ಶಬ್ದ ಸಾಮಾನ್ಯವಾಗಿ ‘ತಂದೆ’ ಎಂಬ ಅರ್ಥದಲ್ಲಿ ಇದ್ದರೂ, ಅದಕ್ಕೆ ‘ಪೂರ್ವಜ’ ಎಂಬ ಅರ್ಥವೂ ಇದೆ. ತಂದೆ ಹಾಗೂ ತಂದೆಯ ಸ್ಥಾನದಲ್ಲಿ ಇರುವವನು ಪಿತೃ ಎಂಬುದಾದರೆ, ತಂದೆ–ತಾಯಿ ಹಾಗೂ ಹಿಂದಿನ ತಲೆಮಾರಿನ ಎಲ್ಲರನ್ನೂ ಪಿತೃ ಶಬ್ದದಿಂದಲೇ ಹೇಳಲಾಗುತ್ತದೆ. ಪಿತೃಪಕ್ಷ ಎಂಬಲ್ಲಿ ಈ ವಿಶಾಲವಾದ ಅರ್ಥವೇ ಇದೆ. ಅದು ಪೂರ್ವಜರ ಪಕ್ಷವಾದುದರಿಂದ ಹಾಗೆಯೇ ಪ್ರಸಿದ್ಧವಾಗಿದೆ.
ಭಾದ್ರಪದ ಮಾಸದ ಕೃಷ್ಣಪಕ್ಷವನ್ನು ಪಿತೃಪಕ್ಷವೆಂದು ಕರೆಯಲಾಗುತ್ತದೆ. ಆಡುಭಾಷೆಯಲ್ಲಿ ಇದನ್ನು ‘ಪಕ್ಷ’ವೆಂದೇ ಕರೆಯುವ ರೂಢಿಯಿದೆ. ಇದನ್ನು ‘ಮಹಾಲಯ ಅಮಾವಾಸ್ಯೆ’ಎಂದೂ ಹೇಳುತ್ತಾರೆ.
ಮಹಾಲಯ ಅಮಾವಾಸ್ಯೆಯ ದಿನವು ನಮ್ಮ ಜೀವನ ಸುಗಮವಾಗಿ ನಡೆಯಲು ಅನುಕೂಲ ಮಾಡಿಕೊಟ್ಟ ಹಿಂದಿನ ಎಲ್ಲಾ ತಲೆಮಾರುಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಲು ಮೀಸಲಾದ ವಿಶೇಷ ದಿನವಾಗಿದೆ.
ಈ ಸಂದರ್ಭದಲ್ಲಿ ಯಮನ ಅಪ್ಪಣೆಯಂತೆ ಪೂರ್ವಜರು ಭೂಲೋಕಕ್ಕೆ ಬರುತ್ತಾರೆ. ಅವರ ದೃಷ್ಟಿ ತಮ್ಮ ಮನೆತನದ ಮೇಲಿರುತ್ತದೆ. ಆಗ ಅವರನ್ನು ಸಂತೋಷಗೊಳಿಸಿದರೆ, ಅನುಗ್ರಹ ಸಂಪಾದಿಸಬಹುದು.
ಪ್ರತಿಯೊಬ್ಬನೂ ದಿನವೂ ತನ್ನ ಗುರು–ಹಿರಿಯರನ್ನು ನೆನೆಯಬೇಕೆಂಬ ರೂಢಿಯೊಂದಿದೆ. ಗತಿಸಿದವರನ್ನು ನಿತ್ಯ ತರ್ಪಣದಿಂದ ಸಂತೋಷಗೊಳಿಸುವುದು ಒಂದಾದರೆ, ವಾರ್ಷಿಕವಾಗಿ ಶ್ರಾದ್ಧ-ತರ್ಪಣವನ್ನು ಮಾಡುವುದು ಇನ್ನೊಂದು. ಹಿರಿಯ ಮಗನು ಅದನ್ನು ಮಾಡಿದರೆ, ಉಳಿದ ಮಕ್ಕಳು ಅದರಲ್ಲಿ ಭಾಗವಹಿಸುತ್ತಾರೆ.ಇದನ್ನು ಓದಿ – PFI ಮುಖಂಡನ ಮನೆಯಲ್ಲಿ ಸಾವರ್ಕರ್ ಬುಕ್ ಪತ್ತೆ: ಶಿವಮೊಗ್ಗದಲ್ಲಿ 19 ಲಕ್ಷ ರು ಪತ್ತೆ
ಈ ಭೂಮಿಯ ಮೇಲೆ ಮನುಷ್ಯರು ಮತ್ತು ಅವರ ಪೂರ್ವಜರು ಸುಮಾರು 20 ಮಿಲಿಯನ್ ವರ್ಷಗಳಿಂದ ಜೀವಿಸಿದ್ದಾರೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಇದು ಬಹಳ ದೀರ್ಘ ಸಮಯ. ನಮಗಿಂತ ಈ ಹಿಂದೆ ಈ ಭೂಮಿಯ ಮೇಲೆ ಜೀವಿಸಿದ ಈ ಎಲ್ಲ ನೂರಾರು ಸಾವಿರಾರು ತಲೆಮಾರುಗಳು ನಮಗೆ ಒಂದಲ್ಲ ಒಂದು ಕೊಡುಗೆಯನ್ನು ನೀಡಿದ್ದಾರೆ. ನಾವು ಮಾತನಾಡುವ ಭಾಷೆ, ನಾವು ಕುಳಿತುಕೊಳ್ಳುವ ರೀತಿ, ನಮ್ಮ ವಸ್ತ್ರಗಳು, ನಮ್ಮ ಕಟ್ಟಡಗಳು – ನಮಗೆ ಇಂದು ಗೊತ್ತಿರುವ ಬಹುತೇಕ ಸಂಗತಿಗಳು ನಮ್ಮ ಹಿಂದಿನ ತಲೆಮಾರುಗಳಿಂದ ಬಂದಿವೆ.
ಮಹಾಭಾರತದಲ್ಲಿ ಒಂದು ಪ್ರಸಂಗ
ಕರ್ಣನು ಕುಂತಿಯ ಮಗನಾದರೂ ರಾಧೇಯನಾಗಿ ಬೆಳೆದಿದ್ದಾನೆ. ಅವನ ತಂದೆ ಯಾರು, ತಾಯಿ ಯಾರು ಎಂಬುದೇ ಅವನಿಗೆ ತಿಳಿದಿರುವುದಿಲ್ಲ. ಇದರ ಪರಿಣಾಮವಾಗಿ ಅವನು ರಾಜನೇ ಆದರೂ ಪಿತೃಕರ್ಮಗಳನ್ನು ಮಾಡಲು ಸಾಧ್ಯವಾಗಲಿಲ್ಲ. ಜೀವನದ ಸಂಧ್ಯೆಯಲ್ಲಿ ಸ್ವತಃ ಶ್ರೀಕೃಷ್ಣನೇ ಹೇಳಲಿ, ಕುಂತಿಯು ಬಂದು ಮಗನೆಂದು ಗೋಳಾಡಲಿ, ಅದೆಲ್ಲಾ ಯುದ್ಧತಂತ್ರವೆಂದೇ ಊಹಿಸಬೇಕಾದ ಅನಿವಾರ್ಯತೆ ಕರ್ಣನಿಗಿತ್ತು. ಯುದ್ಧದಲ್ಲಿ ವೀರೋಚಿತವಾದ ಮರಣವನ್ನಪ್ಪಿದ ಕರ್ಣನು ಸಹಯೋಧರೊಂದಿಗೆ ಸ್ವರ್ಗಲೋಕಕ್ಕೆ ಹೋದರೆ ಅವನಿಗೆ ಅಚ್ಚರಿ ಕಾದಿತ್ತು.
ಎಲ್ಲರಿಗೂ ಷಡ್ರಸೋಪೇತವಾದ ಆಹಾರವನ್ನು ನೀಡಿದರೆ, ಕರ್ಣನಿಗೆ ಕೇವಲ ಚಿನ್ನದ ಆಭರಣಗಳನ್ನು ನೀಡಲಾಗುತ್ತಿತ್ತು. ಉಳಿದವರೆಲ್ಲರೂ ಅನ್ನದಾನ ಮಾಡಿ ಪಿತೃಗಳನ್ನು ಪ್ರಸನ್ನಗೊಳಿಸಿದ್ದರು. ಆದರೆ ಕರ್ಣನಿಗೆ ಆ ಭಾಗ್ಯವಿರಲಿಲ್ಲ. ಅವನಿಗೆ ತನ್ನ ಪಿತೃಪಿತಾಮಹಾದಿಗಳ ಹೆಸರೇ ಗೊತ್ತಿರಲಿಲ್ಲ. ಅವನು ದಾನಶೂರನೇ ಆಗಿದ್ದರೂ, ಧಾರಾಳವಾಗಿ ಬೆಳ್ಳಿ–ಬಂಗಾರ ದಾನ ಮಾಡಿದ್ದರೂ ಅನ್ನದಾನ ಮಾಡಿರಲಿಲ್ಲ. ಅದನ್ನು ಅವನು ಸ್ವರ್ಗಲೋಕದ ಅಧಿಪತಿಯಾದ ಇಂದ್ರನಲ್ಲಿ ವಿಜ್ಞಾಪಿಸಿದಾಗ ಇಂದ್ರನು ಕರ್ಣನಿಗೆ ಹದಿನೈದು ದಿನಗಳ ಅವಕಾಶ ನೀಡಿ, ಪಿತೃಶ್ರಾದ್ಧಾದಿಗಳನ್ನು ಪೂರೈಸಿ ಬರುವಂತೆ ಆದೇಶಿಸಿದ. ಕರ್ಣನಿಗೆ ದೊರೆತ ಹದಿನೈದು ದಿನಗಳೇ ಪಕ್ಷ, ಪಿತೃಪಕ್ಷ, ಮಹಾಲಯ ಎಂದೆಲ್ಲಾ ಪ್ರಸಿದ್ಧವಾಗಿ ಅಲ್ಲಿಂದ ಈ ಆಚರಣೆ ಸಾರ್ವತ್ರಿಕವಾಯಿತು.
ಸರ್ವ ಪಿತೃ ಅಮಾವಾಸ್ಯೆ
ಈ ಪಕ್ಷದ ಒಂದೊಂದು ದಿನದಲ್ಲಿಯೂ ಶ್ರಾದ್ಧವನ್ನು ಮಾಡಬಹುದಾದರೂ ಅಮಾವಾಸ್ಯೆಯು ಅತ್ಯಂತ ಶ್ರೇಷ್ಠವೆನ್ನಲಾಗಿದೆ. ಅದು ‘ಸರ್ವ ಪಿತೃ ಅಮಾವಾಸ್ಯೆ’. ಅಂದರೆ, ಎಲ್ಲ ಪಿತೃಗಳ ತಿಥಿ. ಹಿಂದೆ ಹೇಳಿದಂತೆ ಅದು ಎಲ್ಲ ಮಾತೃಗಳ ತಿಥಿಯೂ ಹೌದು. ತಮ್ಮ ವಂಶದಲ್ಲಿ ಗತಿಸಿದವರೆಲ್ಲರಿಗೂ ಒಂದೇ ಪ್ರಯತ್ನದಿಂದ ಶ್ರಾದ್ಧ ಮಾಡಬಹುದು. ಇದಕ್ಕಾಗಿ ಬೇಕಾಗಿರುವುದು ಹಣವಲ್ಲ, ಕೃತಜ್ಞತೆ. ಅದಕ್ಕೆ ಪ್ರತಿಯಾಗಿ ಪಿತೃಗಳು ಆರೋಗ್ಯವನ್ನೂ ಆಯುಷ್ಯವನ್ನೂ ಸಂಪತ್ತನ್ನೂ ಸಂತಾನವನ್ನೂ ದಯಪಾಲಿಸುತ್ತಾರೆ ಎಂದು ಪುರಾಣಗಳಲ್ಲಿದೆ.
ಇಂದು ನಾವು ನಮಗೆ ಸಿಗುವ ಎಲ್ಲವನ್ನೂ ಸಾರಾಸಗಟಾಗಿ ನಮ್ಮದೇ ಎಂದು ಭಾವಿಸಿಕೊಂಡಿದ್ದೇವೆ. ಆದರೆ, ಹಿಂದಿನ ತಲೆಮಾರುಗಳಿಲ್ಲದೇ ಹೋದರೆ, ಮೊದಲನೆಯದಾಗಿ ನಾವೇ ಇರುತ್ತಿರಲಿಲ್ಲ; ಎರಡನೆಯದಾಗಿ, ಅವರ ಕೊಡುಗೆಯಿಲ್ಲದೇ ಇದ್ದಿದ್ದರೆ, ಈಗ ನಮ್ಮ ಬಳಿ ಇಷ್ಟೆಲ್ಲ ಇರುತ್ತಿರಲಿಲ್ಲ. ಹಾಗಾಗಿ, ಅವೆಲ್ಲವನ್ನೂ ನಮ್ಮದೇ ಎಂದು ಭಾವಿಸದೇ, ಈ ದಿನ ನಾವು ಅವರೆಲ್ಲರಿಗೂ ನಮ್ಮ ಕೃತಜ್ಞತೆಯನ್ನು ಸಲ್ಲಿಸುತ್ತೇವೆ. ಅದನ್ನು ಮೃತರಾದ ತಂದೆ ತಾಯಿಗಳಿಗೆ ಮಾಡುವ ಧಾರ್ಮಿಕ ಕ್ರಿಯೆ ಎಂಬಂತೆ ಮಾಡಲಾಗುತ್ತಿದೆ; ಆದರೆ ವಾಸ್ತವವಾಗಿ ಅದು ಹಿಂದಿನ ತಲೆಮಾರುಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿದೆ.
ಈ ದಿನಗಳಲ್ಲಿ ಅಪರಿಚಿತರಾದ ಪಿತೃಗಳಿಗೂ ಶ್ರಾದ್ಧವನ್ನು ಮಾಡಬಹುದಾದ ಸದವಕಾಶವಾದರೆ, ಜಾತಿ–ನೀತಿಗಳೆಲ್ಲವನ್ನೂ ಮೀರಿ ಗತಿಸಿದ ಬಾಂಧವರಿಗೆ ಸಂತೋಷವನ್ನು ಉಂಟುಮಾಡುವುದು ಇನ್ನೊಂದು. ಮಕ್ಕಳು ಗತಿಸಿದ ಹಿರಿಯರಿಗೆ ಕೃತಜ್ಞರಾಗಿರುವುದು ನಿಜವೇ ಆದರೂ ಅವರು ಜೀವನದ ಬಿರುಗಾಳಿಗೆ ಸಿಲುಕಿ ಏನನ್ನೂ ಮಾಡಲು ಸಾಧ್ಯವಾಗದಿರಬಹುದು. ಇಂತಹ ಸನ್ನಿವೇಶಗಳಲ್ಲಿ ಮಹಾಲಯ ಶ್ರಾದ್ಧ ಎಲ್ಲರನ್ನೂ ಪ್ರಸನ್ನಗೊಳಿಸುವ ಸುಲಭೋಪಾಯವಾಗುತ್ತದೆ. ಅದರ ಅನುಷ್ಠಾನದಿಂದ ಗೊತ್ತಿರಲಿ ಗೊತ್ತಿಲ್ಲದಿರಲಿ, ಗತಿಸಿದವರೆಲ್ಲರಿಗೂ ಅನ್ನ-ನೀರು ದೊರೆಯುತ್ತದೆ. ಇಲ್ಲಿ ಅನ್ನ-ನೀರುಗಳನ್ನು ಕೊಟ್ಟರೆ ಮಾತ್ರ ಪರಲೋಕದಲ್ಲಿ ನಮಗೆ ಲಭಿಸುತ್ತದೆ.
ಇದು ಯಾವುದೋ ಒಂದು ಜಾತಿಗೆ ಸೀಮಿತವಾದುದಲ್ಲ. ಇದಕ್ಕೆ ಬೇಕಾದುದು ಜಾತಿಯಲ್ಲ, ಶ್ರದ್ಧೆ. ಶ್ರದ್ಧೆಯಿಲ್ಲದೆ ಇದನ್ನು ಮಾಡಿದರೂ ಫಲವಿಲ್ಲ. ಈ ಕಾರಣದಿಂದಲೇ ಇದನ್ನು ‘ಶ್ರಾದ್ಧ’ ಎನ್ನುತ್ತಾರೆ.
- ನವೆಂಬರ್ 11ರಿಂದ ಉಪ ಚುನಾವಣಾ ಕ್ಷೇತ್ರಗಳಲ್ಲಿ ಮದ್ಯ ಮಾರಾಟ ನಿಷೇಧ
- ಮಂಡ್ಯ : ಹಿಂದೂ ಸ್ಮಶಾನವನ್ನು ವಕ್ಫ್ ಆಸ್ತಿಯೆಂದು ಘೋಷಿಸಿದ ಪ್ರಕರಣ
- MUDA ಹಗರಣ: ನಾಳೆ ಬೆಳಿಗ್ಗೆ 10 ಗಂಟೆಗೆ ಲೋಕಾಯುಕ್ತ ವಿಚಾರಣೆಗೆ ಹಾಜರಾಗಲು ಸಿಎಂ ಸಿದ್ದರಾಮಯ್ಯ ನಿರ್ಧಾರ
- HDK – ನಿಖಿಲ್ ವಿರುದ್ಧ ಎಡಿಜಿಪಿ ಚಂದ್ರಶೇಖರ್ ದೂರು ದಾಖಲು
- ಚನ್ನಪಟ್ಟಣ ಉಪಚುನಾವಣೆ: ನಿಖಿಲ್ ಕುಮಾರಸ್ವಾಮಿ ಪರ ಪತ್ನಿ ರೇವತಿ ಪ್ರಚಾರದಲ್ಲಿ ಸಕ್ರಿಯ
- ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಕಾರು : ಬೆಂಕಿ ಹೊತ್ತಿಕೊಂಡು ಚಾಲಕ ಸಜೀವದಹನ
More Stories
ಕನ್ನಡ ರಾಜ್ಯೋತ್ಸವ
ಬದುಕಿದ್ದೂ ಸತ್ತಂತಿರುವವರು ನೂರಾರು ; ಸತ್ತೂ ಬದುಕಿರುವ ಒಂದೇ ಒಂದು ಕೊಹಿನೂರು..!
ಹೆಂಗರುಳೇ ಕಲ್ಲಾದರೆ ನುಡಿವುದೇನು(ಬ್ಯಾಂಕರ್ಸ್ ಡೈರಿ)