ಶಿಂಧೆ ಅವರನ್ನೇ ಸಿಎಂ ಎಂದು ಘೋಷಿಸುವ ಮೂಲಕ ಉದ್ಧವ್ ಠಾಕ್ರೆಗೆ ಬಿಜೆಪಿ ಮತ್ತೊಂದು ಶಾಕ್ ನೀಡಿದೆ.ಇದನ್ನು ಓದಿ –ಹನುಮಾನ್ ಚಾಲೀಸಾ ಬ್ಯಾನ್ ಮಾಡಲು ಹೊರಟ ಈ ಠಾಕ್ರೆಯನ್ನು ಶಿವನೂ ಕಾಪಾಡುವುದು ಅಸಾಧ್ಯ – ನಟಿ ಕಂಗನಾ
ಗುರುವಾರ ರಾತ್ರಿ 7:30ಕ್ಕೆ ಏಕನಾಥ್ ಶಿಂಧೆ ರಾಜ್ಯದ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಬಿಜೆಪಿ ಬೆಂಬಲದೊಂದಿಗೆ ಶಿಂಧೆ ನೇತೃತ್ವದಲ್ಲಿ ಸರ್ಕಾರ ಆಡಳಿತ ನಡೆಸಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್, ಏಕನಾಥ್ ಶಿಂಧೆ ರಾಜ್ಯದ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ನಾನು ಸರ್ಕಾರದಲ್ಲಿ ಇರಲ್ಲ ಎಂದು ತಿಳಿಸಿದ್ದಾರೆ.
ಬಿಜೆಪಿಯ ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರದ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಸುದ್ದಿ ಹರಿದಾಡಿತ್ತು. ಆದರೆ ಏಕನಾಥ್ ಶಿಂಧೆ ಅವರನ್ನೇ ಮುಖ್ಯಮಂತ್ರಿ ಎಂದು ಘೋಷಿಸಿ ಬಿಜೆಪಿ ಅಚ್ಚರಿ ಮೂಡಿಸಿದೆ.
ಶಿವಸೇನಾ, ಎನ್‌ಸಿಪಿ ಮತ್ತು ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟದ ವಿರುದ್ಧ ಬಂಡಾಯ ಎದ್ದು ಶಿವಸೇನಾದ ಶಾಸಕರ ತಂಡವೊಂದು ಗುವಾಹಟಿಯ ಹೋಟೆಲ್‌ನಲ್ಲಿ ಬೀಡುಬಿಟ್ಟಿತ್ತು. ಈ ತಂಡದ ನೇತೃತ್ವವನ್ನು ಏಕನಾಥ್ ಶಿಂಧೆ ವಹಿಸಿದ್ದರು. ಈ ವೇಳೆ ಶಿಂಧೆ ಬಣದೊಂದಿಗೆ ಬಿಜೆಪಿ ಮೈತ್ರಿ ಮಾತುಕತೆ ನಡೆಸಿತ್ತು.
ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ಉರುಳಲು ಪ್ರಮುಖ ಕಾರಣರಾದ ಶಿಂಧೆ ಅವರನ್ನೇ ರಾಜ್ಯದ ಸಿಎಂ ಆಗಿ ಬಿಜೆಪಿ ಘೋಷಿಸಿದೆ.
More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಕರ್ನಾಟಕದ ಬಜೆಟ್ ದೇಶಕ್ಕೆ ಮಾದರಿ: ಡಿ.ಕೆ. ಶಿವಕುಮಾರ್
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ