May 21, 2022

Newsnap Kannada

The World at your finger tips!

madurai 1

ಮಧುರೈ ಚಿತ್ತಿರೈ ಉತ್ಸವದಲ್ಲಿ ಕಾಲ್ತುಳಿತ -2 ಸಾವು 7 ಜನರಿಗೆ ಗಾಯ-ಸಿಎಂ ಸ್ಟಾಲಿನ್ ಆರ್ಥಿಕ ನೆರವು

Spread the love

ಮಧುರೈ ಚಿತ್ತಿರೈ ಉತ್ಸವ 2022 ರ ಅಂಗವಾಗಿ ವೈಗೈ ನದಿಗೆ ಕಲ್ಲಜಗರ್ ದೇವರ ಪ್ರವೇಶದ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಮಧುರೈ ಸರ್ಕಾರಿ ಆಸ್ಪತ್ರೆಯ ಡೀನ್ ಎ ರತ್ನವೇಲ್ ANI ವರದಿ ಮಾಡಿದೆ.

ವೈಗೈ ನದಿಗೆ ಕಲ್ಲಜಗರ್ ದೇವರ ಪ್ರವೇಶದ ಸಂದರ್ಭದಲ್ಲಿ ಭಕ್ತರು ಹೆಚ್ಚಿನ ಜನಸಂಖ್ಯೆಯಲ್ಲಿ ಸೇರಿದ್ದರಿಂದ ಈ ಘಟನೆ ನಡೆದಿದೆ.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ಪ್ರಾಣಹಾನಿಗಾಗಿ ಸಂತಾಪ ವ್ಯಕ್ತಪಡಿಸಿದ್ದು, ಸಂತ್ರಸ್ತರಿಗೆ 5 ಲಕ್ಷ ರೂಪಾಯಿ ಪರಿಹಾರ ಮತ್ತು ತೀವ್ರವಾಗಿ ಗಾಯಗೊಂಡವರಿಗೆ 2 ಲಕ್ಷ ರೂಪಾಯಿಗಳನ್ನು ಘೋಷಿಸಿದ್ದಾರೆ.

error: Content is protected !!