ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ : 150 ಸ್ಥಾನಗಳ ಗೆಲುವು ಸಾಧ್ಯತೆ – ರಾಹುಲ್ ಗಾಂಧಿ ವಿಶ್ವಾಸ

Team Newsnap
1 Min Read
Madhya Pradesh Congress to power: Rahul Gandhi confident of winning 150 seats ಮಧ್ಯ ಪ್ರದೇಶ ಕಾಂಗ್ರೆಸ್ ಅಧಿಕಾರಕ್ಕೆ : 150 ಸ್ಥಾನಗಳ ಗೆಲುವು ಸಾಧ್ಯತೆ ರಾಹುಲ್ ಗಾಂಧಿ ವಿಶ್ವಾಸ

ಮುಂದಿನ ಮಧ್ಯ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 150 ಸ್ಥಾನಗಳನ್ನು ಗೆಲ್ಲಲಿದೆ.

ಹೀಗೆಂದು ಭರವಸೆ ಮಾತುಗಳನ್ನು ಹೇಳಿದವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ.

ರಾಹುಲ್ ಸೋಮವಾರ ದೆಹಲಿಯ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಪಕ್ಷದ ಚುನಾವಣಾ ಸಿದ್ಧತಾ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.

ಕರ್ನಾಟಕದಲ್ಲಿ ನಾವು ಗೆಲುವು ಸಾಧಿಸಿದ ನಂತರ ಮಧ್ಯ ಪ್ರದೇಶದಲ್ಲೂ ಪಕ್ಷದ ಗೆಲುವಿನ ಓಟ ಮುಂದುವರಿಯಲಿದೆ ಎಂದು ಹೇಳಿದರು.

ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಧ್ಯ ಪ್ರದೇಶದ ಕಾಂಗ್ರೆಸ್ ಪಕ್ಷದ ಉನ್ನತ ನಾಯಕರ ಜೊತೆ ಸಭೆ ನಡೆಸಿದರು.

ಕರ್ನಾಟಕದಲ್ಲಿ 136 ಸ್ಥಾನ ಪಡೆದಿದ್ದೇವೆ. ಮುಂಬರುವ ಮಧ್ಯಪ್ರದೇಶ ಚುನಾವಣೆಯಲ್ಲಿ ನಾವು 150 ಸ್ಥಾನಗಳನ್ನು ಪಡೆಯಲಿದ್ದೇವೆ ಎಂದು ಹೇಳಿದರು.ಟಿ.ನರಸೀಪುರ ಬಳಿ ಖಾಸಗಿ ಬಸ್- ಇನ್ನೊವಾ ಕಾರಿನ ನಡುವೆ ಭೀಕರ ಅಪಘಾತ, 10 ಮಂದಿ ಸಾವು

ಮಾಜಿ ಮುಖ್ಯಮಂತ್ರಿ ಮತ್ತು ಮಧ್ಯಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಕಮಲ್ ನಾಥ್ ಹಾಗೂ ಎಐಸಿಸಿ ಉಸ್ತುವಾರಿ ಪಿ ಅಗರ್ವಾಲ್ ಸೇರಿದಂತೆ ಹಲವು ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.

Share This Article
Leave a comment