ಮೊದಲ ಬಾರಿಗೆ SEBI ಮಹಿಳಾ ಅಧ್ಯಕರಾಗಿ ಮಾಧಬಿ ನೇಮಕ

Team Newsnap
1 Min Read

ಸೆಕ್ಯೂರಿಟಿ ಆಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (Securities and Exchange Board of India)ಗೆ ಮೊದಲ ಬಾರಿಗೆ ಭಾರತದ ಮಹಿಳೆಯೊಬ್ಬರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

SEBI ಗೆ ಮಾಧಬಿ ಪುರಿ ಬುಚ್ಚ (Madhabi Puri Buch) ಅವರು ಅಧ್ಯಕ್ಷರಾಗಿ ಸರ್ಕಾರ ನೇಮಕ ಮಾಡಿದೆ.

ಹಾಲಿ ಅಧ್ಯಕ್ಷ ಅಜಯ್ ತ್ಯಾಗಿ ಅಧಿಕಾರಾವಧಿ ಪ್ರೆಬ್ರವರಿ 28ರಂದು ಮುಕ್ತಾಯವಾಗಿದೆ ಮಾಧವಿ ಅಧ್ಯಕ್ಷೆಯಾಗಿದ್ದಾರೆ.

ಮಾಧಬಿ ಪುರಿ ಬುಚ್ಚ ಬಗ್ಗೆ ಮಾಹಿತಿ

ಮಾಧಬಿ ಪುರಿ ಬುಚ್ಚ ದೆಹಲಿಯಲ್ಲಿ ಶಿಕ್ಷಣವನ್ನು ಪಡೆದ ನಂತರ ಅಹಮದಾಬಾದ್‍ನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್‍ನಲ್ಲಿ, ಮ್ಯಾನೇಜ್‍ಮೆಂಟ್ ಪದವಿಯನ್ನು ಪೂರ್ಣಗೊಳಿಸಿದರು.

ಹಲವು ಸಂಘ, ಸಂಸ್ಥೆ ಹಾಗೂ ರಾಷ್ಟ್ರೀಯ ಸ್ಟಾಕ್ ಎಕ್ಸ್‌ಚೇಂಜ್ ಸಮಿತಿಯಂತಹ ವಿವಿಧ ಸಮಿತಿಗಳಲ್ಲಿ ಸದಸ್ಯರಾಗಿ ಸೇವೆಸಲ್ಲಿಸಿದ್ದಾರೆ.

ಐಸಿಐಸಿ ಬ್ಯಾಂಕ್ ICICI Bankನಿಂದ ವೃತ್ತಿಜೀವನವನ್ನು ಪ್ರಾರಂಭಿಸಿದರು. ಇಲ್ಲಿ ಮ್ಯಾನೆಜಿಂಗ್ ಡೈರೆಕ್ಟರ್ ಆಗಿ 2009ರಿಂದ 2011ರವರೆಗೆ ಸೇವೆಸಲ್ಲಿಸಿದ್ದಾರೆ. 2011ರಲ್ಲಿ ಗ್ರೇಟರ್ ಪೆಸಿಫಿಕ್ ಕ್ಯಾಪಿಟಲ್ ಐಐಗೆ ಸೇರಲು ಸಿಂಗಾಪುರಕ್ಕೆ ತೆರಳಿದರು.

ಈ ವೇಳೆ ಅಗೋರಾ ಅಡ್ವೈಸರಿ ಪ್ರೈವೇಟ್ ಲಿಮಿಟೆಡ್‍ನ ಸಂಸ್ಥಾಪಕ-ನಿರ್ದೇಶಕರಾಗಿದ್ದರು. ನ್ಯೂ ಡೆವಲಪ್‍ಮೆಂಟ್ ಬ್ಯಾಂಕ್‍ನಲ್ಲಿ ಮೂರು ವರ್ಷಗಳ ಕಾಲ ಸಲ್ಲಿಸಿದ್ದಾರೆ.

Share This Article
Leave a comment