ಮದ್ದೂರಿನ ಅಪ್ಪು ಕೊಲೆ ಯತ್ನ ಪ್ರಕರಣ – ಸ್ನೇಹಿತ ಮಧು ಸುಫಾರಿ – 7 ಜನರ ಬಂಧನ

Team Newsnap
1 Min Read

ಮದ್ದೂರು : ಮದ್ದೂರಿ ಹೊಳೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಶನಿವಾರ ನಡೆದ ಜೆಡಿಎಸ್‌ ಮುಖಂಡ ಅಪ್ಪುಗೌಡ ಕೊಲೆಯತ್ನ ಕೈವಾಡದಲ್ಲಿ ಸ್ವತಃ ಆತನ ಸ್ನೇಹಿತನೇ ಸುಪಾರಿ ಕೊಟ್ಟಿರುವ ಅಂಶ ಬೆಳಕಿಗೆ ಬಂದಿದೆ.

ಅಪ್ಪುಗೌಡನ ಕೊಲೆಗೆ ಸ್ನೇಹಿತನಿಂದಲೇ ಸುಫಾರಿ ಕೊಡಲಾಗಿದೆ ಎಂಬ ಸತ್ಯಾಂಶವನ್ನು ಬಂಧನಕ್ಕೆ ಒಳಗಾದ ಆರೋಪಿಗಳು ಬಾಯಿಬಿಟ್ಟಿದ್ದಾರೆ.

ಈ ಹತ್ಯೆಯ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ದೂರು ಪೋಲೀಸರು ಕೋಣಸಾಲೆ ಮಧು ಸೇರಿದಂತೆ ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಸುಪಾರಿ ನೀಡಿದ ವ್ಯಕ್ತಿಯನ್ನು ಬೆಸಗರಹಳ್ಳಿ ಸಮೀಪದ ಕೋಣಸಾಲೆ ಗ್ರಾಮದ ಮಧು ಎನ್ನಲಾಗಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಕುಖ್ಯಾತ ರೌಡಿಯೊಬ್ಬನಿಗೆ ಅಪ್ಪುಗೌಡನ ಕೊಲೆಗೆ ಮಧು ಸುಫಾರಿ ನೀಡಿದ್ದನು ಎನ್ನಲಾಗಿದೆ.

ಕಳೆದ ಆರು ತಿಂಗಳಿಂದ ಈ ವೈಷಮ್ಯ ಆರಂಭವಾಗಿ ಈಗ ಸುಪಾರಿ ಕೊಟ್ಟು ಕೊಲೆ ಮಾಡಲು ತಿಳಿಸಿದ್ದಾನೆ ಎಂದು ತಿಳಿದು ಬಂದಿದೆ. ಕೊಲೆಗೆ ಸುಪಾರಿ ಕೊಟ್ಟಿದ್ದ ಮಧುಗೌಡ ಹಾಗೂ ಮಾರಣಾಂತಿಕ ಹಲ್ಲೆಗೆ ಒಳಗಾಗಿರುವ ಅಪ್ಪುಗೌಡ ಇಬ್ಬರೂ ಆತ್ಮೀಯ ಸ್ನೇಹಿತರಾಗಿದ್ದರು.

ಕೆಲ ರಿಯಲ್ ಎಸ್ಟೇಟ್ ಉದ್ಯಮ ವ್ಯವಹಾರಗಳಲ್ಲಿ ಪಾಲುದಾರರೂ ಆಗಿದ್ದರು. ಆದರೆ ಇತ್ತೀಚೆಗೆ ವ್ಯವಹಾರದಲ್ಲಿ ಗೊಂದಲ ಉಂಟಾಗಿ ಮನಸ್ತಾಪವಾಗಿದ್ದ ಹಿನ್ನೆಲೆಯಲ್ಲಿ ಇಬ್ಬರೂ ಸ್ನೇಹಿತರು ಪರಸ್ಪರ ದೂರವಾಗಿದ್ದರು. ಅಲ್ಲದೇ ಅಪ್ಪುಗೌಡ ಮಧು ವಿರುದ್ದ ಚೆಕ್ ಬೌನ್ಸ್ ಕೇಸ್ ಕೂಡ ಹೂಡಿದ್ದರು. ಇದರಿಂದ ಅವಮಾನ ತಾಳಲಾರದೇ ಮಧುಗೌಡ ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನಲ್ಲಿದ್ದ ಜಗದೀಶ್‌ ಎಂಬ ರೌಡಿಗೆ ಅಪ್ಪುಗೌಡನ‌ ಕೊಲೆಗೆ ಸುಪಾರಿ ನೀಡಿದ್ದಾನೆ.ಗೂಂಡಾ ಕಾಯ್ದೆ ಅಡಿ ಕೆರೆಹಳ್ಳಿ ಪುನೀತ್ ಬಂಧನ

ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ ಕುಳಿತು ಅಪ್ಪುಗೌಡನ ಕೊಲೆಗೆ ಜಗದೀಶ್ ಸ್ಕೆಚ್ ಹಾಕಿದ್ದಾನೆ. ಇಂದು ಜಗದೀಶ್ ಸಹಚರರಿಂದ ಅಪ್ಪುಗೌಡ ಮೇಲೆ ಮಾರಾಕಾಸ್ತ್ರಗಳಿಂದ ಅಟ್ಯಾಕ್ ಮಾಡಿದ್ದರು. ಆದರೆ ಅದೃಷ್ಟವಶ ಅಪ್ಪುಗೌಡ ಬದುಕುಳಿದಿದ್ದಾರೆ.

Share This Article
Leave a comment