March 13, 2026

Newsnap Kannada

The World at your finger tips!

3 love

ಬೆಟ್ಟದಿಂದ ಹಾರಿ ಪ್ರಾಣಬಿಟ್ಟ ಪ್ರೇಮಿಗಳು – 3 ವರ್ಷದ ಪ್ರೀತಿಗೆ ದುರಂತ ಅಂತ್ಯ

Spread the love

ಬೆಟ್ಟದಿಂದ ಹಾರಿ ಪ್ರಾಣಬಿಟ್ಟ ಪ್ರೇಮಿಗಳು 3 ವರ್ಷ ಪ್ರೀತಿಗೆ ದುರಂತ ಅಂತ್ಯ ಹಾಡಿದರು.
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕಬ್ಬಾಳ ಗ್ರಾಮದ ಬೆಟ್ಟದಿಂದ ಹಾರಿ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಪ್ರೇಮಿಗಳಿಬ್ಬರೂ ಸೊಂಟಕ್ಕೆ ವೇಲ್ ಕಟ್ಟಿಕೊಂಡು ಬೆಟ್ಟದಿಂದ ಹಾರಿದ್ದಾರೆ ಎಂದು ಹೇಳಲಾಗಿದೆ.

ತಮಿಳುನಾಡು ಮೂಲದ ಸತೀಶ್ (21) ಹಾಗೂ ಕನಕಪುರ ನಗರದ ಚಂದನಾ (21) ಆತ್ಮಹತ್ಯೆ ‌ಮಾಡಿಕೊಂಡು ಪ್ರೇಮಿಗಳು.

ಒಂದು ವರ್ಷದ ಹಿಂದೆ ಚಂದನಾ ವಿವಾಹವಾಗಿದ್ದರು. ಮೂರು ದಿನಗಳ ಹಿಂದೆ ಇಬ್ಬರೂ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೂರು ದಿನಗಳ ಹಿಂದೆ ನಾಪತ್ತೆಯಾಗಿರುವ ಬಗ್ಗೆ ಕನಕಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸತೀಶ್ ತಮಿಳುನಾಡಿನ ಹೊಸೂರಿನಲ್ಲಿ ಟ್ಯಾಕ್ಸಿ ಡ್ರೈವರ್ ಆಗಿ ಕೆಲಸ ಮಾಡ್ತಿದ್ದ. ಮೂರು ವರ್ಷದಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!