ಯುವತಿಯನ್ನು ಪ್ರೀತಿಸಿ ಲಿವಿನ್ ರಿಲೇಶನ್ ಬೆಳೆಸಿ ಹಣದೊಂದಿಗೆ ಪರಾರಿ : ಯುವಕ ಬಂಧನ

Team Newsnap
1 Min Read

ಕೇವಲ 7 ತಿಂಗಳ ಹಿಂದೆ ಪರಿಚಯವಾದ ಯುವತಿಯನ್ನು ಪ್ರೀತಿಸಿ, 5 ತಿಂಗಳು ಲೀವಿನ್​ ರಿಲೇಶನ್​ಶಿಪ್​ನಲ್ಲಿದ್ದ ಯುವಕ ಆಕೆ ಬಳಿಯೇ 4 ಲಕ್ಷ ರು ಕಿತ್ತುಕೊಂಡು ಯುವತಿ ಗರ್ಭಿಣಿ ಎಂದು ತಿಳಿಯುತ್ತಿದ್ದಂತೆ ಎಸ್ಕೇಪ್​ ಆಗಿದ್ದವನನ್ನು ಪೋಲಿಸರು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ಜರುಗಿದೆ.

ಇವೆಂಟ್​ ಮ್ಯಾನೇಜ್ಮೆಂಟ್​ ಮಾಡಿಕೊಂಡಿದ್ದ 25 ವರ್ಷದ ಯುವತಿ ಪ್ರೀತಿಯಲ್ಲಿ ಮೋಸ ಹೋದಾಕೆ. ಯುವತಿಗೆ ಮೋಸ ಮಾಡಿದ ಯುವಕ ಅರುಣ್​ ಯುವತಿಯ ಬಳಿ 4 ಲಕ್ಷ ರೂಪಾಯಿ ಹಣವನ್ನು ಪಡೆದಿದ್ದಾನೆ ಎಂಬ ಮಾಹಿತಿ ಇದೆ. 

ಈ ಸಂಬಂಧ ಯುವತಿ 2 ತಿಂಗಳ ಹಿಂದೆ ಬಗಲುಗುಂಟೆ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾಳೆ. ಕಾರ್ಯಾಚರಣೆ ನಡೆಸಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ಕುರಿತು ಬಗಲುಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a comment