ಲವ್ ಯು ರಚ್ಚು ಚಿತ್ರದ ಶೂಟಿಂಗ್ ವೇಳೆ ಸಂಭವಿಸಿದ ದುರಂತಕ್ಕೆ ಸಂಬಂಧಿಸಿದಂತೆ
ಬಿಡದಿ ಪೊಲೀಸರು ಐವರ ವಿರುದ್ಧ ದೂರು ದಾಖಲಿಸಿ, ಎಫ್ಐಆರ್ ಹಾಕಿದ್ದಾರೆ.
ಬಿಡದಿಯ ಜೋಗನಪಾಳ್ಯದಲ್ಲಿ ಶೂಟಿಂಗ್ ನಡೆಯುತ್ತಿದ್ದಾಗ 11 ಕೆವಿ ವಿದ್ಯುತ್ ತಂತಿ ತಗುಲಿ ಫೈಟರ್ ಅಸಿಸ್ಟೆಂಟ್ ವಿವೇಕ್ ಎಂಬುವರು ಸಾವನ್ನಪ್ಪಿದರು.
ಬಿಡದಿ ಪೊಲೀಸರು ನಿನ್ನೆಯೇ ಸ್ವಯಂ ದೂರು ದಾಖಲಿಸಿಕೊಂಡಿದ್ದಾರೆ. ನಂತರ
ವಿವೇಕ್ ಕುಟುಂಬದವರೂ ನೀಡಿದ್ದ ದೂರಿನ ಆನ್ವಯ ಪ್ರಕರಣದಲ್ಲಿ ನಿರ್ದೇಶಕ ಶಂಕರ್ ರಾಜ್, ನಿರ್ಮಾಪಕ ಗುರುದೇಶ ಪಾಂಡೆ , ಸಾಹಸ ನಿರ್ದೇಶಕ ವಿನೋದ್ , ಸಿನಿಮಾ ಇನ್ಚಾರ್ಜ್ ಪರ್ನಾಂಡೀಸ್, ಕ್ರೇನ್ ಚಾಲಕ ಆಪರೇಟರ್ ಮಹೇದವ್ ಅರೋಪಿಗಳಾಗಿದ್ದಾರೆ.
ಐವರು ಆರೋಪಿಗಳ ವಿರುದ್ಧ 304, 337, 149 ಅಡಿಯಲ್ಲಿ ಬಿಡದಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಮೂವರನ್ನು ಬಂಧಿಸಲಾಗಿದೆ. ಇಬ್ಬರಿಗಾಗಿ ಶೋಧನೆ ಮುಂದುವರೆದಿದೆ.
ವಿದ್ಯುತ್ ತಂತಿ ಸ್ಪರ್ಶದಿಂದ ತಮಿಳುನಾಡು ಮೂಲಕದ ಫೈಟರ್ ವಿವೇಕ್(28) ಸಾವನ್ನಪ್ಪಿದ್ದರು
ಜೊತೆಗೆ ಮತ್ತೊಬ್ಬ ಫೈಟರ್ ರಂಜಿತ್ ಎಂಬಾತನಿಗೂ ವಿದ್ಯುತ್ ತಗುಲಿ ಗಂಭೀರ ಗಾಯವಾಗಿದೆ.
More Stories
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
ಕ್ಷಣಾರ್ಧದಲ್ಲಿ 33 ಲಕ್ಷ ಕಳ್ಳತನ: ಓರ್ವ ಆರೋಪಿ ಬಂಧನ
ಚಾಮರಾಜನಗರದಲ್ಲಿ ಖಾಸಗಿ ಬಸ್ ಪಲ್ಟಿ: ಓರ್ವ ಸಾವು, 30ಕ್ಕೂ ಹೆಚ್ಚು ಜನರಿಗೆ ಗಾಯ