December 19, 2024

Newsnap Kannada

The World at your finger tips!

sidda

Pic Credits : deccanherald.com

ಯಡಿಯೂರಪ್ಪನ ಪರ ಹುಸಿ ಪ್ರೇಮ, ಮೊಸಳೆ ಕಣ್ಣೀರು ಸುರಿಸುವ ಸಿದ್ದು- ವಿಶ್ವನಾಥ್

Spread the love

ಯಡಿಯೂರಪ್ಪನವರ ಪರವಾಗಿ ಸಿದ್ದರಾಮಯ್ಯ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಹುಸಿ ಪ್ರೇಮ ಪ್ರದರ್ಶನ ಮಾಡುತ್ತಿದ್ದಾರೆ. ಯಡಿಯೂರಪ್ಪರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಸಿದ್ದರಾಮಯ್ಯನನ್ನು ಮೂಲಿಸಿದರು.

yediyurappa 1

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ. ವಿಶ್ವನಾಥ್ವಿ ಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ಮಾಡಿ
ಐಟಿ ದಾಳಿಯಲ್ಲಿ ರಾಜಕೀಯ ವಾಸನೆ ಬರುತ್ತಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು

ಯಡಿಯೂರಪ್ಪ ಅವರ ಪರವಾಗಿ ಸಿದ್ದರಾಮಯ್ಯ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಹುಸಿ ಪ್ರೇಮ ಪ್ರದರ್ಶನ ಮಾಡುತ್ತಿದ್ದಾರೆ. ಯಡಿಯೂರಪ್ಪರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದಿದ್ದಾರೆ.

vishwanath

ದಾಳಿ ಖಂಡಿಸಿ ಹೇಳಿಕೆ ನೀಡಿ ವೀರಶೈವ ಲಿಂಗಾಯತ ಸಮುದಾಯ ಮೆಚ್ಚಿಸಲು ಹೋಗುತ್ತಿದ್ದೀರಾ? ಇದು ನಿಮ್ಮ ಉದ್ದೇಶವಾಗಿದ್ದರೆ ನಿಮ್ಮಂಥ ದಡ್ಡರು ಯಾರು ಇಲ್ಲ. ಯಾಕೆಂದರೆ ವೀರಶೈವ – ಲಿಂಗಾಯತರು ಬುದ್ದಿವಂತ ಸಮುದಾಯ. ನಿಮ್ಮ ಹೇಳಿಕೆಯಿಂದ ಅವರ ಮತ ನಿಮಗೆ ಬರುತ್ತದೆ ಎಂಬುದು ನಿಮ್ಮ ದಡ್ಡತನ ಎಂದರು.

ತಮ್ಮ ಹಗರಣ ಮುಚ್ಚಿಕೊಳ್ಳಲು ಲೋಕಾಯುಕ್ತವನ್ನೆ ಮುಚ್ಚಿದವರು ಸಿದ್ದರಾಮಯ್ಯ. ಅವರ ಆಡಳಿತ ಭ್ರಷ್ಟಾಚಾರ ಮುಕ್ತವಾಗಿರಲಿಲ್ಲ. ಸಿದ್ದರಾಮಯ್ಯ ಆಡಳಿತದಲ್ಲಿ ಮಹಾ ಭ್ರಷ್ಟಾಚಾರವೇ ನಡೆಯಿತು. ಅಂದು ಭ್ರಷ್ಟಾಚಾರಕ್ಕೆ ಬೆಂಬಲ ಕೊಟ್ಟರು. ಇಂದು ಕೂಡ ಐಟಿ ದಾಳಿ ಖಂಡಿಸಿ ಭ್ರಷ್ಟಾಚಾರಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

Copyright © All rights reserved Newsnap | Newsever by AF themes.
error: Content is protected !!