December 23, 2024

Newsnap Kannada

The World at your finger tips!

WhatsApp Image 2023 07 22 at 3.16.59 PM

ವನ್ಯಜೀವಿಯಿಂದ ಜೀವಹಾನಿ: ಸ್ಥಳ ಭೇಟಿಗೆ ಸಚಿವ ಖಂಡ್ರೆ ಸೂಚನೆ

Spread the love
  • ಅರಣ್ಯ ಒತ್ತುವರಿ ತೆರವಿಗೆ ಆದೇಶ, ಡಿಸಿಎಫ್.ಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ

ಬೆಂಗಳೂರು : ರಾಜ್ಯದ ಯಾವುದೇ ಭಾಗದಲ್ಲಿ ವನ್ಯಜೀವಿಗಳ ದಾಳಿಯಿಂದ ಮಾನವ ಪ್ರಾಣಹಾನಿ ಆದರೆ, ಆಯಾ ವಲಯದ ಉನ್ನತ ಅರಣ್ಯಾಧಿಕಾರಿಗಳು ಆದ್ಯತೆಯ ಮೇಲೆ ಸ್ಥಳಕ್ಕೆ ಭೇಟಿ ನೀಡಿ, ಸಾಂತ್ವನ ಹೇಳಿ, ಪರಿಹಾರ ನೀಡಬೇಕು ಮತ್ತು ಪ್ರಾಣಿಗಳ ಸೆರೆಗೆ ಅಥವಾ ಕಾಡಿಗೆ ಕಳುಹಿಸಲು ಕ್ರಮ ವಹಿಸಬೇಕು ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಶನಿವಾರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೆಂಗಳೂರಿನಲ್ಲಿನ ತಮ್ಮ ಕಚೇರಿಯಲ್ಲಿ ಅರಣ್ಯ ವೃತ್ತಗಳ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು, ಕರಡಿಯ ದಾಳಿಯಿಂದ ಉತ್ತರ ಕನ್ನಡ ಜಿಲ್ಲೆ, ಯಲ್ಲಾಪುರ ವಿಭಾಗದ ಮರಗಡಿ ಗ್ರಾಮದಲ್ಲಿ ಜಮ್ಮು ಬಾಗು ಥೋರಟ್ (60) ಎಂಬುವವರು ಮೃತಪಟ್ಟಿರುವ ಬಗ್ಗೆ ಸಂತಾಪ ಸೂಚಿಸಿದ ಸಚಿವರು, ಕೂಡಲೇ ಪರಿಹಾರ ನೀಡುವಂತೆ ಆದೇಶ ನೀಡಿದರು.

ಒತ್ತುವರಿ ತೆರವಿಗೆ ಸೂಚನೆ: ಧಾರವಾಡ ವಲಯದ ಕಲಘಟಗಿ ಬಳಿ 50 ಎಕರೆ ಅರಣ್ಯ ಭೂಮಿ ಒತ್ತುವರಿಯನ್ನು ಇಂದು ತೆರವು ಮಾಡಿರುವ ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು, ಸಣ್ಮ ಮನೆ ಕಟ್ಟಿಕೊಂಡಿರುವ, 3 ಎಕರೆಗಿಂತ ಕಡಿಮೆ ಪ್ರದೇಶದಲ್ಲಿ ಕೃಷಿ ಮಾಡುತ್ತಿರುವ ಬಡವರ ವಿಷಯದಲ್ಲಿ ಮಾನವೀಯತೆ ತೋರಿ, ಅರಣ್ಯವನ್ನು ದೊಡ್ಡ ಪ್ರಮಾಣದಲ್ಲಿ ಒತ್ತುವರಿ ಮಾಡಿದ್ದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಿ ಎಂದು ಸೂಚಿಸಿದರು.

ವನಮಹೋತ್ಸವ:

ವನಮಹೋತ್ಸವದ ಅವಧಿಯಲ್ಲಿ ರಾಜ್ಯದಾದ್ಯಂತ ಯಾವ ಯಾವ ವೃತ್ತದಲ್ಲಿ ಎಷ್ಟು ಸಸಿ ನಡೆಲಾಗಿದೆ, ಎಷ್ಟು ಸಸಿಗಳನ್ನು ರೈತರಿಗೆ ನೀಡಲಾಗಿದೆ ಎಂಬ ವಿವರ ಪಡೆದ ಸಚಿವರು, ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ಗುರಿ ಮೀರಿ ಸಾಧನೆ ಮಾಡಿ. ಮಳೆ ಕಡಿಮೆ ಇರುವ ಪ್ರದೇಶದಲ್ಲಿ ಈಗಾಗಲೇ ಬೆಳೆಸಿರುವ ಸಸಿಗಳನ್ನು ಮಳೆ ಹೆಚ್ಚಾಗಿ ಆಗಿರುವ ಪ್ರದೇಶದಲ್ಲಿ ನೆಟ್ಟು ಪೋಷಿಸಿ ಎಂದು ಸೂಚಿಸಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಅರಣ್ಯ ವ್ಯಾಪ್ತಿ ಮತ್ತು ಹಸಿರು ವಲಯ ವ್ಯಾಪ್ತಿ ಕಡಿಮೆ ಇರುವ ಬಗ್ಗೆ ಕಳಕಳಿ ವ್ಯಕ್ತಪಡಿಸಿದ ಸಚಿವರು, ಈ ಭಾಗದಲ್ಲಿ ಸರ್ಕಾರಿ ಕಚೇರಿಗಳ ಆವರಣ, ರಸ್ತೆಯ ಬದಿಗಳಲ್ಲಿ ಮತ್ತು ಸರ್ಕಾರಿ ಜಮೀನಿನಲ್ಲಿ ಎಲ್ಲೆಲ್ಲಿ ಸಸಿ ನೆಡಲು ಅವಕಾಶ ಇದೆಯೋ ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗಿಡ ನೆಟ್ಟು, ಅದರ ಪೋಷಣೆಗೆ ಇತರ ಇಲಾಖೆಗಳ ನೆರವು ಪಡೆಯುವಂತೆ ತಿಳಿಸಿದರು.ಜಲಾಶಯಗಳ ನೀರಿನ ಮಟ್ಟ

ಈ ಸಭೆಯಲ್ಲಿ ಅರಣ್ಯ, ವನ್ಯಜೀವಿ ಮತ್ತು ಪರಿಸರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳಾದ ಸಂಜಯ್ ಬಿಜ್ಜೂರ್, ರಾಜೀವ್ ರಂಜನ್ ಮತ್ತಿತರರು ಪಾಲ್ಗೊಂಡಿದ್ದರು.

Copyright © All rights reserved Newsnap | Newsever by AF themes.
error: Content is protected !!