ಅಮೆರಿಕಾದಲ್ಲಿ 80 ಕೋಟಿ ರೂ. ವೆಚ್ಚದ ಕಾಲಭೈರವೇಶ್ವರ ದೇಗುಲ ನಿರ್ಮಾಣ- ಶ್ರೀಗಳಿಂದ ಕಾಮಗಾರಿ ಪರಿಶೀಲನೆ

Team Newsnap
1 Min Read
80 crores in America. Construction of Kalabhairaveshwar temple at cost - ಅಮೆರಿಕಾದಲ್ಲಿ 80 ಕೋಟಿ ರೂ. ವೆಚ್ಚದ ಕಾಲಭೈರವೇಶ್ವರ ದೇಗುಲ.

ನ್ಯೂಯಾರ್ಕ್: ಅಮೆರಿಕದ ನ್ಯೂ ಜೆರ್ಸಿಯ ಫ್ರ್ಯಾಂಕ್ಲಿನ್ ಟೌನ್ಶಿಪ್ ನಲ್ಲಿ ಆದಿ ಚುಂಚನಗಿರಿ ಮಠದ ವತಿಯಿಂದ 80 ಕೋಟಿ ರೂ. ವೆಚ್ಚದಲ್ಲಿ ಶ್ರೀ ಕಾಲಭೈರವೇಶ್ವರ ದೇಗುಲ ನಿರ್ಮಾಣವಾಗುತ್ತಿದೆ . ಮಠಾಧಿಪತಿ ಶ್ರೀ ನಿರ್ಮಲಾನಂದ ಸ್ವಾಮೀಜಿಗಳು ಕಾಮಗಾರಿ ಪರಿಶೀಲನೆ ಮಾಡಿದರು.

ಶ್ರೀಗಳು ದೇಗುಲ ಕಾಮಗಾರಿ ಪರಿಶೀಲನೆಗಾಗಿ ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ.

ಆದಿ ಚುಂಚನಗಿರಿ ಮಹಾಸಂಸ್ಥಾನ ಈ ಟೌನ್ಶಿಪ್ ನಲ್ಲಿ 20 ಎಕರೆ ಜಮೀನು ಖರೀದಿಸಿದೆ. ಇಲ್ಲಿ ನಿರ್ಮಾಣ ಆಗುತ್ತಿರುವ 5000 ಚದರ ಮೀಟರ್ ಕಟ್ಟಡದಲ್ಲಿ ಯೋಗ, ಧ್ಯಾನ ಹಾಗೂ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಉದ್ದೇಶ ಹೊಂದಿದೆ.

ಮೊದಲ ಹಂತದಲ್ಲಿ ದೇವಾಲಯ, ಅರ್ಚಕರ ನಿವಾಸ ನಿರ್ಮಾಣವಾಗಲಿದೆ. ಡಾ. ಅಮರನಾಥಗೌಡ, ಡಾ. ಬಾಬು ಕಿಲಾರ ಅವರ ಮುಂದಾಳತ್ವದಲ್ಲಿ ಈ ಕಾಮಗಾರಿಗಳು ಆರಂಭವಾಗಿವೆ. ಸುಮಾರು 10 ಮಿಲಿಯನ್ ಡಾಲರ್ (80 ಕೋಟಿ ರೂ.) ಮೊತ್ತದ ಯೋಜನೆ ಇದಾಗಿದೆ.ವನ್ಯಜೀವಿಯಿಂದ ಜೀವಹಾನಿ: ಸ್ಥಳ ಭೇಟಿಗೆ ಸಚಿವ ಖಂಡ್ರೆ ಸೂಚನೆ

ಕಿಲಾರ ಅವರು ದೇವಾಲಯದ ವಿನ್ಯಾಸ, ಪರಿಸರ ಇಲಾಖೆ ಅನುಮತಿ ಮತ್ತು ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

Share This Article
Leave a comment