ಅಕ್ಕನ ಮನೆಯಲ್ಲೇ ಲೂಟಿ: ಪೋಲೀಸರ ಅತಿಥಿಯಾದ ಸಹೋದರ

Team Newsnap
1 Min Read

ಹನೂರು: ತಾಲೂಕಿನ ನಾಲ್ ರೋಡ್ ಗ್ರಾಮದ ನಿವಾಸಿ ಮಾರ್ಟಳ್ಳಿ ಗ್ರಾಮ ಪಂಚಾಯತ್ ಸದಸ್ಯೆ ಚಿನ್ನಮ್ಮನ ಮನೆಯಲ್ಲೇ ಚಿನ್ನಾಭರಣ ದೋಚಿದ ಘಟನೆ ಜರುಗಿದೆ.

ಕುಮಾರ್ ತನ್ನ ಒಡಹುಟ್ಟಿದ ಅಕ್ಕನ ಮನೆಯಲ್ಲೆ 150 ಗ್ರಾo ಚಿನ್ನ 6 ಲಕ್ಷ ನಗದು ಲೂಟಿ ಮಾಡಿ ಕಳೆದ 14 ದಿನಗಳಿಂದ ತಲೆಮಾರೆಸಿಕೊಂಡಿದ್ದನು ಇದೀಗ ಪೋಲೀಸರು ಆತನನ್ನು ಬಲೆ ಬೀಸಿ ಬಂಧಿಸಿದ್ದಾರೆ.

ನಾಲ್ ರೋಡ್ ಗ್ರಾಮದ ಚಿನ್ನಮ್ಮ ಎಂಬುವವರು ಜುಲೈ 23 ರಂದು ತಮಿಳುನಾಡಿಗೆ ಕಾರ್ಯನಿಮಿತ್ತ ತೆರಳಿದ್ದರು. ಕೆಲಸ ಮುಗಿಸಿ ಜುಲೈ 27ರಂದು ಗ್ರಾಮಕ್ಕೆ ಆಗಮಿಸಿದ ಚಿನ್ನಮ್ಮನವರು ಮನೆಯಲ್ಲಿ ಚಿನ್ನ ಹಾಗೂ ನಗದು ಕಳುವಾಗಿರುವ ವಿಚಾರ ತಿಳಿದು ಈ ಬಗ್ಗೆ ಅದೇ ದಿನ ರಾಮಪುರ ಪೊಲೀಸರಿಗೆ ದೂರು ನೀಡಿದರು.

ರಾಮಪುರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಸಂತೋಷ್ ಕಶ್ಯಪ್ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಿ ಪರಾರಿಯಾಗಿದ್ದವನ ಪತ್ತೆ ಮಾಡಲು ಬಲೆ ಬೀಸಿದ್ದರು. ಆಗಸ್ಟ್ 10ರಂದು ಪರಾರಿಯಾಗಿದ್ದ ಕಳ್ಳನನ್ನು ಬಂಧಿಸಿ ಬಂದಿತನಿಂದ 150 ಗ್ರಾಂ ಚಿನ್ನ ಹಾಗೂ ಆರು ಲಕ್ಷ ನಗದನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಲೋಕಾ ಕೈಗೆ ಸಿಕ್ಕಿ ಹಾಕಿಕೊಂಡರೆ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ; ಸಂಪುಟದ ಒಪ್ಪಿಗೆ

ಕಾರ್ಯಾಚರಣೆಯಲ್ಲಿ ರಾಮಪುರ ಪಿಎಸ್ಐ ರಾಧಾ, ಎಎಸ್ಐ ಗುರುಸ್ವಾಮಿ, ಅಪರಾಧ ವಿಭಾಗದ ಮುಖ್ಯಪೇದೆಗಳಾದ ಸಿದ್ದೇಶ್ ಕುಮಾರ್, ನಾಗೇಂದ್ರ, ಗಿರೀಶ್, ಮಂಜು ಲಿಯಾಖತ್ ಅಲಿಖಾನ್, ಪರಶುರಾಮ್ ಪೇದಗಳಾದ ಮಹೇಂದ್ರ ಬಿರಾದಾರ್ ಪಾಲ್ಗೊಂಡಿದ್ದರು.

ವರದಿ :- ನಾಗೇಂದ್ರ ಪ್ರಸಾದ್

Share This Article
Leave a comment