July 31, 2025

Newsnap Kannada

The World at your finger tips!

WhatsApp Image 2024 09 30 at 5.40.57 PM

ಮುಡಾ ಹಗರಣ: ಲೋಕಾಯುಕ್ತ ಸಂಸ್ಥೆಯೇ ಅಪರಾಧಿ ಸ್ಥಾನದಲ್ಲಿದೆ- ಸ್ನೇಹಮಯಿ ಕೃಷ್ಣ ಆರೋಪ

Spread the love

ಮೈಸೂರು: ಮುಡಾ ಹಗರಣದ ಕುರಿತು ಲೋಕಾಯುಕ್ತ ಸಂಸ್ಥೆಯೇ ಅಪರಾಧಿ ಸ್ಥಾನದಲ್ಲಿದೆ ಎಂದು ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಗಂಭೀರ ಆರೋಪ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಆರೋಪಗಳು:
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸ್ನೇಹಮಯಿ ಕೃಷ್ಣ, ಲೋಕಾಯುಕ್ತ ಅಧಿಕಾರಿಗಳ ನಡೆ ಅನುಮಾನಾಸ್ಪದವಾಗಿದೆ ಎಂಬುದಾಗಿ ತಿಳಿಸಿದ್ದಾರೆ. ಈ ಹಗರಣದ ತನಿಖೆಯನ್ನು ಕೇಂದ್ರ ತನಿಖಾ ದಳ (ಸಿಬಿಐ)ಗೆ ವಹಿಸಬೇಕೆಂದು ಅವರು ಒತ್ತಾಯಿಸಿದರು.

ಸರ್ಚ್ ವಾರೆಂಟ್ :
ಜೂನ್ 28 ರಂದು ಲೋಕಾಯುಕ್ತ ಕಚೇರಿಯಲ್ಲಿ ದಾಳಿ ನಡೆಸಲು ಸರ್ಚ್ ವಾರೆಂಟ್ ಜಾರಿಯಾಗಿದ್ದರೂ, ಡಿವೈಎಸ್‌ಪಿ ಮಾಲತೇಶ್ ಎಸ್.ಕೆ ಅವರ ಆದೇಶವನ್ನು ಪಾಲಿಸಲಾಗಿಲ್ಲ.
ಅದರ ಮೆಟ್ಟಿಲಲ್ಲಿ, ದಾಳಿಯ ಮಾಹಿತಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರಿಗೆ ಮುಂಚಿತವಾಗಿ ನೀಡಲಾಗಿದೆ ಎಂದು ಸ್ನೇಹಮಯಿ ಆರೋಪಿಸಿದ್ದಾರೆ.


ಸಚಿವರು ಚಾಪರ್ ಮೂಲಕ ದಾಳಿಯ ಮುನ್ನವೇ ಬಂದು, ಪ್ರಮುಖ ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ದೂರಿದ್ದಾರೆ.ಇದನ್ನು ಓದಿ –ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನ: `ವಕ್ಫ್ ತಿದ್ದುಪಡಿ’ ಸೇರಿ 16 ಮಸೂದೆ ಮಂಡಿಸಲು ಸರ್ಕಾರ ಸಜ್ಜು!

ಸ್ನೇಹಮಯಿ ಕೃಷ್ಣ ಅವರ ಈ ಆರೋಪಗಳು ಮುಡಾ ಹಗರಣದ ತನಿಖೆಗೆ ಸಂಬಂಧಿಸಿದ ಪ್ರಾಮಾಣಿಕತೆ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟಿಸುತ್ತಿವೆ. ಹಗರಣದ ಸತ್ಯಾಂಶವನ್ನು ಬಯಲಿಗೆ ತರುವುದಕ್ಕಾಗಿ ಸಿಬಿಐ ತನಿಖೆ ಅತ್ಯವಶ್ಯಕವಾಗಿದೆ ಎಂದು ಹೇಳಲಾಗಿದೆ.

error: Content is protected !!