ನವದೆಹಲಿ : ಲೋಕಸಭೆ ಕಲಾಪದ ವೇಳೆ ಇಬ್ಬರು ಅಪರಿಚಿತ ವ್ಯಕ್ತಿಗಳು ನುಗ್ಗಿ ಆತಂಕ ಸೃಷ್ಟಿಸಿದ ಘಟನೆ ಇಂದು ಮಧ್ಯಾಹ್ನಸಂಸತ್ ಭವನದಲ್ಲಿ ಜರುಗಿದೆ
ಕಲಾಪದ ವೇಳೆ ಇಬ್ಬರು ಅಪರಿಚಿತ ವ್ಯಕ್ತಿಗಳು ಏಕಾಏಕಿ ಸಂಸತ್ ಗ್ಯಾಲರಿಯಿಂದ ಲೋಕಸಭೆ ಕಲಾಪ ನಡೆಯುತ್ತಿದ್ದ ಸಭಾಂಗಣಕ್ಕೆ ಜಿಗಿದಿದ್ದಾರೆ.
ಈ ಬೆನ್ನಲ್ಲೇ ಒಂದು ಕ್ಷಣ ಇತರೆ ಲೋಕಸಭೆ ಸದಸ್ಯರು ಗಾಬರಿಯಾದರು. ಕೂಡಲೇ ಅಲ್ಲಿಗೆ ಆಗಮಿಸಿದ ಮಾರ್ಷಲ್ಗಳು ಇಬ್ಬರು ವ್ಯಕ್ತಿಗಳನ್ನು ಹಿಡಿದು ಭದ್ರತಾ ಸಿಬ್ಬಂದಿಗೆ ನೀಡಿದ್ದಾರೆ. ಭದ್ರತಾ ಲೋಪದ ನಂತರ ಸದನವನ್ನು ಎರಡು ಗಂಟೆಗಳ ಕಾಲ ಮುಂದೂಡಲಾಯಿತು. ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In india
ಇಂದು ಸಂಸತ್ ದಾಳಿಯ 22ನೇ ವಾರ್ಷಿಕೋತ್ಸವ. ಈ ದಿನದಂದು ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪೆನ್ನುನ್ ದಾಳಿ ಮಾಡೋದಾಗಿ ಡಿಸೆಂಬರ್ 6 ರಂದು ಎಚ್ಚರಿಕೆ ನೀಡಿದ್ದ. ಡಿಸೆಂಬರ್ 13 ರೊಳಗೆ ನಾವು ಸಂಸತ್ ಭವನದ ಮೇಲೆ ದಾಳಿ ಮಾಡುತ್ತೇವೆ ಎಂದು ವಿಡಿಯೋ ಹರಿಬಿಟ್ಟಿದ್ದ. ಅಂತೆಯೇ ಇಂದು ಡಿಸೆಂಬರ್ 13. ಸಂಸತ್ ಕಲಾಪಕ್ಕೂ ಮುನ್ನ ಉಗ್ರರ ದಾಳಿಯಲ್ಲಿ ಹುತಾತ್ಮರಾಗಿದ್ದವರಿಗೆ ಸಂಸತ್ ಸದಸ್ಯರು ನಮನ ಸಲ್ಲಿಸಿದ್ದರು. ಕೂಡಲೇ ಸಂಸತ್ ಕಲಾಪದ ವೇಳೆ ಭದ್ರತಾ ಲೋಪವಾಗಿದೆ. 2021, ಡಿಸೆಂಬರ್ 13 ರಂದು ಸಂಸತ್ ಭವನದ ಮೇಲೆ ದಾಳಿಯಾಗಿತ್ತು ಎಂಬುದನ್ನು ಸ್ಮರಿಸಬುಹುದು.
lok sabha security breach in kannada ಲೋಕಸಭೆ ಕಲಾಪದ ವೇಳೆ ಸ್ಫೀಕರ್ ಛೇರ್ ನತ್ತ ನುಗ್ಗಿದ ದುಷ್ಕರ್ಮಿಗಳು Miscreants stormed the speaker’s chair during Lok Sabha proceeding
More Stories
2025ರಿಂದ ಕ್ಯಾನ್ಸರ್ ಲಸಿಕೆ ಉಚಿತ ವಿತರಣೆ: ಮಹತ್ವದ ವೈದ್ಯಕೀಯ ಸಾಧನೆ
ವಿರೋಧ ಲೆಕ್ಕಿಸದ ಮೋದಿ ಸರ್ಕಾರ
ಒಂದು ದೇಶ, ಒಂದು ಚುನಾವಣೆ ಮಸೂದೆ ಲೋಕಸಭೆಯಲ್ಲಿ ಮಂಡನೆ