ಲೋಕಸಭಾ ಚುನಾವಣೆ: ಪಕ್ಷಕ್ಕೆ ದುಡಿದವರಿಗೆ ಟಿಕೆಟ್ – ಸಚಿವ ಚಲುವರಾಯಸ್ವಾಮಿ

Team Newsnap
2 Min Read

ಮಂಡ್ಯ : ಮುಂಬರುವ ಲೋಕಸಭಾ ಚುನಾವಣಾಯಲ್ಲಿ ಪಕ್ಷಗಾಗಿ ದುಡಿದವರಿಗೆ ಟಿಕೆಟ್ ನೀಡುತ್ತೇವೆ. ಅಲ್ಲದೆ ಪಕ್ಷದ ಅಧ್ಯಕ್ಷರು ಹಾಗೂ ಸಿಎಂ ಸಿದ್ದರಾಮಯ್ಯ ಆಯ್ಕೆ ಮಾಡಿದ ಅಭ್ಯರ್ಥಿಯನ್ನು ಬೆಂಬಲಿಸುವುದಾಗಿ ಒಂದು ಸಾಲಿನ ನಿರ್ಣಯ ಕಳುಹಿಸಲಿದ್ದೇವೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್. ಚಲುವರಾಯಸ್ವಾಮಿ ಪ್ರಕಟಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಪ್ರಬಲ ವಾಗಿದೆ ಲೋಕಸಭಾ ಚುನಾವಣೆ ಬಗ್ಗೆ ಪಕ್ಷದ ವರಿಷ್ಠರಿಗೆ ಒಂದು ಸಾಲಿನ ನಿರ್ಣಯ ಕಳುಹಿಸಲಿದ್ದೇವೆ. ನಮ್ಮೆಲ್ಲರ ಅಭಿಪ್ರಾಯಕ್ಕೆ ಮನ್ನಣೆ ಸಿಗಲಿದೆ ಎಂದರು.

ಚುನಾವಣೆಗೂ ಮುನ್ನ ಜೆಡಿಎಸ್ ಮೈತ್ರಿಯಾದ ಇತಿಹಾಸ ಇರಲಿಲ್ಲ. ದೇವೇಗೌಡರು ಮಾಜಿ ಪ್ರಧಾನಿಗಳು ಅವರ ಬಗ್ಗೆ ಗೌರವವಿದೆ. ಬಿಜೆಪಿ ಜೆಡಿಎಸ್ ಗೆ ಮೈತ್ರಿ ಅನಿವಾರ್ಯ. ನಮಗೆ ಅದರ ಬಗ್ಗೆ ಚಿಂತೆ ಇಲ್ಲ. ಇಬ್ಬರಿಗೂ ಒಬ್ಬರಿಗೊಬ್ಬರು ಅನಿವಾರ್ಯ. ನಮಗೆ ಇವರು ಅನಿವಾರ್ಯ ಅಲ್ಲ, ನಮಗೆ ಜನರು ಅನಿವಾರ್ಯ ಎಂದರು.

ಕಾವೇರಿ ನೀರು ವಿಚಾರವಾಗಿ ಕೇಂದ್ರ ಸ್ಪಂದಿಸಲು ತಯಾರಿಲ್ಲ. ಬರದ ಪರಿಸ್ಥಿತಿ ಹೇಳಲು ಭೇಟಿಗೆ ಅವಕಾಶ ನೀಡುತ್ತಿಲ್ಲ. ಇಂತಹವರ ಜೊತೆ ಈಗ ಜೆಡಿಎಸ್ ಜೊತೆಯಾಗಿದ್ದಾರೆ ಎಂದರು.

ಕಾವೇರಿ ಬಗ್ಗೆ ಮಾತನಾಡುವ ಯಡಿಯೂರಪ್ಪ ಬೊಮ್ಮಾಯಿ, ಕುಮಾರಸ್ವಾಮಿ, ಪ್ರಧಾನಿ ಬಳಿ ಹೋಗಬಹುದಿತ್ತು. ರಾಜ್ಯದ ಹಿತಕ್ಕಾಗಿ ನೀವು ಮಧ್ಯಪ್ರವೇಶಿಸಿ ಎನ್ನಬಹುದಿತ್ತು. ಆದರೆ ಅವರಿಗೆ ರಾಜ್ಯದ ಜನರ ಹಿತ ಕಾಯುವ ಆಸಕ್ತಿ ಇಲ್ಲ ಎಂದರು.

cheluvarayaswamy

ಕಾಂಗ್ರೆಸ್‌ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ರಾಜ್ಯದ ಅಭಿವೃದ್ಧಿಗೂ ಪಣತೊಟ್ಟಿದೆ. ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನು ನೀಡುತ್ತಿದ್ದೇವೆ ಎಂದರು.

ಉನ್ನತ ಶಿಕ್ಷಣ ಸಚಿವ ಸುಧಾಕರ್ ಅವರು ಮಾತನಾಡಿ ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಸಿಎಂ, ಡಿಸಿಎಂಗೆ ಬಿಟ್ಟಿದ್ದೇವೆ. ಕಾರ್ಯಕರ್ತರು, ಮುಖಂಡರು ಒಮ್ಮತದ ನಿರ್ಧಾರ ತಿಳಿಸಿದ್ದಾರೆ. ಪಕ್ಕಕ್ಕಾಗಿ ಕೆಲಸ ಮಾಡಿದವರೆ ಅಭ್ಯರ್ಥಿ ಆಗಲಿದ್ದಾರೆ ಎಂದರು.

ಕಾಂಗ್ರೆಸ್ ಪಕ್ಷ ಗೆಲ್ಲಲು ಹಿರಿಯ ನಾಯಕರಿಗೆ ಜವಾಬ್ದಾರಿ ನೀಡಲಾಗಿದೆ ಎಂದು ತಿಳಿಸಿದರು.2024ಕ್ಕೆ ಭಾರತದ ಮೊದಲ ಮಾನವ ಸಹಿತ ಬಾಹ್ಯಾಕಾಶ ಪ್ರಯಾಣ- ನೌಕೆಯ ಚಿತ್ರ ಬಿಡುಗಡೆ

ಇದೇ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಚಂದ್ರಣ್ಣ,ಶಾಸಕರಾದ, ಪಿ.ಎಂ ನರೇಂದ್ರಸ್ವಾಮಿ,ರಮೇಶ ಬಾಬು ಬಂಡಿಸಿದ್ದೇಗೌಡ,ದಿನೇಶ್ ಗೂಳಿಗೌಡ,ಮಧು ಜಿ ಮಾದೇಗೌಡ,ಮಾಜಿ ಶಾಸಕರಾದ ಬಿ.ರಾಮಕೃಷ್ಣ,ಹೆಚ್.ಬಿ.ರಾಮು,ಕೆ.ಬಿ.ಚಂದ್ರಶೇಕರ್,ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್ ಸೇರಿದಂತೆ ಪಕ್ಷದ ಮುಖಂಡರುಗಳು ಹಾಜರಿದ್ದರು.

Share This Article
Leave a comment