February 22, 2026

Newsnap Kannada

The World at your finger tips!

drugs , ganja , smuggling

ಲಾಡ್ಜ್ ನಲ್ಲಿ ಉದ್ಯಮಿ ಆತ್ಮಹತ್ಯೆ ಶಂಕೆ: ಪತ್ನಿ ಕವಿತಾ ಎಸ್ಕೇಪ್ !

Spread the love

ಸಾಕಷ್ಟು ಸಾಲ ಮಾಡಿಕೊಂಡಿದ್ದ
ಬೆಂಗಳೂರು ಮೂಲದ ಉದ್ಯಮಿಯೊಬ್ಬರ ಶವ ಮೈಸೂರಿನ ಲಾಡ್ಜ್ ಒಂದರಲ್ಲಿ ಪತ್ತೆಯಾಗಿದೆ. ಇದೊಂದು ಆತ್ಮಹತ್ಯೆ ಎಂದು ಹೇಳಲಾಗುತ್ತದೆ. ಆದರೆ ಸಾವಿನ ಹಿಂದೆ ಅನುಮಾನದ ಹುತ್ತ ಬೆಳದಿದೆ.‌

ಉಮಾಶಂಕರ್ (45) ಮೃತ ಉದ್ಯಮಿ. ಪತ್ನಿಯ ಜೊತೆ ಲಾಡ್ಜ್ ಗೆ ಬಂದಿದ್ದರು.‌ ಆದರೆ ಬೆಳಿಗ್ಗೆ ಪತ್ನಿ ಕವಿತಾ ಎಂಬಾಕೆ ನಾಪತ್ತೆಯಾದ ಬೆನ್ನಲ್ಲೇ ಲಾಡ್ಜ್ ನ ಅದೇ ರೂಂ ನಲ್ಲಿ ಉದ್ಯಮಿ ಉಮಾಶಂಕರ್ ಸಾವನ್ನಪ್ಪಿರುವುದು ಶಂಕೆಗೆ ಕಾರಣವಾಗಿದೆ.

ಲಾಡ್ಜ್ ನ ಕೊಠಡಿಯಲ್ಲಿ ಇನ್ಸುಲಿನ್ ಪತ್ತೆಯಾಗಿದೆ. ಅತಿಯಾದ ಇನ್ಸುಲಿನ್ ನಿಂದ ಉಮಾಶಂಕರ್ ಸಾವನ್ನಪ್ಪಿರುವ ಶಂಕೆಯೂ ವ್ಯಕ್ತವಾಗಿದೆ. ಇದೇ ವೇಳೆ ಕೊಠಡಿಯಲ್ಲಿ ಪತ್ರ ಕೂಡ ಸಿಕ್ಕಿದ್ದು, ಪತ್ರದಲ್ಲಿ ಸಾಲಬಾಧೆ ತಾಳಲಾರದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದು ಉಮಾಶಂಕರ್ ಹಾಗೂ ಪತ್ನಿ ಕವಿತಾ ಸಹಿ ಹಾಕಿದ್ದಾರೆ.

ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಲಾಡ್ಜ್ ರೂಂ ನಿಂದ ಎಸ್ಕೇಪ್ ಆಗಿರುವ ಕವಿತಾಳನ್ನು ಮಂಡಿ ಪೋಲಿಸರು ಹುಡುಕಾಟ ಮಾಡುತ್ತಿದ್ದಾರೆ.

error: Content is protected !!