ಲಾಕ್‍ಡೌನ್ ಘೋಷಣೆ : ಹೆಚ್ಚಾದ ಜನರ ಗುಳೆ – ಬೆಂಗಳೂರಿಲ್ಲಿ ಸಂಚಾರ ಅಸ್ತವ್ಯಸ್ತ – ಪೋಲಿಸರ ಹರಸಾಹಸ

Team Newsnap
1 Min Read

14 ದಿನಗಳ ಲಾಕ್‍ಡೌನ್ ಘೋಷಣೆ ನಂತರ ಬೆಂಗಳೂರಿನಿಂದ ಜನರ ಗುಳೆ ಮಂಗಳವಾರ ಬೆಳಗ್ಗೆಯೂ ಮುಂದುವರಿದಿದೆ.

ಜನರು ಲಗೇಜುಗಳ ಸಮೇತ ಬೆಂಗಳೂರು ಮೆಜೆಸ್ಟಿಕ್ ಕೆಎಸ್‍ಆರ್ ಟಿಸಿ ನಿಲ್ದಾಣಗಳತ್ತ ಆಗಮಿಸುತ್ತಿದ್ದಾರೆ. ಇನ್ನು ಸಿಕ್ಕ ಸಿಕ್ಕ ಖಾಸಗಿ ವಾಹನಗಳನ್ನು ಹಿಡಿದು ಊರು ಸೇರಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.

ಈ ಹಿನ್ನೆಲೆಯಲ್ಲಿ ಮೆಜೆಸ್ಟಿಕ್ ಸುತ್ತಮುತ್ತ ದೊಡ್ಡ ಮಟ್ಟದಲ್ಲಿ ಸಂಚಾರ ಸಮಸ್ಯೆ ಉಂಟಾಗಿದೆ. ಪೊಲೀಸರು ಸಂಚಾರ ಸುಗಮ ಮಾಡಲು ಮುಂದಾಗಿದ್ದಾರೆ

ಎಲೆಕ್ಟ್ರಾನಿಕ್ ಸಿಟಿ ಹೊರ ಭಾಗ, ಮೈಸೂರು ರೋಡ್, ನೆಲಮಂಗಲ ನವಯುಗ ಟೋಲ್ ಗೇಟ್ ಬಳಿ ಜನರ ಸಾಗರವೇ ನೆರದಿದೆ.

ಚಿಕ್ಕ ಮಕ್ಕಳೊಂದಿಗೆ ನಾಲ್ಕೈದು ಬ್ಯಾಗ್ ಹಿಡಿದು ತಮ್ಮೂರ ಬಸ್ ಗಳಿಗಾಗಿ ಜನರು ಕಾಯುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ.

ಬೆಂಗಳೂರಿನಿಂದ ಸಮೀಪದಲ್ಲಿರುವ ಹಳ್ಳಿಯ ಜನರು ಬಹುತೇಕ ತಮ್ಮ ದ್ವಿಚಕ್ರ ವಾಹನಗಳಲ್ಲಿ ಊರಿನತ್ತ ಹೊರಟಿದ್ದಾರೆ. ಅದೇ ರೀತಿಯಾಗಿ ರೈಲ್ವೇ ನಿಲ್ದಾಣಗಳಲ್ಲಿ ಹೆಚ್ಚಾಗಿ ಅಂತರ್ ರಾಜ್ಯ ಪ್ರಯಾಣಿಕರು ಕಾಣ ಸಿಗುತ್ತಿದ್ದಾರೆ.

ಬೆಂಗಳೂರಿನಿಂದ ಎಲ್ಜಾ ಜಿಲ್ಲೆಗಳಿಗೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಳದ ಹಿನ್ನೆಲೆ ಸಾರಿಗೆ ಇಲಾಖೆ ಸಹ ಬಸ್ ವ್ಯವಸ್ಥೆ ಮಾಡುತ್ತಿದೆ. ಬೆಂಗಳೂರಿನ ಸುತ್ತಮುತ್ತ ಸ್ಥಳಗಳಿಗೆ ತೆರಳಲು ಬಿಎಂಟಿಸಿ ಬಸ್ ಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.

Share This Article
Leave a comment