ಎಲ್ ಓಸಿಯಲ್ಲಿ ಎರಡೂ ಕಡೆಯ ಸೇನೆಯ ನಡುವೆ ಶಾಂತಿ ತೀವ್ರವಾಗಿ ಹದಗೆಟ್ಟಿದೆ. ಇದು ಭಾರತ-ಚೀನಾದ ಸಂಬಂಧದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಭಾರತದ ವಿದೇಶಾಂಗ ಎಸ್.ಜೈ ಶಂಕರ್ ತಿಳಿಸಿದರು.
‘ಭಾರತ ಚೀನಾ ನಡುವಣ ಸಂಬಂಧ ತೀರಾ ಸಂಕೀರ್ಣ ಮತ್ತು ಕಠಿಣವಾಗಿದೆ. 1980 ರಿಂದ ವ್ಯಾಪಾರ, ಪ್ರವಾಸೋದ್ಯಮ ಸೇರಿದಂತೆ ಹಲವು ಕ್ರಮಗಳಿಂದ ಸಹಜ ಸ್ಥಿತಿಗೆ ಬಂದಿತ್ತು. ಗಡಿ ಪ್ರಶ್ನೆಯನ್ನು ಇತ್ಯರ್ಥಗೊಳಿಸಬೇಕು ಎಂಬುದು ನಮ್ಮ ನಿಲುವಲ್ಲ, ಗಡಿ ಪ್ರಶ್ನೆಗಳು ತೀರಾ ಸಂಕೀರ್ಣ ಹಾಗೂ ಕಠಿಣವಾದ ವಿಷಯಗಳಾಗಿವೆ ಎಂಬುದು ನಮಗೂ ಗೊತ್ತು. ಈಗಾಗಲೇ ಹಲವು ಸುತ್ತಿನ ಮಾತುಕತೆ ನಡೆದಿದೆ. ಒಂದು ದ್ವಿಪಕ್ಷೀಯ ಸಂಬಂಧಕ್ಕೆ ಇದು ಅತ್ಯಂತ ಹೆಚ್ಚಿನ ಮಟ್ಟದ ನಿರೀಕ್ಷೆಯಾಗಿದೆ’ ಎಂದು ಭಾರತ-ಚೀನಾ ನಡುವಿನ ಸಂಬಂಧದ ಬಗ್ಗೆ ಐತಿಹಾಸಿಕ ಮಾಹಿತಿಗಳು ಹಾಗೂ ಕಳೆದ 3 ದಶಕಗಳ ಅಭಿವೃದ್ಧಿಯ ಕುರಿತ ದಿ ಇಂಡಿಯಾ ವೇ ಎಂಬ ತಮ್ಮ ಪುಸ್ತಕದ ಬಗ್ಗೆ ವೆಬಿನಾರ್ ಕಾರ್ಯಕ್ರಮದಲ್ಲಿ ಎಸ್. ಜೈ ಶಂಕರ್ ಮಾತನಾಡಿದ್ದಾರೆ.
ಭಾರತ ಮತ್ತು ಚೀನಾ ಜಾಗತಿಕ ಮಟ್ಟದಲ್ಲಿ ಬಹುದೊಡ್ಡ ನಿರ್ಣಾಯಕ ಪಾತ್ರಗಳನ್ನು ವಹಿಸುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಉಭಯ ದೇಶಗಳು ಹೇಗೆ ಸಮತೋಲನ ಕಾಪಾಡಿಕೊಂಡು ಬರುತ್ತವೆ ಎಂಬುದು ಪ್ರಶ್ನೆಯ ಅಂಶವಾಗಿದೆ ಎಂದು ಅವರು ಭಾರತ-ಚೀನಾ ಸಂಬಂಧದ ಬಗ್ಗೆ ಪ್ರತಿಕ್ರಿಯಿಸಿದರು.
ಕಳೆದ 5 ತಿಂಗಳಿನಿಂದಲೂ ಲಡಾಖ್‌ನ ಎಲ್ ಓಸಿಯಲ್ಲಿ ಎರಡೂ ಸೇನೆಗಳ ನಡುವಿನ ಘರ್ಷಣೆಯಿಂದ ಅಶಾಂತಿ ಹೊಗೆಯಾಡುತ್ತಿದೆ. ಉಭತ ದೇಶಗಳು ಎಲ್ ಓಸಿಯಲ್ಲಿ 50,000 ಸೈನಿಕರನ್ನು ನಿಯೋಜನೆ ಮಾಡಿವೆ. ಒಂದೆಡೆ ಭಾರತ-ಚೀನಾ ನಡುವೆ ಶಾಂತಿ ಮಾತುಕತೆಗಳು ನಡೆಯಿತ್ತಿವೆ. ಇಂತಹ ಉದ್ವಿಗ್ನ ಪರಿಸ್ಥಿತಿಯಲ್ಲಿ ಜೈ ಶಂಕರ್ ಅವರ ಹೇಳಿಕೆ ಮಹತ್ವವನ್ನು ಪಡೆದಿದೆ.
More Stories
ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
ವಿರಾಟ್ ಕೊಹ್ಲಿಗೆ ಬಿಬಿಎಂಪಿ ನೋಟಿಸ್
ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ