December 25, 2024

Newsnap Kannada

The World at your finger tips!

WhatsApp Image 2023 01 20 at 5.06.19 PM

Like Vivekananda, Kuvempu was also opposed to ignorance. - Shankar SN ವಿವೇಕಾನಂದರಂತೆ ಕುವೆಂಪು ಕೂಡ ಮೌಢ್ಯವನ್ನು ವಿರೋಧಿಸಿದ್ದರು. - ಶಂಕರ್ ಎಸ್ ಎನ್

ವಿವೇಕಾನಂದರಂತೆ ಕುವೆಂಪು ಕೂಡ ಮೌಢ್ಯವನ್ನು ವಿರೋಧಿಸಿದ್ದರು. – ಶಂಕರ್ ಎಸ್ ಎನ್

Spread the love

ರಾಷ್ಟ್ರಕವಿ ಕುವೆಂಪು ಅವರು ವಿಶ್ವಪ್ರಜ್ಞೆಯ ಲೇಖಕರಾಗಿದ್ದರು. ಮೌಢ್ಯವನ್ನು ಬಂಗಾಲದಲ್ಲಿ ವಿರೋಧಿಸಿದ ಸ್ವಾಮಿ ವಿವೇಕಾನಂದರಂತೆ ಕನ್ನಡನಾಡಿನಲ್ಲೂ ಮೌಢ್ಯದ ವಿರುದ್ಧ ಗಟ್ಟಿದನಿ ಎತ್ತಿದವರು ಕುವೆಂಪು ಅವರು ಎಂದು ಬಿಬಿಎಂಪಿ ಮುಖ್ಯ ಆಯುಕ್ತರ ಸಂಪರ್ಕಾಧಿಕಾರಿ ಶಂಕರ್ ಎಸ್ ಎನ್ ಅವರು ಹೇಳಿದರು.

ಆಕ್ಟರ್ಸ ಸ್ಟುಡಿಯೋ, ಮಲ್ಲತ್ತಹಳ್ಳಿಯಲ್ಲಿರುವ ಕಲಾಗ್ರಾಮದಲ್ಲಿ ಏರ್ಪಡಿಸಿದ್ದ ಜಲಗಾರ ನಾಟಕೋತ್ಸವ ಉದ್ಘಾಟಿಸಿ ಮಾತನಾಡಿದರು.ಪಿಎಸ್ ಐ ಹಗರಣ: ರುದ್ರಗೌಡ ಪಾಟೀಲ್ CID ಅಧಿಕಾರಿಗಳಿಂದ ಎಸ್ಕೇಪ್

ಸಾಮಾಜಿಕ ವೈರುಧ್ಯಗಳಿಗೆ ವೈಚಾರಿಕತೆಯೇ ಮದ್ದು ಎಂಬುದನ್ನು ನಾಟಕದ ಪಾತ್ರಗಳ‌ ಮೂಲಕ ಹೊರಹಾಕಿದ್ದಾರೆ ಎಂದರು.

ಜಾತಿ, ಮತ, ಧರ್ಮಗಳ ಸಂಕೋಲೆಯನ್ನು ಮೀರಿ ಮಾನವತ್ವವನ್ನು ಪ್ರತಿಪಾದಿಸಿದ್ದ ಕುವೆಂಪು ಅವರು ಎದೆಗೂಡು ಎಂಬ ಗುಡಿಯಲ್ಲಿರುವ ದೇವರನ್ನು ಸಾಕ್ಷಾತ್ಕರಿಸಿಕೊಳ್ಳಬೇಕು ಎಂದು ಕರೆ‌ನೀಡಿದ್ದರು. ಹಾಗೆಯೇ ಸಮಾನತೆಯನ್ನು ತರುವ, ದಬ್ಬಾಳಿಕೆಯನ್ನು, ಶೋಷಣೆಯನ್ನು ನಿಗ್ರಹಿಸುವ, ಮೌಢ್ಯತೆಯನ್ನು ತೊಡೆದುಹಾಕುವ ನಾಟಕಗಳನ್ನು ರಚಿಸಿ ರಾಷ್ಟ್ರಕವಿಯಾದರು ಎಂದು ಶಂಕರ್ ಅವರು ಹೇಳಿದರು.

ಸ್ವಚ್ಚತೆಯ ರಾಯಭಾರಿಗಳಾದ ಪೌರಕಾರ್ಮಿಕರನ್ನು ಜಲಗಾರ ಎಂಬಂತೆ ಚಿತ್ರಿಸಿರುವ ಕುವೆಂಪು, ಅಸ್ಪೃಶ್ಯತೆಯ ಪರಾಕಾಷ್ಠೆಯ ಸಮಯದಲ್ಲಿ ಜಲಗಾರನನ್ನು ಶಿವನ ದೇವಾಲಯದ ಒಳಗೆ ಬಿಡದಿದ್ದಾಗ ಕುಳಿತಲ್ಲೇ ಶಿವನನ್ನು ಧ್ಯಾನಿಸಿ ದೇವರನ್ನು ಪ್ರತ್ಯಕ್ಷವಾಗಿ ಕಂಡದನ್ನು ಈ ನಾಟಕದಲ್ಲಿ ತೋರಿಸಿದ್ದಾರೆ ಎಂದರು.

ಆಕ್ಟರ್ಸ್ ಸ್ಟುಡಿಯೋ ದಲ್ಲಿ ಸತತ 45 ದಿನಗಳ ಕಾಲ ತರಬೇತಿ ಪಡೆದ ವಿದ್ಯಾರ್ಥಿಗಳು ಜಲಗಾರ ನಾಟಕವನ್ನು ಪ್ರದರ್ಶಿಸಿದರು‌.

ರಂಗಕರ್ಮಿ ರಾಜೇಶ್ ಸಾಣೇಹಳ್ಳಿ, ಕಿರುತೆರೆ ನಟಿ ಮಾಲತಿ ಗೌಡ ಹೊನ್ನಾವರ, ಬಿಗ್ ಬಾಸ್ ಸ್ಪರ್ಧಿ ವಿನೋದ್ ಗೊಬ್ಬರಗಾಲ, ನಟ ಮಹಾಂತೇಶ್ ಹಿರೇಮಠ, ಅಕ್ಷಯ್ ನಾಯಕ್ ಸೇರಿದಂತೆ ಹಲವು ರಂಗಕರ್ಮಿಗಳು, ನಾಟಕಕಾರರು ಉಪಸ್ಥಿತರಿದ್ದರು.

Copyright © All rights reserved Newsnap | Newsever by AF themes.
error: Content is protected !!