ಕನ್ನನಾಯಕನಹಳ್ಳಿಯಲ್ಲಿ ಚಿರತೆ ದಾಳಿಗೆ 3ನೇ ಬಲಿ

Team Newsnap
1 Min Read
3rd victim of leopard attack in Kannanayakanahalli ಕನ್ನನಾಯಕನಹಳ್ಳಿಯಲ್ಲಿ ಚಿರತೆ ದಾಳಿಗೆ 3ನೇ ಬಲಿ

ಮೈಸೂರು ಜಿಲ್ಲೆಯಲ್ಲಿ ಚಿರತೆಗಳ ದಾಳಿಗೆ ಮತ್ತೊಂದು ಬಲಿಯಾಗಿದೆ.

ನರಸೀಪುರ ತಾಲೂಕಿನ ಕನ್ನನಾಯಕನಹಳ್ಳಿಯಲ್ಲಿ ದಾಳಿ ನಡೆಸಿದ ನರಹಂತಕ ಚಿರತೆ, ಗ್ರಾಮದ ಸಿದ್ದಮ್ಮ ಎಂಬ 60 ವರ್ಷದ ವೃದ್ಧೆಯನ್ನು ಸಾಯಿಸಿದೆ.ಪಿಎಸ್ ಐ ಹಗರಣ: ರುದ್ರಗೌಡ ಪಾಟೀಲ್ CID ಅಧಿಕಾರಿಗಳಿಂದ ಎಸ್ಕೇಪ್

ಮೂರನೇ ಬಲಿ ಇದಾಗಿದೆ. ಸಿದ್ದಮ್ಮ ಮನೆಯಾಚೆಯಿದ್ದ ಸೌದೆ ತರಲೆಂದು ಹೊರಗೆ ಬಂದಿದ್ದ ವೇಳೆ ಚಿರತೆ ದಾಳಿ ಮಾಡಿದೆ ಎಂದು ತಿಳಿದು ಬಂದಿದೆ.

ದಾಳಿ ಮಾಡಿದ್ದಲ್ಲದೇ ವೃದ್ಧೆ ಸಿದ್ದಮ್ಮಳನ್ನು ಎಳೆದೊಯ್ದಿದೆ. ಈ ವೇಳೆ ಗ್ರಾಮಸ್ಥರು ಕಿರುಚಾಡಿದ ಹಿನ್ನೆಲೆ ಸ್ಥಳದಲ್ಲಿಯೇ ಮಹಿಳೆಯ ದೇಹ ಬಿಟ್ಟು ಕಾಲ್ಕಿತ್ತಿದೆ. ಘಟನಾ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ನಡೆದು ಗಂಟೆಗಳು ಕಳೆದರೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿಲ್ಲ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.

ಸಿದ್ದಮ್ಮಳ ಮೃತ ದೇಹವನ್ನು ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡುವ ಸಾಧ್ಯತೆ ಇದೆ.

ಅಕ್ಟೋಬರ್ 31 ತಾಲೂಕಿನ ಮದ್ಗಾರ್ ಲಿಂಗಯ್ಯನಹುಂಡಿ ಗ್ರಾಮದ ಬಳಿ ದಾಳಿ ಮಾಡಿದ್ದ ನರಹಂತಕ ಚಿರತೆ ಮಂಜುನಾಥ್ (18) ಎಂಬ ಯುವಕನನ್ನು ಬಲಿ ತಡೆದುಕೊಂಡಿತ್ತು. ಅದಾದ ಬಳಿಕ ಡಿಸೆಂಬರ್​ 1 ರಂದು ತಾಲೂಕಿನ ಎಸ್.ಕೆಬ್ಬೆಹುಂಡಿ ಗ್ರಾಮದಲ್ಲಿ ದಾಳಿ ಮಾಡಿ ಮೇಘನಾ (22) ಎಂಬ ಯುವತಿ ಬಲಿ ಪಡೆದಿತ್ತು. ಇದೀಗ ಮೂರನೇ ಬಲಿ ತೆಗೆದುಕೊಂಡಿದೆ.

Share This Article
Leave a comment