Editorial

ದಾರಿ ದೀಪ – 4

ಮಾ ವಿದ್ವಿಷಾವಹೈ…

ಡಾ.ಶ್ರೀರಾಮ ಭಟ್ಟ


ಸಹ ನಾವವತು ಸಹ ನೌ ಭುನಕ್ತು ಸಹ ವೀರ್ಯಂಕರವಾವಹೈ
ತೇಜಸ್ವಿ ನಾವಧೀತಮಸ್ತು ಮಾ ವಿದ್ವಿಷಾವಹೈ
ಓಂ ಶಾಂತಿಃ ಶಾಂತಿಃ ಶಾಂತಿಃ. (ಕಠೋಪನಿಷತ್೨:೩:೧೯)
ಜ್ಞಾನ ಪ್ರಕಾಶವು ನಮ್ಮಿಬ್ಬರನ್ನೂ ಕಾಪಾಡಲಿ, ನಮ್ಮಿಬ್ಬರಿಗೂ ಫಲವನ್ನು ಉಣ್ಣಿಸಲಿ, ನಾವು ಅದನ್ನು ಊರ್ಜಸ್ವಿಯಾಗಿ ಮಾಡೋಣ, ನಮ್ಮಿಬ್ಬರ ಅಧ್ಯಯನವು ಪ್ರಖರವಾಗಿ ಬೆಳಗಲಿ, ನಾವಿಬ್ಬರೂ ಪರಸ್ಪರ ದ್ವೇಷಿಸದೆ ಇರೋಣ. ಓಂ ಶಾಂತಿ ಶಾಂತಿ ಶಾಂತಿ.
ಇದು ಕಠೋಪನಿಷತ್ತಿನ ಕೊನೆಯ ಮಂತ್ರ. ಕಠೋಪನಿಷತ್ತು ಯಮ ಮತ್ತು ನಚಿಕೇತ ಇವರಿಬ್ಬರ ನಡುವೆ ನಡೆದ ಸಂವಾದ. ಈ ಕಥೆ ತುಂಬ ಪ್ರಸಿದ್ಧವಾದುದು.

ಕಠೋಪನಿಷತ್ತೂ ಸೇರಿದಂತೆ ಕೆಲವು ಉಪನಿಷತ್ತುಗಳಿಗೆ ಇದು ಶಾಂತಿಮಂತ್ರ ಕೂಡ ಆಗಿದೆ. ಅಂದರೆ ಆ ಉಪನಿಷತ್ತುಗಳ ಪಾಠ ಪ್ರವಚನಕ್ಕೆ ಮೊದಲು ಮತ್ತು ಕೊನೆಯಲ್ಲಿ ಗುರು ಶಿಷ್ಯ ಇಬ್ಬರೂ ಒಟ್ಟಿಗೆ ಪ್ರಾರ್ಥಿಸುವ ಮಂತ್ರ. ತೀರ ಇತ್ತೀಚಿನ ವರೆಗೂ ಕೆಲವು ಶಾಲಾ ಕಾಲೇಜುಗಳಲ್ಲಿ ಬೆಳಗಿನ ಪ್ರಾರ್ಥನೆಯಲ್ಲಿ ಈ ಮಂತ್ರವನ್ನು ಬಳಸಲಾಗುತ್ತಿತ್ತು. ‘ಕೇಸರೀಕರಣ’ದ ಅಳುಕಿನಿಂದಲೋ ಏನೋ, ಸಾರ್ವಜನಿಕ ವಲಯದಲ್ಲೆಲ್ಲೂ ಈ ಮಂತ್ರ ಪಠನ ಕೇಳಿ ಬರುತ್ತಿಲ್ಲ. ಸಾಂಪ್ರದಾಯಿಕ ವಲಯದಲ್ಲಿ ಕೆಲವೆಡೆ ಈಗಲೂ ಊಟಕ್ಕೆ ಮುಂಚೆ ಈ ಮಂತ್ರವನ್ನು ಪಠಿಸುವ ರೂಢಿ ಇದೆ. ಎಂಥ ಹಾಸ್ಯಾಸ್ಪದ! ಊಟಕ್ಕೂ ಇದಕ್ಕೂ ಏನು ಸಂಬಂಧ? ಪ್ರಾಯಃ ಭುನಕ್ತು (ಉಣ್ಣಿಸಲಿ) ಎಂಬ ಕೋರಿಕೆ ಭೋಜನಪ್ರಿಯರಿಗೆ ಆಪ್ಯಾಯಮಾನವಾಗಿ ಕೇಳಿಸಿರಬಹುದು. ಶಿಕ್ಷಣದಲ್ಲಿ ಕಲಿಯುವವನಿಗಷ್ಟೇ ಅಲ್ಲದೆ ಕಲಿಸುವವನಿಗೂ ವಿದ್ಯೆಯ ಫಲ ಲಭಿಸುತ್ತಲ್ಲ. ಆ ಅರ್ಥದಲ್ಲಿ ಇಬ್ಬರದೂ ಒಂದೇ ಸ್ತರ. ‘ನಮ್ಮಿಬ್ಬರ ಅಧ್ಯಯನ’ (ನೌ ಅಧೀತಮ್) ಎಂದು ಮಂತ್ರ ಸ್ಪಷ್ಟವಾಗಿ ಹೇಳುತ್ತಿದೆ.


ಕಲಿಕೆ ಅಥವಾ ಜ್ಞಾನಪ್ರಾಪ್ತಿಯ ಪ್ರಕ್ರಿಯೆಯಲ್ಲಿ ಗುರು ಶಿಷ್ಯ ಎನ್ನುವುದು ಪರಂಪರೆ. ಆ ಪರಂಪರೆ ಜ್ಞಾನದ ಸಾತತ್ಯವನ್ನು ಕಾದುಕೊಳ್ಳುತ್ತದೆ. ಸಾತತ್ಯ ಎಂದಾಕ್ಷಣ ಅದು ಒಮ್ಮುಖ ಆಗಿಯೇ ಇರಬೇಕಾಗಿಲ್ಲ. ಪ್ರತಿಮುಖಿಯೂ (ಮುಖಾಮುಖಿಯೂ) ಆಗಬಹುದು. ಜ್ಞಾನಕ್ಷೇತ್ರದಲ್ಲಿ ಅಂಥ ನಿದರ್ಶನಗಳು ಉದ್ದಕ್ಕೂ ಕಾಣುತ್ತವೆ. ಮೀಮಾಂಸಕರಾದ ಗುರು ಕುಮಾರಿಲ ಭಟ್ಟ ಮತ್ತು ಶಿಷ್ಯ ಪ್ರಭಾಕರರ ಭಿನ್ನ ಸಿದ್ಧಾಂತಗಳು ವೈದಿಕ ಮತ್ತು ಸಾಹಿತ್ಯಕ ಸಂವಾದ ಸಂದರ್ಭದಲ್ಲಿ ಪ್ರಸಿದ್ಧವಾದದ್ದೆ. ವಿಶಾಲವಾದ ನೆಲೆಯಲ್ಲಿ ನೋಡಿದರೆ ದರ್ಶನ ಮತ್ತು ಧರ್ಮ ಚಿಂತನೆಗಳು ಪ್ರತಿಮುಖ ಪರಂಪರೆಯಲ್ಲಿ ಸಾಗಿ ಬಂದದ್ದನ್ನು ಕಾಣುತ್ತೇವೆ. ಮೂಲ ವಿಜ್ಞಾನದ ದಾರಿಯಲ್ಲಿ ಕೂಡ ಇಂಥ ಕುರುಹುಗಳಿವೆ.
ಇಂಥ ಭಿನ್ನ ದನಿಗಳು ವಿದ್ವೇಷದ ಹಂತಕ್ಕೆ ತಲುಪಬಾರದು ಎನ್ನುವ ಕಳಕಳಿಯೂ ಈ ಉಪನಿಷನ್ಮಂತ್ರದಲ್ಲಿದೆ (ಮಾ ವಿದ್ವಿಷಾವಹೈ). ‘ವಿದ್ಯಾಗ್ರಹಣದ ಹಂತದಲ್ಲಿ ಶಿಕ್ಷಕ ಅಥವಾ ಶಿಷ್ಯನ ತಪ್ಪಿನಿಂದಾಗಿ ವ್ಯಾಸಂಗಕ್ಕೆ ಅನ್ಯಾಯ ಸಂಭವಿಸಬಹುದು. ಆದರೂ ಅದು ಅವರಲ್ಲಿ ಒಬ್ಬ ಮತ್ತೊಬ್ಬನನ್ನು ದ್ವೇಷಿಸುವುದಕ್ಕೆ ಕಾರಣವಾಗಬಾರದು’ ಎನ್ನುವ ವಿವರಣೆ ಶಂಕರ ಭಾಷ್ಯದಲ್ಲಿದೆ. ಅದು ಭಿನ್ನ ವಿಚಾರಗಳ ಸಾಮರಸ್ಯಕ್ಕೆ ಆಸ್ಪದ ಆಗಿರಬೇಕೆನ್ನುವ ಆಶಯ ಅದಕ್ಕಿದೆ.

Team Newsnap
Leave a Comment
Share
Published by
Team Newsnap

Recent Posts

ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ

2015ರಲ್ಲಿ ಶಿಲ್ಪಾ ಎಂಬುವವರ ಜೊತೆ ಮದುವೆಯಾಗಿದ್ದ ನಟ ಚಂದು ತ್ರಿನಯನಿ ಸೀರಿಯಲ್​ನಲ್ಲಿ ಅಭಿನಯಿಸಿದ್ದ ತೆಲುಗು ನಟ ಚಂದು ನಟಿ ಪವಿತ್ರ… Read More

May 18, 2024

SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ

ಬೆಂಗಳೂರು : ಶಿಕ್ಷಣ ಸಚಿವ ಮಧು ಬಂಗಾರಪ್ಪ , ಮುಂದಿನ ವರ್ಷದಿಂದ SSLC ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳನ್ನು ನೀಡಲಾಗುವುದಿಲ್ಲ ಎಂದು… Read More

May 17, 2024

ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

ಬೆಂಗಳೂರು : ಆನೇಕಲ್ ತಾಲೂಕಿನ ಚಂದಾಪುರ ಸಮೀಪದ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಅರಸೀಕೆರೆ ಮೂಲದ ಕರಡಿಹಳ್ಳಿ… Read More

May 17, 2024

ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮನವಿ ಮೇರೆಗೆ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ಬಜೆಟ್‌ನಲ್ಲಿ ಘೋಷಣೆ… Read More

May 16, 2024

ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ

ಬೆಂಗಳೂರು : ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣಗೆ ಮಧ್ಯಂತರ ಜಾಮೀನು ಮಂಜೂರಾಗಿದೆ. ಈ ಪ್ರಕರಣದಲ್ಲಿ… Read More

May 16, 2024

ಹಾಸನ : ಮೀನು ಹಿಡಿಯಲು ಹೋಗಿದ್ದ ಒಂದೇ ಗ್ರಾಮದ 4 ಮಕ್ಕಳು ಜಲ ಸಮಾಧಿ

ಹಾಸನ : ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ನಾಲ್ಕು ಮಕ್ಕಳು ಜಲ ಸಮಾಧಿ ಆದ ಘಟನೆ ಆಲೂರು ತಾಲೂಕಿನ, ತಿಮ್ಮನಹಳ್ಳಿ… Read More

May 16, 2024