December 23, 2024

Newsnap Kannada

The World at your finger tips!

WhatsApp Image 2022 06 14 at 9.55.52 AM

Lighter issue- bad men assult women in front of husband

ಲೈಟರ್ ವಿಚಾರ– ಮಹಿಳೆ ಜುಟ್ಟು ಎಳೆದಾಡಿ, ಪತಿ ವಿವಸ್ತ್ರಗೊಳಿಸಿ ಮಾರಣಾಂತಿಕ ಹಲ್ಲೆ ನಡೆಸಿದ ಪುಂಡರು

Spread the love

ಲೈಟರ್ ವಿಚಾರಕ್ಕೆ ಜಗಳ ಆಡಿದ ಪುಂಡರು ಮಹಿಳೆಯ ಜುಟ್ಟು ಹಿಡಿದು ಎಳೆದಾಡಿ, ಆಕೆಯ ಪತಿಯನ್ನು ವಿವಸ್ತ್ರಗೊಳಿಸಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಮೈಸೂರು ಜಿಲ್ಲೆ ಟಿ.ನರಸೀಪುರದ ತಿಬ್ಬಾದೇವಿ ಕಾಫಿ ಡೇ ಶಾಪ್‍ನಲ್ಲಿ ನಡೆದಿದೆ.

police 1

ಇದನ್ನು ಓದಿ ಬೆಂಗಳೂರು ಡ್ರಗ್ಸ್ ಪಾರ್ಟಿ ಪ್ರಕರಣ ಸಿದ್ಧಾಂತ್​ ಕಪೂರ್​ ಡ್ರಗ್ಸ್​ ಸೇವನೆ ದೃಢ : ಮಾಲೀಕರಿಗೆ ನೋಟಿಸ್

ರಮೇಶ್ ಮತ್ತು ಶೋಭಾ ಹಲ್ಲೆಗೊಳಗಾದ ದಂಪತಿ ಟಿ.ನರಸೀಪುರದಲ್ಲಿ ಟೀ ಹಾಗೂ ಜ್ಯೂಸ್ ಅಂಗಡಿ ನಡೆಸುತ್ತಿದ್ದಾರೆ.

ಮೊನ್ನೆ ರಾತ್ರಿ ಲೈಟರ್ ತೆಗೆದುಕೊಳ್ಳಲು ಬಂದ ಇಬ್ಬರು ಯುವಕರು ಲೈಟರ್‌ಗೆ 20 ರೂಪಾಯಿ ಕೊಡಲು ಹಿಂದೇಟು ಹಾಕಿ, ನಿಮ್ಮ ಅಂಗಡಿಯಲ್ಲಿ ಲೈಟರ್ ರೇಟ್ ಜಾಸ್ತಿ ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದರು

ನಂತರ ಕೋಪಗೊಂಡ ರಮೇಶ್ ಏರು ಧ್ವನಿಯಲ್ಲೇ ಬೇಕಾದರೆ ತೆಗೆದುಕೊಳ್ಳಿ ಇಲ್ಲವಾದರೆ ಬೇರೆ ಅಂಗಡಿಗೆ ಹೋಗಿ ಎಂದಿದ್ದಾರೆ.

ರೊಚ್ಚಿಗೆದ್ದ ಯುವಕರು ರಮೇಶ್ ಪತ್ನಿ ಶೋಭಾ ಕೂದಲು ಎಳೆದು ಗಲಾಟೆ ಮಾಡಿದ್ದಾರೆ. ಆಗ ಶೋಭಾ ಏಕಾಂಗಿಯಾಗಿ ಯುವಕರನ್ನು ಹೊಡೆದು ಓಡಿಸಿದ್ದಾರೆ.

ಬೆಳಗ್ಗೆ ಮತ್ತೆ ಸ್ನೇಹಿತರೊಟ್ಟಿಗೆ ಬಂದ ಇಬ್ಬರು ಯುವಕರು. ಕಬ್ಬಿಣದ ರಾಡ್ ಹಿಡಿದು ಬಂದು ಹಲ್ಲೆ ಮಾಡಿ ಅಂಗಡಿಯಲ್ಲಿದ್ದ ಸಾಮಾನುಗಳನ್ನು ಒಡೆದು ಹಾಕಿದ್ದಾರೆ.

ಏಕಾಏಕಿ ರಮೇಶ್ ಅವರನ್ನು ಅಂಗಡಿಯಿಂದ ಎತ್ತಿಕೊಂಡು ಹೋಗಿ ವಿವಸ್ತ್ರಗೊಳಿಸಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.

ಯುವಕರ ಗುಂಪಿನ ವಿರುದ್ಧ ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Copyright © All rights reserved Newsnap | Newsever by AF themes.
error: Content is protected !!