January 11, 2025

Newsnap Kannada

The World at your finger tips!

deepa1

ಸಿನಿಕತನದಿಂದ ದೂರವಾಗೋಣ..

Spread the love

FACEBOOK, TWITTER, WATSAPP, INSTAGRAM ಇತ್ಯಾದಿ SOCIAL MEDIA ಗಳು,
ನಮ್ಮ ಜ್ಞಾನವನ್ನು ಹೆಚ್ಚಿಸಲಿ,

ನಮ್ಮ ಮನೋಭಾವವನ್ನು ವಿಶಾಲಗೊಳಿಸಲಿ,

ನಮ್ಮ ಸಂಬಂಧಗಳನ್ನು ಬೆಸೆಯಲಿ,

ನಮ್ಮ ಆತ್ಮೀಯತೆಯನ್ನು ಗಾಢವಾಗಿಸಲಿ,

ನಮ್ಮ ಸಂಪರ್ಕಗಳನ್ನು ವಿಸ್ತರಿಸಲಿ,

ನಮ್ಮ ನೋವುಗಳನ್ನು ಕಡಿಮೆಗೊಳಿಸುವ ಔಷಧಿಯಾಗಲಿ,

ನಮ್ಮ ಸಂತೋಷ ಹೆಚ್ಚಿಸುವ ಸಾಧನವಾಗಲಿ,

ನಮ್ಮ ಪ್ರತಿಭೆ ಅನಾವರಣಗೊಳಿಸುವ ವೇದಿಕೆಯಾಗಲಿ,

ನಮ್ಮ ಕಲಿಕೆಯ ತಾಣಗಳಾಗಲಿ,

ನಮ್ಮ ನೆನಪುಗಳನ್ನು ಹಂಚಿ ಕೊಳ್ಳುವ ಸ್ಹೇಹಿತರ ಕೂಟವಾಗಲಿ,

ನಾವು ಬೆಳೆಯುವ ಅನುಭವ ಮಂಟಪಗಳಾಲಿ,

ಆ ಮುಖಾಂತರ,…..

ನಮ್ಮಲ್ಲಿ ಸಮಾನತೆಯ ಭಾವ ಬಿತ್ತಲಿ,

ನಮ್ಮಲ್ಲಿ ಸಾಮಾಜಿಕ ಪ್ರಜ್ಞೆ ಮೂಡಿಸಲಿ,

ನಮ್ಮಲ್ಲಿನ ಮೌಡ್ಯ ತೊಲಗಿಸಲಿ,

ನಮ್ಮಲ್ಲಿನ ಆತ್ಮಸಾಕ್ಷಿಯನ್ನು ಬಡಿದೆಬ್ಬಿಸಲಿ,

ನಮ್ಮನ್ನು ವಿಶ್ವಮಾನವತೆಯೆಡೆಗೆ ಮುನ್ನಡೆಸಲಿ,

SOCIAL SMART CITY
ನಿರ್ಮಾಣವಾಗಲು ಇವು ಪ್ರೇರಣೆಯಾಗಲಿ.

ಇದೊಂದು ಅತ್ಯುತ್ತಮ ಅವಕಾಶವೆಂದು ಪರಿಗಣಿಸಿ,

ನಮ್ಮೆಲ್ಲರಲ್ಲೂ ನಾಗರಿಕ ಪ್ರಜ್ಞೆ ಬೆಳೆಸಿಕೊಳ್ಳಲು ಇದನ್ನು ಉಪಯೋಗಿಸಿಕೊಳ್ಳೋಣ,

ಸಿನಿಕತನದಿಂದ ದೂರವಾಗೋಣ,

ಅನಾವಶ್ಯಕ ಗೊಂದಲ ಗಲಭೆಗಳಿಗೆ ಆಸ್ಪದ ಕೊಡದೆ ಭದ್ರ ಮತ್ತು ನೆಮ್ಮದಿಯ ಬದುಕು ರೂಪಿಸಿಕೊಳ್ಳವ ವೇದಿಕೆಯಾಗಿಸೋಣ.

ಅದಕ್ಕಾಗಿ ಎಲ್ಲರ ಸಹಕಾರ ನಿರೀಕ್ಷಿಸುತ್ತಾ……..

  • ವಿವೇಕಾನಂದ ಎಚ್ ಕೆ
Copyright © All rights reserved Newsnap | Newsever by AF themes.
error: Content is protected !!