February 21, 2026

Newsnap Kannada

The World at your finger tips!

jaya mruthyjaya swami

ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆಯಾಗಲಿ: ಸ್ವಾಮೀಜಿ

Spread the love

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನಿರ್ಭಯ ಕಾನೂನು ಬಳಸಿ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ಅಭಿಪ್ರಾಯಪಟ್ಟರು.


ಕೊಡಗಿನ ಕೋಡ್ಲಿಪೇಟೆಯಲ್ಲಿ ವರದಿಗಾರರೊಂದಿಗೆ ಸ್ವಾಮೀಜಿ ಮಾತನಾಡಿ, ಮೈಸೂರಿನ ಚಾಮುಂಡಿದೇವಿಯ ತಪ್ಪಲಿನಲ್ಲಿ ಸಾಮೂಹಿಕ ಅತ್ಯಾಚಾರ ಘಟನೆ ನಡೆದಿರುವುದು ಅಪಮಾನ. ಇದರಿಂದ ಕರ್ನಾಟಕದ ನೈತಿಕತೆ ತಲೆತಗ್ಗಿಸುವಂತಾಗಿದೆ ಎಂದರು.


ನಿರ್ಭಯ ಕಾನೂನನ್ನು ರಾಜ್ಯದಲ್ಲಿ ಮತ್ತುಷ್ಟು ಬಿಗಿಗೊಳಿಸಬೇಕು. ರಾಜ್ಯದಲ್ಲಿ ಭಯದ ವಾತಾವರಣ ಇಲ್ಲದಂತಿತ್ತು. ಆದರೆ ಈಗ ವಿದ್ಯಾರ್ಥಿಗಳು, ಮಹಿಳೆಯರು ಭಯದಲ್ಲಿ ಓಡಾಡುಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.


ರಾಜ್ಯ ಸರ್ಕಾರ ಮಹಿಳೆಯರಿಗೆ ರಕ್ಷಣೆ ಕೊಡುವ ಕಾನೂನು ಜಾರಿ ಮಾಡಬೇಕೇ ಹೊರತು ಅವರ ಸ್ವಾತಂತ್ರ್ಯ ಮೊಟಕು ಮಾಡುವ ಕಾನೂನು ಬೇಡ ಎಂದು ಜಯ ಮೃತ್ಯುಂಜಯ ಸ್ವಾಮೀಜಿ ಕಿವಿಮಾತು ಹೇಳಿದರು.

error: Content is protected !!