ಕೃಷ್ಣನ ಭಕ್ತರಿಗೆ 40 ಸಾವಿರ ಚಕ್ಕುಲಿ, 80 ಸಾವಿರ ಉಂಡೆ ಸಿದ್ಧ

Team Newsnap
1 Min Read

ನಾಳೆಯಿಂದ ಎರಡು ದಿನಗಳ ಕಾಲ ಉಡುಪಿಯಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಸರಳವಾಗಿ ಆಚರಿಸಲು ಸಿದ್ಧತೆ ನಡೆದಿದೆ. ಭಕ್ತರಿಗೆ ಪ್ರಸಾದವಾಗಿ ವಿತರಿಸಲು 40 ಸಾವಿರ ಚಕ್ಕುಲಿ ಮತ್ತು 80 ಸಾವಿರ ನಾನಾ ರೀತಿಯ ಉಂಡೆಗಳನ್ನು ತಯಾರಿಸಲಾಗಿದೆ.

udupi 1


ಕೊರೊನಾ ಹಿನ್ನೆಲೆಯಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದೆ ಎಂದು ಪರ್ಯಾಯ ಅದಮಾರು ಮಠದ ಮೂಲಗಳು ಹೇಳಿವೆ.
ಧಾರ್ಮಿಕ ವಿಧಿ-ವಿಧಾನಗಳು ಪ್ರತಿ ವರ್ಷದಂತೆ ನಡೆಯಲಿದೆ. ಆ. 30 ರ ಬೆಳಗ್ಗೆಯಿಂದಲೇ ಭಕ್ತರು ಉಪವಾಸ ವ್ರತದಲ್ಲಿರುತ್ತಾರೆ. ಮಧ್ಯರಾತ್ರಿ 12.17 ಕ್ಕೆ ಶ್ರೀ ಕೃಷ್ಣನಿಗೆ ಅರ್ಘ್ಯ ಪ್ರದಾನ ಮಾಡಲಾಗುತ್ತೆ.

31 ರಂದು ರಥ ಬೀದಿಯಲ್ಲಿ ಶ್ರೀ ಕೃಷ್ಣನ ಲೀಲೋತ್ಸವ ನಡೆಯಲಿದೆ.
ರಥ ಬೀದಿಯಲ್ಲಿ ಗೊಲ್ಲ ವೇಷಧಾರಿಗಳು ಮಡಕೆ ಒಡೆಯಲಿದ್ದಾರೆ. ಕೃಷ್ಣ ಲೀಲೋತ್ಸವ ಕಾರ್ಯಕ್ರಮಕ್ಕೆ ರಥಬೀದಿಗೆ ಭಕ್ತರಿಗೆ ಪ್ರವೇಶ ಇಲ್ಲ ಎಂದು ಜಿಲ್ಲಾಡಳಿತ ಹೇಳಿದೆ.
ಕೃಷ್ಣ ಮಠ, ಪರ್ಯಾಯ ಅದಮಾರು ಮಠ ಹಾಗೂ ಅಷ್ಟ ಮಠಗಳ ಸ್ವಾಮೀಜಿ ಮತ್ತು ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ.

Share This Article
Leave a comment